ಬೆಂಗಳೂರು : ಹಂಗಾಮಿ ಸ್ಪೀಕರ್ ಕೆ ಜೆ ಬೋಪಯ್ಯ ಅವರು 4 ನೇ ಬಾರಿ ವಿಧಾನಸಭೆಗೆ ಆಯ್ಕೆಯಾದವರು. ಸ್ಪೀಕರ್‌ ಆಗಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಅಷ್ಟೇ ಅಲ್ಲಾ ಗೊಂದಲಗಳ ಮಧ್ಯೆ ಕೂಡ ಅತ್ಯಂತ ಯಶಸ್ವಿಯಾಗಿ ವಿಧಾನಸಭೆಯ ಕೆಲಸಮಾಡಿದ್ದಾರೆ.

ಕಾಂಗ್ರೆಸ್‌ನ ಮಾನಸಿಕತೆ ಅರ್ಥವಾಗುತ್ತಿಲ್ಲ, ಯಾಕಷ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ಸಿಗರ ಮಾನಸಿಕ ಕೀಳರಿಮೆಯಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ.

ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ . 5 ವರ್ಷ ಸರ್ಕಾರ ನಡೆಸಿ ಕೇವಲ 78 ಸೀಟ್ ಗಳಿಸಿದ್ದಾರೆ. ಸಂವಿಧಾನ ಬದ್ಧವಾಗಿ ಅಧಿಕಾರ ಸ್ವೀಕಾರ ಮಾಡಿದ ಸ್ಪೀಕರ್ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಈ ಆಕ್ಷೇಪಕ್ಕೆ ಕಾರಣ ನಾವು ಬಲ್ಲೆವು. ಸದನವನ್ನು ಎದರಿಸುವ ಧೈರ್ಯ ಇಲ್ಲ ಅವರಿಗೆ, ತಮ್ಮ ಪಕ್ಷದ ಶಾಸಕರು ಅವರ ಜೊತೆ ಇರ್ತಾರೋ ಇಲ್ಲವೋ ಎಂಬ ಭಯ ಕಾಡ್ತಿದೆ. ಸ್ವತಃ ಕಾಂಗ್ರೆಸ್ ಶಾಸಕರು ಹತಾಶರಾಗಿದ್ದಾರೆ. ಅವರನ್ನು ಕೆಟ್ಟದಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಆರೋಗ್ಯ ಸರಿಯಿಲ್ಲದವರನ್ನೂ ಕೂಡಿಹಾಕೊಂಡು ಹಿಂಸೆ ನೀಡುತ್ತಿದ್ದಾರೆ ಎಂದು ಶೋಭಾ ಕೈ ಪಾಳಯದ ವಿರುದ್ಧ ಕಿಡಿಕಾರಿದರು.

ನಂತರ ನಾಳೆ ನೂತನ ಸ್ಪೀಕರ್ ಬೊಪಯ್ಯಅವರು ವಿಧಾನಮಂಡಲದ ಅಧಿವೇಶನದಲ್ನಲಿ ವಿಶ್ವಾಸ ಮತಯಾಚನೆಯ ವಿಚಾರದಲ್ಲಿಯೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಅನ್ನೋ ನಂಬಿಕೆ ಇದೆ ಎಂದರು. ಜೊತೆಗೆ 120ಕ್ಕೂ ಹೆಚ್ಚು ಜನ ಶಾಸಕರು ಭಾರತೀಯ ಜನತಾಪಾರ್ಟಿ ಬೆಂಬಲಕ್ಕೆ ಇರ್ತಾರೆ ಅನ್ನೋ ವಿಶ್ವಾಸವಿದೆ ಎಂದರು.

ಇನ್ನು ಈ ದೇಶದಲ್ಲಿ ಹೆಚ್ಚು ರಾಜ್ಯಗಳನ್ನು ಗೆದ್ದ ನಾಯಕರುಗಳು ಮತ್ತು ವಿಶ್ವದಲ್ಲಿಯೇ ದೇಶವನ್ನು ಶ್ರೇಷ್ಠ ಮಟ್ಟದಲ್ಲಿ ಮಾತನಾಡುವಂತೆ ಮಾಡಿದ ಧೀಮಂತ ವ್ಯಕ್ತಿಗಳಾದ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರನ್ನು ಹಿಟ್ಲರ್,ಗಡಾಫಿಗೆ ಹೋಲಿಸಿ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್ಸಿನವರಿಗೆ ಶೋಭೆ ತರುವುದಿಲ್ಲ ಎಂದ ಅವರು, ಎಲ್ಲಾ ರಾಜ್ಯಗಳನ್ನು ಕಳೆದುಕೊಂಡು ಈಗ ಈ ರೀತಿ ಮಾತನಾಡ ಬಾರದು ನಮ್ಮ ಪಕ್ಷ ಮತ್ತು ನಾಯಕರ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದು ಗುಡುಗಿದ್ದಾರೆ.

Please follow and like us:
0
http://bp9news.com/wp-content/uploads/2018/05/77216-ochcjrlkfm-1513953787-1.jpghttp://bp9news.com/wp-content/uploads/2018/05/77216-ochcjrlkfm-1513953787-1-150x150.jpgBP9 Bureauಪ್ರಮುಖರಾಜಕೀಯShobha Shouting: Congress is working on finding stone in mosque !!!ಬೆಂಗಳೂರು : ಹಂಗಾಮಿ ಸ್ಪೀಕರ್ ಕೆ ಜೆ ಬೋಪಯ್ಯ ಅವರು 4 ನೇ ಬಾರಿ ವಿಧಾನಸಭೆಗೆ ಆಯ್ಕೆಯಾದವರು. ಸ್ಪೀಕರ್‌ ಆಗಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಅಷ್ಟೇ ಅಲ್ಲಾ ಗೊಂದಲಗಳ ಮಧ್ಯೆ ಕೂಡ ಅತ್ಯಂತ ಯಶಸ್ವಿಯಾಗಿ ವಿಧಾನಸಭೆಯ ಕೆಲಸಮಾಡಿದ್ದಾರೆ. ಕಾಂಗ್ರೆಸ್‌ನ ಮಾನಸಿಕತೆ ಅರ್ಥವಾಗುತ್ತಿಲ್ಲ, ಯಾಕಷ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ಸಿಗರ ಮಾನಸಿಕ ಕೀಳರಿಮೆಯಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ . 5 ವರ್ಷ ಸರ್ಕಾರ...Kannada News Portal