ಸಿನಿಮಾ ಟಾಕ್ : ಬಾಲಿವುಡ್​ ನ  ಡಿಂಪಲ್​ ಕ್ವೀನ್​ ಕನ್ನಡತಿ ನಟಿ ದೀಪಿಕಾ ಪಡುಕೋಣೆ ಕಂಡ್ರೆ ಬೆಚ್ಚಿ  ಬೀಳುತ್ತಿದೆ ಬಿ ಟೌನ್​.  ಸ್ಯಾಂಡಲ್​ವುಡ್​ನಿಂದಿಡಿದೂ ಬಾಲಿವುಡ್​, ಹಾಲಿವುಡ್​ ತನಕವೂ ತನ್ನ ಅಭಿನಯ ಚಮತ್ಕಾರದಿಂದ ಮೋಡಿ ಂಆಡಿರುವ ದೀಪೀಕಾ ಪಡುಕೋಣೆಗೆ ಬಾಲಿವುಡ್​ನಲ್ಲಿ ಬಹಹು ಬೇಡಿಕೆ.  ಚಿಕ್ಕ ವಯಸ್ಸಿಗೇ ಇಡೀ ಸಿನಿ ಇಂಡಸ್ಟ್ರಿಯನ್ನೇ ಆಳಿದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆದರೆ ದೀಪಿಕಾ ಪಡುಕೋಣೆ ಮೇಲೆ ಅಲ್ಲಿನ ನಿರ್ದೇಶಕರು ಆರೋಪ ಮಾಡುತ್ತಿದ್ದಾರೆ.  ಬಾಲಿವುಡ್​ನ ನಿರ್ದೇಶಕರು ದೀಪಿಕಾಳನ್ನು ಕಾಲ್​ಶೀಟ್​  ಕೇಳಲು ಸ್ವಲ್ಪ ಹೆದರಿ ಹಿಂದೇಟು ಹಾಕುತ್ತಿದ್ದಾರಂತೆ. ಅದಕ್ಕೆ ಕಾರಣ ಡಿಂಪಿ  ಹಾಕೋ ಷರತ್ತುಗಳು. ಅವಳು ಹಾಕೋ ಕಂಡೀಷನ್​ಗೆ ಹವಾಕ್ಕಾಗಿದ್ಬಿದಾರೆ  ಬಿ ಟೌನ್​ ಡೈರೆಕ್ಟರ್ಸ್​. 

 ಸಿಕ್ಕಾಪಟ್ಟೆ ಡಿಮ್ಯಾಂಡ್​ ಇಟ್ಟಿದ್ದಾರೆ ಡಿಂಪಿ. ಬಾಲಿವುಡ್​ನ ಟಾಪ್​ ಹೀರೋಯಿನ್​ಗಳಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಾಯಕಿ ಅಂದ್ರೆ ಅದು   ದೀಪಿಕಾ ಪಡುಕೋಣೆ. ಈಗ ಮತ್ತಷ್ಟು ಕಂಡೀಷನ್​ ಹಾಕಿ ನಿರ್ದೇಶಕರನ್ನ ಅಚ್ಚರಿಗೊಳಿಸಿದ್ದಾರೆ.  ಶಾರೂಖ್​ ಮತ್ತು ಸಲ್ಮಾನ್​ ಖಾನ್​ ರು ತೆಗೆದುಕೊಳ್ಳುವಷ್ಟು ಸಂಭಾವನೆ ನನಗೂ  ಬೇಕು ಎನ್ನುತ್ತಿದ್ದಾರಂತೆ. ನಮ್ಮ ಸಿನಿಮಾ ಗಳು ಸಿಕ್ಕಾಪಟ್ಟೆ ದುಡ್ಡು ಮಾಡುತ್ತಿವೆ, ಅದಕ್ಕೆ ತಕ್ಕ ಸಂಭಾವನೆ ಕೇಳುವುದರಲ್ಲಿ ಏನು ತಪ್ಪು ಎನ್ನುತ್ತಿದ್ದಾರೆ ಬಾಲಿವುಡ್​ ಕ್ವೀನ್​.

 ಪದ್ಮಾವತ್​ ಸಿನಿಮಾ ಮೂಲಕ ಮತ್ತಷ್ಟು ತನ್ನ ಪಾಕೆಟ್​ ಅನ್ನು ಗಟ್ಟಿ ಮಾಡಿಕೊಂಡ ಶ್ರೀಮಂತ ತಾರೆ ದೀಪಿಕಾ ಪಡುಕೋಣೆ. ಪದ್ಮಾವತ್​ ಸಿನಿಮಾಗಾಗಿ ಅವರು ಪಡೆದುಕೊಂಡ ಸಂಭಾವನೆ ಮೊತ್ತ 10 ಕೋಟಿ ಅಂತೆ.

ಇನ್ನೂ ಇದಕ್ಕಿಂತ ಸಂಭಾವನೆ ಬೇಕು ಅಂತಾ ಪಟ್ಟು  ಹಿಡಿದಿದ್ದಾರೆ. ಅಂದ ಹಾಗೇ ಬಾಲಿವುಡ್​ ಕಿಂಗ್​ ಖಾನ್​, ಶಾರುಖ್​, ಸೂಪರ್​ ಸ್ಟಾರ್​ ಸಲ್ಮಾನ್​ ಪಡೆಯುವ ಸಂಭಾವನೆ 40 ರಿಂದ 50 ಕೋಟಿ ಇರುತ್ತದೆ ಅನ್ನೋ ಮಾಹಿತಿ ಇದೆ. ದೀಪಿಕಾ ನಟಿಸೋ ಸಿನಿಮಾ ನೂರಾರು ಕೋಟಿ ಬಾಚಿಕೊಳ್ಳುತ್ತಿದೆ.  ಸದ್ಯ ಅವಳು ಂಆಡಿರೋ ಡಿಮ್ಯಾಂಡ್​ಗೆ  ಕೆಲ ಸ್ಟಾರ್​ಗಳು ಸಾಥ್​ ನೀಡುತ್ತಿದ್ದಾರೆ.

ಸದ್ಯ ಬಾಲಿವುಡ್​  ಅಂಗಳದಲ್ಲಿ  ಡಿಮ್ಯಾಂಡ್​  ಕ್ರಿಯೇಟ್​   ಮಾಡ್ತಿದ್ದಾರೆ ಕನ್ನಡದ ಡಿಂಪಿ. ದೀಪಿಕಾ ಸಂಭಾವನೆಯ ಬೇಡಿಕೆಯ ವಿಚಾರವಾಗಿ ಬಾರಿ ಚರ್ಚೆಗಳಾಗುತ್ತಿರುವುದಂತೂ ಸತ್ಯ.

Please follow and like us:
0
http://bp9news.com/wp-content/uploads/2018/06/Beautiful-Eye-Makeup-Tutorial-Inspired-By-Deepika-Padukone.jpghttp://bp9news.com/wp-content/uploads/2018/06/Beautiful-Eye-Makeup-Tutorial-Inspired-By-Deepika-Padukone-150x150.jpgBP9 Bureauಸಿನಿಮಾಸಿನಿಮಾ ಟಾಕ್ : ಬಾಲಿವುಡ್​ ನ  ಡಿಂಪಲ್​ ಕ್ವೀನ್​ ಕನ್ನಡತಿ ನಟಿ ದೀಪಿಕಾ ಪಡುಕೋಣೆ ಕಂಡ್ರೆ ಬೆಚ್ಚಿ  ಬೀಳುತ್ತಿದೆ ಬಿ ಟೌನ್​.  ಸ್ಯಾಂಡಲ್​ವುಡ್​ನಿಂದಿಡಿದೂ ಬಾಲಿವುಡ್​, ಹಾಲಿವುಡ್​ ತನಕವೂ ತನ್ನ ಅಭಿನಯ ಚಮತ್ಕಾರದಿಂದ ಮೋಡಿ ಂಆಡಿರುವ ದೀಪೀಕಾ ಪಡುಕೋಣೆಗೆ ಬಾಲಿವುಡ್​ನಲ್ಲಿ ಬಹಹು ಬೇಡಿಕೆ.  ಚಿಕ್ಕ ವಯಸ್ಸಿಗೇ ಇಡೀ ಸಿನಿ ಇಂಡಸ್ಟ್ರಿಯನ್ನೇ ಆಳಿದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಮೇಲೆ ಅಲ್ಲಿನ ನಿರ್ದೇಶಕರು ಆರೋಪ ಮಾಡುತ್ತಿದ್ದಾರೆ.  ಬಾಲಿವುಡ್​ನ...Kannada News Portal