ಬೆಂಗಳೂರು: ಮೋದಿಗೆ ಕೃಷ್ಣಮಠಕ್ಕೆ ಬೇಟಿ ನೀಡುವುದು ಬೇಡ ಎಂದು ವಿಷೇಶ ಭದ್ರತಾ ಪಡೆ (SPG ) ತಿಳಿಸಿತ್ತು. ಅವರಿಗೆ ಅಲ್ಲಿ ಜೀವ ಬೆದರಿಕೆ ಇದ್ದ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಹೋಗಲಿಲ್ಲ ಎಂದು ಮಾಧ್ಯಮದ ಮುಂದೆ ಇದೀಗ ಸಂಸದೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ.

ಇದು ನಿಜಕ್ಕೂ ಆತಂಕಕಾರಿಯಾದ ವಿಷಯವಾಗಿದ್ದು, ಹಿಂದೂ ದೇವಾಲಯವಾಗಿರುವ ಶ್ರೀಕೃಷ್ಣ ಮಠದಲ್ಲಿ ಅಷ್ಟೊಂದು ಜೀವ ಭಯ ಇರಲು ಕಾರಣವಾದರೂ ಏನು ಎಂಬ ಪ್ರಶ್ನೆಗೆ ಶೋಭ ಕರಂದ್ಲಾಜೆ ಉತ್ತರ ನೀಡಲಿಲ್ಲ. ಆದರೆ ಇದೊಂದು ವಿಷಯದಲ್ಲಿ ಹೆಚ್ಚಿಗೆ ಮಾಹಿತಿ ಕೇಳ ಬೇಡಿ. ನಮಗೆ ನಮ್ಮ ನಾಯಕರ ಜೀವವೇ ಮುಖ್ಯ ಎಂದಿದ್ದಾರೆ.

ಪೇಜಾವರ ಶ್ರೀಗಳು :

ಆದರೆ ಇದಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡಿರುವ ಪೇಜಾವರ ಶ್ರೀಗಳು ಮಠಕ್ಕೆ ಭೇಟಿ ನೀಡಲು ಯಾವುದೇ ಜೀವ ಬೆದರಿಕೆ ಇರಲಿಲ್ಲ. ಪೊಲೀಸರು ಅದಕ್ಕೆ ಬೇಕಾದ ಭದ್ರತೆ ಏರ್ಪಾಡು ಮಾಡಿದ್ದರು. ಅದರೂ ಬಂದಿಲ್ಲ. ಹೀಗೇಕೆ ಮಾಡಿದ್ರೂ ಎಂಬುದು ನನಗೆ ಗೊತ್ತಾಗಲಿಲ್ಲ ಎಂದು ಅವರು ಸುದ್ದಿಗಾರರ ಜೊತೆ ತಿಳಿಸಿದ್ದಾರೆ.

ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯ ಬಳಿಕ ಮೊದಲ ಬಾರಿ ಆಗಮಿಸಿದ್ದ ನರೇಂದ್ರ ಮೋದಿ ಚಾಮರಾಜನಗರ, ಉಡುಪಿ, ಚಿಕ್ಕೋಡಿಯಲ್ಲಿ ಪಕ್ಷದ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೃಷ್ಣಮಠಕ್ಕೆ ಭೇಟಿ ನೀಡದೆ ದೆಹಲಿಯತ್ತ ಮುಖ ಮಾಡಿದ ಮೋದಿ ವಿರುದ್ಧ ಪೇಜಾವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

Please follow and like us:
0
http://bp9news.com/wp-content/uploads/2018/05/modi-pejavara-sri-shobha-1.jpghttp://bp9news.com/wp-content/uploads/2018/05/modi-pejavara-sri-shobha-1-150x150.jpgPolitical Bureauಉಡುಪಿಪ್ರಮುಖರಾಜಕೀಯShocking bomb blasts: Modi in life in Udupi Krishnamatraಬೆಂಗಳೂರು: ಮೋದಿಗೆ ಕೃಷ್ಣಮಠಕ್ಕೆ ಬೇಟಿ ನೀಡುವುದು ಬೇಡ ಎಂದು ವಿಷೇಶ ಭದ್ರತಾ ಪಡೆ (SPG ) ತಿಳಿಸಿತ್ತು. ಅವರಿಗೆ ಅಲ್ಲಿ ಜೀವ ಬೆದರಿಕೆ ಇದ್ದ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಹೋಗಲಿಲ್ಲ ಎಂದು ಮಾಧ್ಯಮದ ಮುಂದೆ ಇದೀಗ ಸಂಸದೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ. ಇದು ನಿಜಕ್ಕೂ ಆತಂಕಕಾರಿಯಾದ ವಿಷಯವಾಗಿದ್ದು, ಹಿಂದೂ ದೇವಾಲಯವಾಗಿರುವ ಶ್ರೀಕೃಷ್ಣ ಮಠದಲ್ಲಿ ಅಷ್ಟೊಂದು ಜೀವ ಭಯ ಇರಲು ಕಾರಣವಾದರೂ ಏನು ಎಂಬ ಪ್ರಶ್ನೆಗೆ ಶೋಭ ಕರಂದ್ಲಾಜೆ ಉತ್ತರ...Kannada News Portal