ಬೆಂಗಳೂರು : ಅಂಡರ್‌ ವರ್ಲ್ಡ್ ಡಾನ್‌ ಅರುಣ್‌ ಗೌಳಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಸಿದ್ಧಾಂತಗಳ ಪರಿಕಲ್ಪನೆಯನ್ನು ಆಧರಿಸಿದ ಪರೀಕ್ಷೆಯಲ್ಲಿ ಟಾಪರ್‌ ಆಗಿ ಮೂಡಿಬಂದಿರುವುದಾಗಿ ವರದಿಯಾಗಿದೆ. ಒಟ್ಟು 80 ಅಂಕಗಳ ಈ ಪರೀಕ್ಷೆಯಲ್ಲಿ ಗೌಳಿ 74 ಅಂಕಗಳಿಸಿ ತನ್ನ ಪ್ರತಿಭೆಯನ್ನು ಸಾದರಪಡಿಸಿರುವುದು ಗಮನಾರ್ಹವಾಗಿದೆ ಎಂದು ವರದಿ ಹೇಳಿದೆ.

ಗಾಂಧೀಜಿಯವರ ಸಿದ್ಧಾಂತಗಳ ಪರಿಕಲ್ಪನೆ ಕುರಿತಾಗಿ ನಡೆಸಲಾಗಿದ್ದ ಈ ಪರೀಕ್ಷೆಯನ್ನು ನಾಗ್ಪುರ ಸೆಂಟ್ರಲ್‌ ಜೈಲಿನ 160 ಕೈದಿಗಳು ಬರೆದಿದ್ದರು. ವರ್ಷಂಪ್ರತಿ ಗಾಂಧಿ ಜಯಂತಿಯ ಮುನ್ನಾ ದಿನ ಈ ಪರೀಕ್ಷೆಯನ್ನು ಅಕ್ಟೋಬರ್ 1ರಂದು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ಸಹಯೋಗ ಟ್ರಸ್ಟ್‌ ಮತ್ತು ಸರ್ವೋದಯ ಆಶ್ರಮ ಜತೆಗೂಡಿ ನಡೆಸುತ್ತವೆ.

2008ರಲ್ಲಿ ಶಿವಸೇನೆಯ ಶಾಸಕ ಕಮಲಾಕರ ಜಮ್‌ಸಂದೇಕರ್‌ ಹತ್ಯೆಗೆ ಸಂಬಂಧಿಸಿ 2012ರ ಆಗಸ್ಟ್‌ ನಲ್ಲಿ ಗೌಳಿಗೆ ಮುಂಬಯಿಯ ಸೆಶನ್ಸ್‌ ಕೋರ್ಟ್‌ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಗೌಳಿ ಅಖೀಲ ಭಾರತೀಯ ಸೇನಾ ಸ್ಥಾಪಕ.
ಗೌಳಿಯನ್ನು ಮುಂಬಯಿಯಲ್ಲಿ ಸಾಕಿನಾಕಾ ಪೊಲೀಸರು ಬಂಧಿಸಿದ್ದರು. ಕೊಲೆ ಆರೋಪದ ಮೇಲೆ ಐಪಿಸಿ ಸೆ.302, 149, 120ಬಿ, ಮತ್ತು ಮಕೋಕಾ ಕಾಯಿದೆಯ ಸೆ. 3(1), 3(2) ಮತ್ತು 3(4)ರ ಪ್ರಕಾರ ಕೇಸು ದಾಖಲಾಗಿತ್ತು.

ಗೌಳಿ ಕುರಿತ ಬಾಲಿವುಡ್‌ ಚಿತ್ರವೂ ಬಂದಿತ್ತು; ಗೌಳಿ ಪಾತ್ರವನ್ನು ಅರ್ಜುನ್‌ ರಾಮಪಾಲ್‌ ನಿರ್ವಹಿಸಿದ್ದರು. ರಾಜಕೀಯದಲ್ಲೂ ಗೌಳಿ ತನ್ನ ಅದೃಷ್ಟ ಪರೀಕ್ಷಿಸಿದ್ದ.

Please follow and like us:
0
http://bp9news.com/wp-content/uploads/2018/08/gawali.jpghttp://bp9news.com/wp-content/uploads/2018/08/gawali-150x150.jpgPolitical Bureauಪ್ರಮುಖರಾಜಕೀಯShocking: Dawn of Bloody World; Topics in the concept of Gandhi theoriesಬೆಂಗಳೂರು : ಅಂಡರ್‌ ವರ್ಲ್ಡ್ ಡಾನ್‌ ಅರುಣ್‌ ಗೌಳಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಸಿದ್ಧಾಂತಗಳ ಪರಿಕಲ್ಪನೆಯನ್ನು ಆಧರಿಸಿದ ಪರೀಕ್ಷೆಯಲ್ಲಿ ಟಾಪರ್‌ ಆಗಿ ಮೂಡಿಬಂದಿರುವುದಾಗಿ ವರದಿಯಾಗಿದೆ. ಒಟ್ಟು 80 ಅಂಕಗಳ ಈ ಪರೀಕ್ಷೆಯಲ್ಲಿ ಗೌಳಿ 74 ಅಂಕಗಳಿಸಿ ತನ್ನ ಪ್ರತಿಭೆಯನ್ನು ಸಾದರಪಡಿಸಿರುವುದು ಗಮನಾರ್ಹವಾಗಿದೆ ಎಂದು ವರದಿ ಹೇಳಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var...Kannada News Portal