ಬೆಂಗಳೂರು : ಮಾಜಿ ಕಾರ್ಪೊರೇಟರ್‌ ಮೇಲೆ ಹಲ್ಲೆ ನಡೆಸಿರುವ ಘಟನೆ ವಿವಿಪುರಂ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿನ ಎನ್‌ಎಂ ಎಚ್‌ ಬಳಿ ಸೋಮವಾರ ನಡೆದಿದೆ.

ಮಾವಳ್ಳಿಯ ಕಾರ್ಪೊರೇಟರ್ ಆಗಿದ್ದ ವೇದವ್ಯಾಸ್ ಭಟ್ ಹಲ್ಲೆಗೆ ಒಳಗಾದ ವ್ಯಕ್ತಿ. ವಾಕಿಂಗ್ ಹೋಗಿದ್ದ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಎರಡು ಬೈಕ್ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಹಲ್ಲೆಗೆ ಕಾರಣ ಇದುವರೆಗೂ ತಿಳಿದುಬಂದಿಲ್ಲ.

ಈ ಸಂಬಂಧ ವಿವಿ ಪುರಂ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೇದವ್ಯಾಸ್ ಭಟ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.

ವೇದವ್ಯಾಸ್‌ ಅವರಿಗೆ ಕೊಲೆ ಬೆದರಿಕೆ ಏನಾದರೂ ಬಂದಿತ್ತಾ, ಯಾರೊಂದಿಗಾದರೂ ಈ ಹಿಂದೆ ಜಗಳ ಕಾದಾಟ ನಡೆದಿತ್ತೇ ಇಲ್ಲವಾದರೆ ಏಕಾಏಕಿ ದುಷ್ಕರ್ಮಿಗಳು ಬಂದು ಹಲ್ಲೆ ಮಾಡಲು ಹೇಗೆ ಸಾಧ್ಯ ಎಂಬ ಅನುಮಾನಗಳು ಮೂಡಿವೆ.

Please follow and like us:
0
http://bp9news.com/wp-content/uploads/2018/05/Murder-Attempt.jpghttp://bp9news.com/wp-content/uploads/2018/05/Murder-Attempt-150x150.jpgPolitical Bureauಪ್ರಮುಖಬೆಂಗಳೂರುರಾಜಕೀಯShocking news: A deadly assault on former corporator !!!ಬೆಂಗಳೂರು : ಮಾಜಿ ಕಾರ್ಪೊರೇಟರ್‌ ಮೇಲೆ ಹಲ್ಲೆ ನಡೆಸಿರುವ ಘಟನೆ ವಿವಿಪುರಂ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿನ ಎನ್‌ಎಂ ಎಚ್‌ ಬಳಿ ಸೋಮವಾರ ನಡೆದಿದೆ. ಮಾವಳ್ಳಿಯ ಕಾರ್ಪೊರೇಟರ್ ಆಗಿದ್ದ ವೇದವ್ಯಾಸ್ ಭಟ್ ಹಲ್ಲೆಗೆ ಒಳಗಾದ ವ್ಯಕ್ತಿ. ವಾಕಿಂಗ್ ಹೋಗಿದ್ದ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಎರಡು ಬೈಕ್ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಹಲ್ಲೆಗೆ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಈ ಸಂಬಂಧ ವಿವಿ ಪುರಂ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೇದವ್ಯಾಸ್...Kannada News Portal