ಬೆಂಗಳೂರು:ಆಷಾಢ ಮುಗಿಯುತ್ತಿದ್ದಂತೆ ಶ್ರಾವಣದಲ್ಲಿ ವರಮಹಾಲಕ್ಷ್ಮಿ ಹಬ್ಬ ಬರುತ್ತಿದೆ. ಸರ್ಕಾರದಿಂದ ಮಹಾಲಕ್ಷ್ಮಿ ಹಬ್ಬಕ್ಕೆ ಮೈಸೂರು ಸಿಲ್ಕ್ ಸೀರೆ ಸಿಗುತ್ತದೆ ಎಂದು ಮಧ್ಯಮವರ್ಗದ ಮಹಿಳೆಯರು ಕಾಯುತ್ತಿದ್ದಾರೆ. ಅಂತಹವರಿಗೊಂದು ಶಾಕಿಂಗ್ ನ್ಯೂಸ್ ಇಲ್ಲಿದೆ ನೋಡಿ.

ಹಬ್ಬಕ್ಕೆ ಸರ್ಕಾರ ಮಧ್ಯಮವರ್ಗದ ಮಹಿಳೆಯರಿಗೆ 4.500ರೂ. ದರದಲ್ಲಿ ಮೈಸೂರು ಸಿಲ್ಕ್ ಸೀರೆಯನ್ನ ನೀಡುವುದಾಗಿ ಪ್ರಕಟಿಸಿದೆ. ಇದನ್ನ ರೇಷ್ಮೆ ಸಚಿವ ಸಾ.ರಾ.ಮಹೇಶ್ ಅಧಿಕೃತವಾಗಿ ಪ್ರಕಟಿಸಿಯಾಗಿದೆ.  ಈ ವಿಷಯ ಕೇಳಿ ಎಲ್ಲಾ ಮಹಿಳೆಯರು ಖುಷಿಯಲ್ಲಿದ್ದರು.

ಆದ್ರೆ, ಈಗ ಬಂದಿರುವ ಸುದ್ದಿಯಿಂದ ಮಹಿಳೆಯರಿಗೆ ಸ್ವಲ್ಪ ಬೇಸರವಾಗುವುದಂತೂ ಗ್ಯಾರಂಟಿ. ಯಾಕೆಂದ್ರೆ, ಮೈಸೂರು ಸಿಲ್ಕ್ ಸೀರೆಯನ್ನ ಸರ್ಕಾರ  ಈ ದರಕ್ಕೆ ಕೊಡಲು ಸಾಧ್ಯವೇ ಇಲ್ಲ ಎಂಬ ಮಾತು ಸರ್ಕಾರದ ಸಿಲ್ಕ್ ಫ್ಯಾಕ್ಟರಿಯಿಂದಲೇ ಕೇಳಿಬರುತ್ತಿವೆ.

ಕಾರಣ, ಮೈಸೂರು ಸಿಲ್ಕ್ ಸೀರೆ ಅಂದ್ರೆ, ಸೀರೆಗೆ ಜರಿ ಮತ್ತು ಬಾರ್ಡರ್ ಇರಲೇಬೇಕು. ಆಕರ್ಷಕವಾದ ದಾರದ ಎಳೆಗಳಲ್ಲಿ ಸುಂದರ ಕುಸುರಿ ಮತ್ತು ನೇಯ್ಗೆಯಿಂದ ತಯಾರಾಗುವ ಈ ಸೀರೆಗೆ ಪ್ರಸ್ತುತ ಬೆಲೆ 15 ಸಾವಿರದಿಂದ 22 ಸಾವಿರ, ಈ ದರದಿಂದ ಅತಿ ಹೆಚ್ಚು ಅಂದರೆ 3 ಲಕ್ಷರೂಪಾಯಿವರೆಗೂ ಇದೆ.  ಅಂತಹ ಮೈಸೂರು ಸಿಲ್ಕ್ ಸೀರೆಯನ್ನ ಸರ್ಕಾರ ಕೇವಲ 4,500 ರೂಪಾಯಿಗಳಿಗೆ ನೀಡುವುದಾಗಿ ಹೇಳಿದರೆ ಅದು ದೂರದ ಮಾತು. ಯಾಕೆಂದ್ರೆ, 22 ಸಾವಿರರೂ ಬೆಲೆಯ ಮೈಸೂರು ಸಿಲ್ಕ್ ಸೀರೆಗೆ ಒಂದು ಸಣ್ಣ ಚಿನ್ನ ಲೇಪಿತ ದಾರವನ್ನಾದರೂ ಬಳಸಿ ತಯಾರಿಸಲಾಗಿರುತ್ತೆ. ಇನ್ನು ಇದಕ್ಕಿಂತ ಹೆಚ್ಚು ಬೆಲೆಯ ಸೀರೆಗೆ ಚಿನ್ನದ ದಾರವನ್ನೇ ಸೇರಿಸಿ ನೇಯ್ಗೆ ಮಾಡಲಾಗಿರುತ್ತೆ.

ಅದಕ್ಕಾಗಿಯೇ ಮೈಸೂರು ಸಿಲ್ಕ್ ಸೀರೆ ಅಷ್ಟೊಂದು ಅಂದವಾಗಿ ಕಾಣುವುದು. ಆದರೆ, ಸರ್ಕಾರ ನೀಡುವ ಸೀರೆಗೆ ಜರಿ ಮತ್ತು ಬಾರ್ಡರ್ ಇರುವುದಿಲ್ಲ ಅನ್ನೋ ಮಾಹಿತಿ ಫ್ಯಾಕ್ಟರಿಯಿಂದಲೇ ಕೇಳಿಬರುತ್ತಿದೆ. ಯಾಕಂದ್ರೆ, ಚಿನ್ನ ಲೇಪಿತ ದಾರ ಅಥವಾ ಚಿನ್ನದ ದಾರ ಬಳಸಿ ಜರಿ ತಯಾರಿಸಲು ಸಾಧ್ಯವಿಲ್ಲ. ಚಿನ್ನದ ದರ ಆಕಾಶಕ್ಕೆ ಮುಟ್ಟಿದ್ದು ಚಿನ್ನ ಬಳಸಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ 4500 ರೂಪಾಯಿಗಳಿಗೆ ಮೈಸೂರು ಸಿಲ್ಕ್ ಸೀರೆ ಕೊಡುವುದು ಸಾಧ್ಯವಿಲ್ಲದ ಮಾತು.

ಬದಲಿಗೆ ಸರ್ಕಾರಿ ಸಿಲ್ಕ್ ಫ್ಯಾಕ್ಟರಿ ಇರುವ ಚನ್ನಪಟ್ಟಣದಲ್ಲಿ ನೇಯ್ಗೆ ಮಾಡುವ ಪ್ರಿಂಟೆಡ್ ರೇಷ್ಮೆ ಸೀರೆಗಳನ್ನ ಕೊಡಲಾಗುತ್ತದೆ. ಇವೂ ಕೂಡ ರೇಷ್ಮೆ ಸೀರೆಗಳೆೇ, ಆದರೆ, ಮೈಸೂರು ಸಿಲ್ಕ್ ಎಂದು ವಿಶೇಷವಾಗಿ ಕರೆಯಲ್ಪಡುವ ಮೈಸೂರು ಜರಿ ಹಾಗೂ ಬಾರ್ಡರ್ ಇರುವ ಅಂದದ ಸೀರೆಗಳಲ್ಲ ಎನ್ನಲಾಗಿದೆ.

ಮೈಸೂರು ಸಿಲ್ಕ್ ಅಂದರೆ, ರಾಜರ ಆಡಳಿತದ ದಿನಗಳಲ್ಲಿ ಮೈಸೂರು ಸಂಸ್ಥಾನದ ಮಹಾರಾಜರು ತಮ್ಮ ಕುಟುಂಬದವರಿಗಾಗಿಯೇ ಚಿನ್ನದ ದಾರಗಳನ್ನ ಸೇರಿಸಿ ಸೀರೆಗಳನ್ನ ನೇಯ್ಗೆ ಮಾಡಿಸುತ್ತಿದ್ದರು. ಇದಕ್ಕಾಗಿಯೇ ಒಂದು ಫ್ಯಾಕ್ಟರಿಯನ್ನ ಆರಂಭಿಸಿದರು. ಅದು ಮೈಸೂರು ಸಿಲ್ಕ್ ಫ್ಯಾಕ್ಟರಿ ಎಂದು ಹೆಸರಾಯಿತು. ಅಲ್ಲಿನ ಸೀರೆಗಳಿಗೆ ಮೈಸೂರು ಸಿಲ್ಕ್ ಎಂದು ಫೇಮಸ್ ಆಯಿತು.

Please follow and like us:
0
http://bp9news.com/wp-content/uploads/2018/07/mysore-silk-saree-blouse-designs.jpghttp://bp9news.com/wp-content/uploads/2018/07/mysore-silk-saree-blouse-designs-150x150.jpgBP9 Bureauಪ್ರಮುಖಬೆಂಗಳೂರು:ಆಷಾಢ ಮುಗಿಯುತ್ತಿದ್ದಂತೆ ಶ್ರಾವಣದಲ್ಲಿ ವರಮಹಾಲಕ್ಷ್ಮಿ ಹಬ್ಬ ಬರುತ್ತಿದೆ. ಸರ್ಕಾರದಿಂದ ಮಹಾಲಕ್ಷ್ಮಿ ಹಬ್ಬಕ್ಕೆ ಮೈಸೂರು ಸಿಲ್ಕ್ ಸೀರೆ ಸಿಗುತ್ತದೆ ಎಂದು ಮಧ್ಯಮವರ್ಗದ ಮಹಿಳೆಯರು ಕಾಯುತ್ತಿದ್ದಾರೆ. ಅಂತಹವರಿಗೊಂದು ಶಾಕಿಂಗ್ ನ್ಯೂಸ್ ಇಲ್ಲಿದೆ ನೋಡಿ. ಹಬ್ಬಕ್ಕೆ ಸರ್ಕಾರ ಮಧ್ಯಮವರ್ಗದ ಮಹಿಳೆಯರಿಗೆ 4.500ರೂ. ದರದಲ್ಲಿ ಮೈಸೂರು ಸಿಲ್ಕ್ ಸೀರೆಯನ್ನ ನೀಡುವುದಾಗಿ ಪ್ರಕಟಿಸಿದೆ. ಇದನ್ನ ರೇಷ್ಮೆ ಸಚಿವ ಸಾ.ರಾ.ಮಹೇಶ್ ಅಧಿಕೃತವಾಗಿ ಪ್ರಕಟಿಸಿಯಾಗಿದೆ.  ಈ ವಿಷಯ ಕೇಳಿ ಎಲ್ಲಾ ಮಹಿಳೆಯರು ಖುಷಿಯಲ್ಲಿದ್ದರು. ಆದ್ರೆ, ಈಗ ಬಂದಿರುವ ಸುದ್ದಿಯಿಂದ ಮಹಿಳೆಯರಿಗೆ ಸ್ವಲ್ಪ ಬೇಸರವಾಗುವುದಂತೂ...Kannada News Portal