ಮುಂಬೈ: ಸಿನಿಮಾ ಅಂದ ಮೇಲೆ ಕಾಸ್ಟಿಂಗ್​ ಕೌಚ್​ ಕಾಮನ್​ ಅಂತಾ ಅನೇಕ ಸ್ಟಾರ್​ಗಳು ಪರ ಮತ್ತು ವಿರೋಧವಾಗಿ ಮಾತನಾಡಿದ್ರು. ಒಂದಷ್ಟು ದಿನಗಳ ಕಾಲ ಇಡೀ ಟಾಲಿವುಡ್​ನ್ನೇ ನಡುಗಿಸಿದ ಕಾಸ್ಟಿಂಗ್​ ಕೌಚ್ ಪ್ರತಿಭಟನೆ​ ಆರಂಭಿಸಿದ ನಟಿ ಶ್ರೀ ರೆಡ್ಡಿ ಅರೆಬೆತ್ತಲೆಯಾಗಿ ರಸ್ತೆಗಿಳಿದಿದ್ದು ಹಳೇ ವಿಚಾರ. ಇದರ ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ವಿಚಿತ್ರವೊಂದು ನಡೆದಿದೆ. ಇತ್ತೀಚಿಗಷ್ಟೇ ಸುಪ್ರೀಂ ಕೋರ್ಟ್​ ಸಲಿಂಗ ಕಾಮದ ಬಗ್ಗೆ ಪರವಾಗಿ ತೀರ್ಪು ನೀಡಿದ್ದಾರೆ. ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂ ಹೇಳಿದೆ.

ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡಬೇಕು ಎಂದು ಸಲಿಂಗ ನಿರ್ದೇಶಕನೊಬ್ಬ ಆಡಿಷನ್ ವೇಳೆ ಕೇಳಿಕೊಂಡಿದ್ದನು ಎಂದು ನಟ ಆಯುಷ್ಮಾನ್ ಖುರಾನಾ ತಿಳಿಸಿದ್ದಾರೆ. ಫ್ಯಾಶನ್ ಡಿಸೈನರ್ ಅನಿತಾ ಶ್ರಾಫ್ ಅವರ ಚಾಟ್ ಶೋ ಕಾರ್ಯಕ್ರಮವೊಂದರಲ್ಲಿ ನಟ ಆಯುಷ್ಮಾನ್ ಖುರಾನಾ ಆಡಿಷನ್ ವೇಳೆ ತಮಗೆ ಆದ ಕಾಸ್ಟಿಂಗ್ ಕೌಚ್ ಅನುಭವವನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

ಸಲಿಂಗ ನಿರ್ದೇಶಕನೊಬ್ಬ ನನಗೆ ನಿನ್ನ ಮರ್ಮಾಂಗ ತೋರಿಸು. ನಾನು ಅದನ್ನು ಫೀಲ್ ಮಾಡಬೇಕೆಂದು ಎಂದು ಕೇಳಿಕೊಂಡರು. ನಿರ್ದೇಶಕ ಆ ರೀತಿ ಹೇಳಿದ್ದಾಗ ನಾನು ಜೋರಾಗಿ ನಗಲಾರಂಭಿಸಿದೆ. ನಂತರ ನೀನು ಏನು ಹೇಳುತ್ತಿದ್ದೀಯಾ? ಆರ್ ಯೂ ಸೀರಿಯಸ್ ಎಂದು ಕೇಳಿದೆ. ನಂತರ ನಾನು ಇದಕ್ಕೆ ನಿರಾಕರಿಸಿದೆ ಎಂದು ಆಯುಷ್ಮಾನ್ ಖುರಾನಾ ವಿವರಿಸಿದರು.

ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸುದ್ದಿ ಹೆಚ್ಚು ಕೇಳಿ ಬರುತ್ತಿದೆ. ದಕ್ಷಿಣ ಚಿತ್ರರಂಗ ಅಲ್ಲದೇ ಬಾಲಿವುಡ್‍ನಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂಬುದು ತಿಳಿದು ಬಂದಿದೆ. ಬಾಲಿವುಡ್‍ನಲ್ಲಿ ಈ ಮೊದಲು ಏಕ್ತಾ ಕಪೂರ್, ದಿವ್ಯಾಂಕಾ ತ್ರಿಪಾಠಿ, ಸ್ವರಾ ಭಾಸ್ಕರ್ ಹಾಗೂ ಮಂದಿರಾ ಬೇಡಿ ಈ ಕಾಸ್ಟಿಂಗ್ ಕೌಚ್ ಅನ್ನು ಎದುರಿಸಿದ್ದರು.
ಸದ್ಯ ಆಯುಷ್ಮಾನ್ ಖುರಾನಾ ‘ಅಂದಾದೂದ್’ ಹಾಗೂ ‘ಬದಾಯಿ ಹೋ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಎರಡೂ ಚಿತ್ರ ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೆ ತಯಾರಾಗಿದೆ.

Please follow and like us:
0
http://bp9news.com/wp-content/uploads/2018/09/Ayushman-khurranna-3.jpghttp://bp9news.com/wp-content/uploads/2018/09/Ayushman-khurranna-3-150x150.jpgBP9 Bureauಸಿನಿಮಾಮುಂಬೈ: ಸಿನಿಮಾ ಅಂದ ಮೇಲೆ ಕಾಸ್ಟಿಂಗ್​ ಕೌಚ್​ ಕಾಮನ್​ ಅಂತಾ ಅನೇಕ ಸ್ಟಾರ್​ಗಳು ಪರ ಮತ್ತು ವಿರೋಧವಾಗಿ ಮಾತನಾಡಿದ್ರು. ಒಂದಷ್ಟು ದಿನಗಳ ಕಾಲ ಇಡೀ ಟಾಲಿವುಡ್​ನ್ನೇ ನಡುಗಿಸಿದ ಕಾಸ್ಟಿಂಗ್​ ಕೌಚ್ ಪ್ರತಿಭಟನೆ​ ಆರಂಭಿಸಿದ ನಟಿ ಶ್ರೀ ರೆಡ್ಡಿ ಅರೆಬೆತ್ತಲೆಯಾಗಿ ರಸ್ತೆಗಿಳಿದಿದ್ದು ಹಳೇ ವಿಚಾರ. ಇದರ ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ವಿಚಿತ್ರವೊಂದು ನಡೆದಿದೆ. ಇತ್ತೀಚಿಗಷ್ಟೇ ಸುಪ್ರೀಂ ಕೋರ್ಟ್​ ಸಲಿಂಗ ಕಾಮದ ಬಗ್ಗೆ ಪರವಾಗಿ ತೀರ್ಪು ನೀಡಿದ್ದಾರೆ. ಸಲಿಂಗ ಕಾಮ ಅಪರಾಧವಲ್ಲ...Kannada News Portal