ಬೆಂಗಳೂರು : ಮಾಜಿ ಕ್ರೆಕೆಟಿಗ ಹಾಗೂ ಸಚಿವ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಮೇಲಿನ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಭಾಷೆ ಹಾಗೂ ಆಹಾರದ ವಿಚಾರದಲ್ಲಿ ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಸೌಲಿ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ದಕ್ಷಿಣ ಭಾರತಕ್ಕೆ ನಾನು ಹೋದಾಗ ‘ನಮಸ್ಕಾರ’ ಮೊದಲಾದ ಒಂದೆರಡು ಪದಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ. ಇಡ್ಲಿ ಮೊದಲಾದ ಉಪಾಹಾರ ಸೇವಿಸಿದ್ದೇನೆ. ಆದರೆ ಆ ತಿನಿಸುಗಳನ್ನು ಹೆಚ್ಚುಕಾಲ ಸೇವಿಸಲು ಕಷ್ಟವಾಗುತ್ತದೆ. ಅಲ್ಲಿನ ಸಂಸ್ಕೃತಿಯೇ ಸಂಪೂರ್ಣ ಭಿನ್ನ. ಆದರೆ ಪಾಕಿಸ್ತಾನಕ್ಕೆ ಹೋದಾಗ ಅಲ್ಲಿ ಪಂಜಾಬಿ, ಇಂಗ್ಲಿಷ್ ಭಾಷೆ ಮಾತನಾಡುವುದರಿಂದ ನನಗೆ ಕಷ್ಟವಾಗುವುದಿಲ್ಲ’ ಎಂದರು.

ಸಿಧುಗೆ ಮಾನಸಿಕ ಸ್ಥಿಮಿತವಿಲ್ಲ :

ಈ ಕುರಿತು ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ, ‘ಅವರು ಇಲ್ಲಿ ಕ್ರಿಕೆಟ್‌ ಆಡಿ ಹಣ ಮಾಡುವಾಗ ದಕ್ಷಿಣ ಭಾರತ ಚೆನ್ನಾಗಿ ಕಂಡಿತ್ತು. ಅವರೀಗ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತೆ ಕಾಣುತ್ತದೆ’ ಎಂದು ಟೀಕಿಸಿದರು.

Please follow and like us:
0
http://bp9news.com/wp-content/uploads/2018/10/149252.jpghttp://bp9news.com/wp-content/uploads/2018/10/149252-150x150.jpgPolitical Bureauಅಂತಾರಾಷ್ಟ್ರೀಯಪ್ರಮುಖರಾಜಕೀಯರಾಷ್ಟ್ರೀಯSidhu says Pakistan better than South Indiaಬೆಂಗಳೂರು : ಮಾಜಿ ಕ್ರೆಕೆಟಿಗ ಹಾಗೂ ಸಚಿವ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಮೇಲಿನ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಭಾಷೆ ಹಾಗೂ ಆಹಾರದ ವಿಚಾರದಲ್ಲಿ ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನವೇ ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) +...Kannada News Portal