ಬೆಂಗಳೂರು: ‘ಮಲೇಷ್ಯಾದಿಂದ ನಾಲ್ಕು ಹಡಗುಗಳಲ್ಲಿ ಮರಳು ತರಿಸಲಾಗಿದ್ದು, ಎರಡು ತಿಂಗಳ ಒಳಗಾಗಿ ಗ್ರಾಹಕರಿಗೆ ದೊರೆಯುವಂತೆ ಮಾಡಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ತಿಳಿಸಿದರು.

‘ಆಂಧ್ರ ಪ್ರದೇಶದ ಕೃಷ್ಣಪಟ್ಟಣ ಬಂದರಿಗೆ ಒಂದು ಹಾಗೂ ಮಂಗಳೂರು ಬಂದರಿಗೆ ಮೂರು ಹಡುಗುಗಳಲ್ಲಿ ಮರಳು ಬಂದಿದೆ. ಇದರ ವಿಲೇವಾರಿಗೆ ಪರವಾನಗಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ’. ‘ರಾಜ್ಯದಲ್ಲಿ 30 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಮರಳಿನ ಬೇಡಿಕೆ ಇದ್ದು, ಪ್ರಸ್ತುತ 3.5 ಎಂಎಂಟಿ ನದಿ ಮರಳು ಮತ್ತು 23 ಎಂಎಂಟಿ ಎಂ – ಸ್ಯಾಂಡ್ ಲಭ್ಯವಿದೆ. ಇದೀಗ ಸದ್ಯಕ್ಕೆ 3.5 ಎಂಎಂಟಿ ಕೊರತೆ ನೀಗಿಸುವ ಪ್ರಯತ್ನ ನಡೆಯುತ್ತಿದೆ’ ಎಂದಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ, ಸಾಗಣೆ ಹಾಗೂ ಸಂಗ್ರಹಣೆ ವಿಚಾರದಲ್ಲಿ ಕಾಯ್ದೆಗೆ ಕೆಲವೊಂದು ತಿದ್ದುಪಡಿ ತರಲಾಗಿದೆ. ಹಿಂದೆಲ್ಲ ಮರಳು ಸಾಗಣೆ ವಾಹನಗಳನ್ನು ಜಪ್ತಿ ಮಾಡಿದರೆ, ದಂಡ ಕಟ್ಟಿಸಿಕೊಂಡು ಬಿಡಲಾಗುತ್ತಿತ್ತು. ಇದರಿಂದ ಯಾವುದೇ ಭಯವಿಲ್ಲದೆ ಮಾಫಿಯಾ ಮುಂದುವರಿದಿತ್ತು. ಆದರೆ ಇನ್ನು ಮುಂದೆ ಹಾಗೆ ಆಗುವುದಿಲ್ಲ… ಎಂದು ಮರುಳು ದಂಧೆ ಕೋರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/06/28bgp_greensense.jpghttp://bp9news.com/wp-content/uploads/2018/06/28bgp_greensense-150x150.jpgPolitical Bureauಪ್ರಮುಖರಾಜಕೀಯSignature news for home builders !!! Minister of State for Mining & Geology Rajasekhara Patil announces announcementಬೆಂಗಳೂರು: ‘ಮಲೇಷ್ಯಾದಿಂದ ನಾಲ್ಕು ಹಡಗುಗಳಲ್ಲಿ ಮರಳು ತರಿಸಲಾಗಿದ್ದು, ಎರಡು ತಿಂಗಳ ಒಳಗಾಗಿ ಗ್ರಾಹಕರಿಗೆ ದೊರೆಯುವಂತೆ ಮಾಡಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ತಿಳಿಸಿದರು. ‘ಆಂಧ್ರ ಪ್ರದೇಶದ ಕೃಷ್ಣಪಟ್ಟಣ ಬಂದರಿಗೆ ಒಂದು ಹಾಗೂ ಮಂಗಳೂರು ಬಂದರಿಗೆ ಮೂರು ಹಡುಗುಗಳಲ್ಲಿ ಮರಳು ಬಂದಿದೆ. ಇದರ ವಿಲೇವಾರಿಗೆ ಪರವಾನಗಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ’. ‘ರಾಜ್ಯದಲ್ಲಿ 30 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಮರಳಿನ ಬೇಡಿಕೆ ಇದ್ದು, ಪ್ರಸ್ತುತ 3.5 ಎಂಎಂಟಿ...Kannada News Portal