ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಮಾಡಿರುವ ಸ್ಟಾರ್​ ಕಿಡ್ಸ್​ಗಳಲ್ಲಿ  ನಟಿ ಸಿಂಪಲ್​ ಹುಡ್ಗಿ ಶ್ವೇತಾ ಶ್ರೀ ವಾಸ್ತವ್​  ಮಗಳು ಕೂಡ ಒಬ್ಬರು. ಮುದ್ದಾದ  ಕಂದಮ್ಮನ ಫೋಟೋಗಳನ್ನು ಅಪ್​ಲೋಡ್​ ಮಾಡುವ ಮೂಲಕ ಅಶ್ಮಿಕಾಗೆ ಸಿಕ್ಕಾಪಟ್ಟೆ ಫ್ಯಾನ್ಸ್​, ಫಾಲೋಯರ್ಸ್​ ಕೂಡ ಹೆಚ್ಚಾಗುತ್ತಲೇ ಇದ್ದಾರೆ. ಇನ್ಸ್​ ಟ್ರಾಗ್ರಾಂನಲ್ಲಿ, ಫೇಸ್​ಬುಕ್​ನಲ್ಲಿ ಆ ಮುದ್ದು ಕಂದಮ್ಮನಿಗೆ  ಹಿಂಬಾಲಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ನಿಮಿತ್ತ ಅಶ್ಮಿಕಾ ಅಮ್ಮ ಶ್ವೇತಾಗೆ ನಿಮ್ಮ ಮುದ್ದು ಕಂದಮ್ಮನನ್ನು ಮೀಟ್​ ಮಾಡಲು ಅವಕಾಶ ಮಾಡಿಕೊಡಿ ಎಂಬ ಮೆಸೇಜ್​ಗಳು ಅಭಿಮಾನಿಗಳಿಂದ  ಆಗಾಗ್ಗ ಬರುತ್ತಿದ್ದವಂತೆ. ಇದಕ್ಕಾಗಿಯೇ ಶ್ವೇತಾ  ಶ್ರೀ ವಾಸ್ತವ್​  ಒಂದು  ವಿಡಿಯೋ  ಮಾಡಿದ್ದಾರೆ.  ಆವಿಡಿಯೋ ಮೂಲಕ ಏನ್​   ಹೇಳಿದ್ದಾರೆ ಗೊತ್ತಾ..? ಅಭಿಮಾನಿಗಳಿಗೆ ಭರ್ಜರಿ ಆಹ್ವಾನ ಕೊಟ್ಟಿದ್ದಾರೆ.


ಇದೇ 21 ಕ್ಕೆ ನನ್ನ ಮಗಳಿಗೆ ವರ್ಷ ತುಂಬಲಿದೆ. ಮೊದಲೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾಳೆ. ಇದೇ ಸಂದರ್ಭದಲ್ಲಿ ಯಾರಿಗೆ ಅಶ್ಮಿಕಾ ಳನ್ನು ಭೇಟಿ ಮಾಡುವ ಆಸೆ ಇದೆಯೋ,ಯಾರಿಗೆ ಇದು ಸಾಧ್ಯವಾಗುತ್ತೋ ಅವರು ಮುಂಚಿತವಾಗಿಯೇ ನಮಗೆ ಮೆಸೇಜ್​ ಮಾಡಿ ತಿಳಿಸಿದರೆ ಮುಂದಿನ ಯೋಜನೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಅವಳನ್ನು ಭೇಟಿಯಾಗುವ ಅವಕಾಶ ಮಾಡಿಕೊಡಲಾಗುವುದು,  ಮುಂದಿನ ವಿಡಿಯೋದಲ್ಲಿ ಆ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.

ಮಗಳು ಅಶ್ಮಿಕಾಗೆ ಒಂದು ವರ್ಷ ತುಂಬಿದ ಖುಷಿಯಲ್ಲಿರುವ ಶ್ವೇತಾ  ಶ್ರೀ ವಾಸ್ತವ್​ , ಮಗಳಿಗಾಗಿ ಇನ್ಸ್ ಟ್ರಾಗ್ರಾಂ ನಲ್ಲಿ ಒಂದು ಅಕೌಂಟ್​   ತೆರೆದಿದ್ದಾರೆ. ಈಗಾಗಲೇ ಸಾವಾರಾರು ಸಂಖ್ಯೆಯಲ್ಲಿ ಫಾಲೋಯರ್ಸ್​ ಕೂಡ ಹೊಂದಿದ್ದಾಳೆ ಈ ಮದ್ದು ಕಣ್ಮಣಿ.

Please follow and like us:
0
http://bp9news.com/wp-content/uploads/2018/07/DdJViZQV0AAwMxs-683x1024.jpghttp://bp9news.com/wp-content/uploads/2018/07/DdJViZQV0AAwMxs-150x150.jpgBP9 Bureauಸಿನಿಮಾಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಮಾಡಿರುವ ಸ್ಟಾರ್​ ಕಿಡ್ಸ್​ಗಳಲ್ಲಿ  ನಟಿ ಸಿಂಪಲ್​ ಹುಡ್ಗಿ ಶ್ವೇತಾ ಶ್ರೀ ವಾಸ್ತವ್​  ಮಗಳು ಕೂಡ ಒಬ್ಬರು. ಮುದ್ದಾದ  ಕಂದಮ್ಮನ ಫೋಟೋಗಳನ್ನು ಅಪ್​ಲೋಡ್​ ಮಾಡುವ ಮೂಲಕ ಅಶ್ಮಿಕಾಗೆ ಸಿಕ್ಕಾಪಟ್ಟೆ ಫ್ಯಾನ್ಸ್​, ಫಾಲೋಯರ್ಸ್​ ಕೂಡ ಹೆಚ್ಚಾಗುತ್ತಲೇ ಇದ್ದಾರೆ. ಇನ್ಸ್​ ಟ್ರಾಗ್ರಾಂನಲ್ಲಿ, ಫೇಸ್​ಬುಕ್​ನಲ್ಲಿ ಆ ಮುದ್ದು ಕಂದಮ್ಮನಿಗೆ  ಹಿಂಬಾಲಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ನಿಮಿತ್ತ ಅಶ್ಮಿಕಾ ಅಮ್ಮ ಶ್ವೇತಾಗೆ ನಿಮ್ಮ ಮುದ್ದು ಕಂದಮ್ಮನನ್ನು ಮೀಟ್​ ಮಾಡಲು ಅವಕಾಶ...Kannada News Portal