ಬೆಂಗಳೂರು:   ಕಿರುತೆರೆಯಲ್ಲಿ  ಪ್ರಸಾರವಾಗುತ್ತಿರುವ ‘ರಾಧರಮಣ’ ಧಾರವಾಹಿ ಖ್ಯಾತಿಯ  ಸ್ಕಂದ ಅಶೋಕ್ ಅವರ ಮದುವೆ ಬಗ್ಗೆ ಭಾರೀ ಸುದ್ದಿಯಾಗುತ್ತಿದೆ.  ತಾನು ನಾಲ್ಕು ವರ್ಷದಿಂದ  ಪ್ರೇಯಸಿ ಮಾಡೆಲ್​  ಶಿಖಾ ಪ್ರಸಾದ್​ರನ್ನು ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ.

 ಬಹಳ ವಿಶೇಷವಾಗಿ  ಮದುವೆಯಾಗುತ್ತಿರುವ  ರಮಣ ತನ್ನ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ  ಮಧುರ ಕ್ಷಣಗಳ  ಬಗ್ಗೆ  ಹಂಚಿಕೊಂಡಿದ್ದಾರೆ. ಅಂದಹಾಗೇ ಸ್ಕಂದ ಅಶೋಕ್​ ವೆಡ್ಡಿಂಗ್​  ಸ್ಪೆಷಲ್​ ಏನಕಪ್ಪಾ ಅಂದ್ರೆ ಒಂದೊಂದು ಶಾಸ್ತ್ರವನ್ನು ಒಂದೊಂದು ಸ್ಥಳದಲ್ಲಿ ಮಾಡಲಾಗುತ್ತಿದ್ದು  ಬಹಳ ವಿಜೃಂಭಣಾತ್ಮಕವಾಗಿ ನೆರವೇರಲಿದೆ  ಎಂಬ ಮಾಹಿತಿಯನ್ನು  ತಿಳಿಸಿದ್ದಾರೆ.  ಸಾಂಪ್ರದಾಯಿಕವಾಗಿ ಮದುವೆ  ತಯಾರಿಗೆ ಸಿದ್ಧರಾಗಿರುವ ಈ ಜೋಡಿ ವಿವಾಹ ಆರು ದಿನಗಳ  ಕಾಲ ನಡೆಯಲಿದೆ.

ಮೇ 25ರಿಂದ ಮದುವೆ ಕಾರ್ಯಕ್ರಮಗಳು ನಡೆಯಲಿದ್ದು, ಮೇ 20ರಂದು ಬಸವನಗುಡಿಯಲ್ಲಿರುವ ಗಂಜಂ ಕಲ್ಯಾಣ ಮಂಟಪದಲ್ಲಿ ಹಳದಿ ಶಾಸ್ತ್ರ ನಡೆಯಲಿದೆ. ನಂತರ ಮೇ 28ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಮೆಹೆಂದಿ ಶಾಸ್ತ್ರ ಆಯೋಜಿಸಲಾಗಿದೆ. ಮೆಹೆಂದಿ ಕಾರ್ಯಕ್ರಮ ನಡೆದ ನಂತರ ಅದೇ ದಿನ ಸಂಜೆ ಸಂಗೀತಾ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಸಂಗೀತಾ ಕಾರ್ಯಕ್ರಮಕ್ಕೆ ಹಲವು ಸಿನಿಮಾ ಕಲಾವಿದರು ಹಾಗೂ ಕಿರುತರೆ ನಟ- ನಟಿಯರು ಪಾಲ್ಗೊಳ್ಳಲಿದ್ದಾರೆ.

ಮೇ 29ರಂದು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‍ನಲ್ಲಿ ವರಪೂಜೆ ನಡೆಯಲಿದ್ದು, ಅದರ ಜೊತೆ ಬಳೆ ಶಾಸ್ತ್ರ ಜರುಗಲಿದೆ. ಇನ್ನೂ ಈ ವರ ಪೂಜೆ ಸಮಾರಂಭಕ್ಕೆ ಸ್ಕಂದ ಆಶೋಕ್ ಹಾಗೂ ಶಿಖಾ ಪ್ರಸಾದ್ ಮನೆಯ ಹಿರಿಯರು ಭಾಗಿಯಾಗಲಿದ್ದಾರೆ.

ಈ ಎಲ್ಲ ಶಾಸ್ತ್ರ ಮುಗಿದ ನಂತರ ಬೆಂಗಳೂರು ಅರಮನೆ ಮೈದಾನದಲ್ಲಿ ಮೇ 30 ಆರತಕ್ಷತೆ ನಡೆಯಲಿದ್ದು, ನಂತರ ಮೇ 31 ರಂದು ಅಲ್ಲೇ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ.

Please follow and like us:
0
http://bp9news.com/wp-content/uploads/2018/05/maxresdefault-1-8-1024x576.jpghttp://bp9news.com/wp-content/uploads/2018/05/maxresdefault-1-8-150x150.jpgBP9 Bureauಸಿನಿಮಾಬೆಂಗಳೂರು:   ಕಿರುತೆರೆಯಲ್ಲಿ  ಪ್ರಸಾರವಾಗುತ್ತಿರುವ ‘ರಾಧರಮಣ’ ಧಾರವಾಹಿ ಖ್ಯಾತಿಯ  ಸ್ಕಂದ ಅಶೋಕ್ ಅವರ ಮದುವೆ ಬಗ್ಗೆ ಭಾರೀ ಸುದ್ದಿಯಾಗುತ್ತಿದೆ.  ತಾನು ನಾಲ್ಕು ವರ್ಷದಿಂದ  ಪ್ರೇಯಸಿ ಮಾಡೆಲ್​  ಶಿಖಾ ಪ್ರಸಾದ್​ರನ್ನು ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ.  ಬಹಳ ವಿಶೇಷವಾಗಿ  ಮದುವೆಯಾಗುತ್ತಿರುವ  ರಮಣ ತನ್ನ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ  ಮಧುರ ಕ್ಷಣಗಳ  ಬಗ್ಗೆ  ಹಂಚಿಕೊಂಡಿದ್ದಾರೆ. ಅಂದಹಾಗೇ ಸ್ಕಂದ ಅಶೋಕ್​ ವೆಡ್ಡಿಂಗ್​  ಸ್ಪೆಷಲ್​ ಏನಕಪ್ಪಾ ಅಂದ್ರೆ ಒಂದೊಂದು ಶಾಸ್ತ್ರವನ್ನು ಒಂದೊಂದು ಸ್ಥಳದಲ್ಲಿ ಮಾಡಲಾಗುತ್ತಿದ್ದು  ಬಹಳ ವಿಜೃಂಭಣಾತ್ಮಕವಾಗಿ ನೆರವೇರಲಿದೆ  ಎಂಬ...Kannada News Portal