sogadu shivanna

ತುಮಕೂರು: ಟಿಕೆಟ್​ ತಪ್ಪಿದ ಕಾರಣಕ್ಕೆ ಇಂದು ತಮ್ಮ ಬೆಂಬಲಿಗರ ಸಭೆ ಕರೆದಿದ್ದ ಸೊಗಡು ಶಿವಣ್ಣ ಅವರನ್ನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮನವಿ ಮಾಡಿಕೊಂಡಿರುವ ಕಾರ್ಯಕರ್ತರು, ತಾವೇ ಹಣ ಹಾಕಿ ಚುನಾವಣೆ ಮಾಡುವುದಾಗಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸೊಗಡು ಎಲ್ಲಾ ಕಾರ್ಯಕರ್ತರು ಶಾಂತವಾಗಿರಬೇಕು,  ಬಸವಜಯಂತಿ ಮುಗಿಯುವವರೆಗು ಸುಮ್ಮನಿರಿ, ಬಸವಜಯಂತಿ ನಂತರ ನಿಮ್ಮೆಲರಿಗೂ ಒಪ್ಪಿತ ನಿರ್ಧಾರವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ತುಮಕೂರಿನಲ್ಲಿ ಜ್ಯೋತಿಗಣೇಶ್​ ಹಿಂದೂ ಪರವಾಗಿ ಕೆಲಸ ಮಾಡುವಂತೆ ಇದ್ದರೆ ನಾನು ಅವರನ್ನು ಬೆಂಬಲಿಸುತ್ತಿದ್ದೆನೇನೋ, ಆದರೆ ಆ ಸ್ಥಿತಿ ಇಲ್ಲ. ಅವರ ಮನಸ್ಥಿತಿ ಇನ್ನು ಕೂಡ ಕಾಂಗ್ರೆಸ್​ ಮನಸ್ಥಿತಿಯಂತೆಯೇ ಇದೆ. ನಾನು ಗೆದ್ದು ಅಧಿಕಾರ ಬೇಕು ಎನ್ನುವ ಭಾವನೆ ನನಗಿಲ್ಲ, ಆದರೆ ನನ್ನ ಕ್ಷೇತ್ರದ ನನ್ನ ಕಾರ್ಯಕರ್ತರಿಗೆ ಅನ್ಯಾಯವಾಗುವುದಕ್ಕೆ ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಕಾಶಿಯಿಂದ ಒಬ್ಬ ಗುರುಗಳು ನನಗೆ ಕರೆ ಮಾಡಿ ಹೇಳುತ್ತಾರೆ, ನಿಮ್ಮ ಮೇಲೆ ಯಡಿಯೂರಪ್ಪನವರಿಗೆ 28 ವರ್ಷಗಳ ಹಳೆಯ ದ್ವೇಷ ಇದೆ ಎಂದು. ನಾನೇನು ಮಾಡಿದ್ದೀನಿ ಎಂದು ಅವರು  ದ್ವೇಷವನ್ನಿಟ್ಟುಕೊಂಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2018/04/sogadu-shivanna-1.jpghttp://bp9news.com/wp-content/uploads/2018/04/sogadu-shivanna-1-150x150.jpgBP9 News Bureauತುಮಕೂರುಪ್ರಮುಖತುಮಕೂರು: ಟಿಕೆಟ್​ ತಪ್ಪಿದ ಕಾರಣಕ್ಕೆ ಇಂದು ತಮ್ಮ ಬೆಂಬಲಿಗರ ಸಭೆ ಕರೆದಿದ್ದ ಸೊಗಡು ಶಿವಣ್ಣ ಅವರನ್ನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮನವಿ ಮಾಡಿಕೊಂಡಿರುವ ಕಾರ್ಯಕರ್ತರು, ತಾವೇ ಹಣ ಹಾಕಿ ಚುನಾವಣೆ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೊಗಡು ಎಲ್ಲಾ ಕಾರ್ಯಕರ್ತರು ಶಾಂತವಾಗಿರಬೇಕು,  ಬಸವಜಯಂತಿ ಮುಗಿಯುವವರೆಗು ಸುಮ್ಮನಿರಿ, ಬಸವಜಯಂತಿ ನಂತರ ನಿಮ್ಮೆಲರಿಗೂ ಒಪ್ಪಿತ ನಿರ್ಧಾರವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ಜ್ಯೋತಿಗಣೇಶ್​ ಹಿಂದೂ ಪರವಾಗಿ ಕೆಲಸ ಮಾಡುವಂತೆ ಇದ್ದರೆ ನಾನು...Kannada News Portal