ಬೆಂಗಳೂರು:  ನಟ ದುನಿಯಾ ವಿಜಯ್​ ಅವರನ್ನು ಇಂದು ಡಿಸಿಪಿ ಅಣ್ಣಾಮಲೈ ಎದುರು ವಿಚಾರಣೆಗೆ ಗೆ ಕರೆಸಲಾಗಿತ್ತು. ನೊಟೀಸ್​ ನೀಡಿದ ಅನ್ವಯ ದುನಿಯಾ ವಿಜಿ ಮೊಲದ ಪತ್ನಿ ಕೀರ್ತಿಗೌಡ, ಮತ್ತು ಪುತ್ರ ಸಾಮ್ರಾಟ್​ನೊಂದಿಗೆ ವಿಚಾರಣೆಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ  ದುನಿಯಾ ವಿಜಯ್​ ತಂದೆ ಕೂಡ  ಪೊಲೀಸ್​ ಠಾಣೆಗೆ  ಹಾಜರಾಗಿದ್ದರು.

 ಕೌಟುಂಬಿಕ ಕಲಹಕ್ಕೆ   ಸಂಬಂಧಿಸಿದಂತೇ  ಇಂದು ನಟ ದುನಿಯಾ ವಿಜಯ್​  ಅಣ್ಣಾಮಲೈ  ಎದುರು ವಿಚಾರಣೆಗೆ  ಹಾಜರಾಗಿದ್ದರು. ದುನಿಯಾ ವಿಜಿ, ಮೊದಲ ಪತ್ನಿ ಕೀರ್ತಿಗೌಡ ಹಾಗೂ ಪುತ್ರ ಸಾಮ್ರಾಟ್ ವಿಚಾರಣೆಗೆ ಹಾಜರಾಗಿದ್ರು. ವಿಜಿ ತಂದೆ-ತಾಯಿ ಕೂಡಾ ಡಿಸಿಪಿ ಕಚೇರಿಗೆ ಬಂದಿದ್ರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ದುನಿಯಾ ವಿಜಿ, ಡಿಸಿಪಿ ಅಣ್ಣಾಮಲೈ ಅವರನ್ನ ಭೇಟಿಯಾಗಿದ್ದೇನೆ. ವಿಚಾರಣೆ ಮುಗಿದಿದೆ. ನೋಟಿಸ್ ಪ್ರಕಾರ ಬಾಂಡ್ ನೀಡಿ ಮುಚ್ಚಳಿಕೆ ಬರೆದು ಕೊಟ್ಟಿದ್ದೇನೆ. ಕಾನೂನಿಗೆ ಎಂದೂ ಧಕ್ಕೆ ತರುವ ಕೆಲಸ ಮಾಡಲ್ಲ ಅಂತಾ ಮಾಧ್ಯಮದವರ ಮುಂದೆ ಕೈ ಮುಗಿದು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು.

ಅಂದಹಾಗೇ ದುನಿಯಾ ವಿಜಯ್​ ಕುಟುಂದವರು ಪರಸ್ಪರ ಪೊಲೀಸರಲ್ಲಿ ದೂರು ದಾಖಲಿಸುತ್ತಿದ್ದರಿಂದ ಪೊಲೀಸರೇ ಸ್ವತಃ ಸುಮೋಟೋ ಕೇಸ್​   ದಾಖಲು ಮಾಡಿಕೊಂಡಿದ್ದರು.

Please follow and like us:
0
http://bp9news.com/wp-content/uploads/2018/11/Duniya-Vijay-main.jpghttp://bp9news.com/wp-content/uploads/2018/11/Duniya-Vijay-main-150x150.jpgBP9 Bureauಸಿನಿಮಾಬೆಂಗಳೂರು:  ನಟ ದುನಿಯಾ ವಿಜಯ್​ ಅವರನ್ನು ಇಂದು ಡಿಸಿಪಿ ಅಣ್ಣಾಮಲೈ ಎದುರು ವಿಚಾರಣೆಗೆ ಗೆ ಕರೆಸಲಾಗಿತ್ತು. ನೊಟೀಸ್​ ನೀಡಿದ ಅನ್ವಯ ದುನಿಯಾ ವಿಜಿ ಮೊಲದ ಪತ್ನಿ ಕೀರ್ತಿಗೌಡ, ಮತ್ತು ಪುತ್ರ ಸಾಮ್ರಾಟ್​ನೊಂದಿಗೆ ವಿಚಾರಣೆಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ  ದುನಿಯಾ ವಿಜಯ್​ ತಂದೆ ಕೂಡ  ಪೊಲೀಸ್​ ಠಾಣೆಗೆ  ಹಾಜರಾಗಿದ್ದರು.  ಕೌಟುಂಬಿಕ ಕಲಹಕ್ಕೆ   ಸಂಬಂಧಿಸಿದಂತೇ  ಇಂದು ನಟ ದುನಿಯಾ ವಿಜಯ್​  ಅಣ್ಣಾಮಲೈ  ಎದುರು ವಿಚಾರಣೆಗೆ  ಹಾಜರಾಗಿದ್ದರು. ದುನಿಯಾ ವಿಜಿ, ಮೊದಲ ಪತ್ನಿ ಕೀರ್ತಿಗೌಡ ಹಾಗೂ...Kannada News Portal