ಕಿರುತೆರೆಯ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಶುರುವಾಗಿದೆ. ಹಿಂದಿಯಲ್ಲಿ ಈ ರಿಯಾಲಿಟಿ ಶೋ 12 ನೇ ಸೀಸನ್​ ಆರಂಭವಾಗಿಗದೆ. ಬಿಗ್​ಬಾಸ್​ ಹೌಸ್​ಗೆ ಕ್ರಿಕೆಟಿಗ ಶ್ರೀಶಾಂತ್​  ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೇ ಶ್ರೀ ಶಾಂತ್​ ಎಂಟ್ರಿ ಕೊಡುವ ಮೊದಲು ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ಶ್ರೀಶಾಂತ್ ನಾನು ಸಿನಿಮಾದಲ್ಲಿ ನಟಿಸಿದ್ದೇನೆ ಎಂದರು. ಇದನ್ನು ಕೇಳಿ ಸಲ್ಮಾನ್ ಸಿನಿಮಾನಾ ಎಂದು ಆಶ್ಚರ್ಯಪಟ್ಟರು. ಈ ವೇಳೆ ಶ್ರೀಶಾಂತ್, ಹೌದು. ನಾನು ಸೌತ್ ಸಿನಿಮಾ ಕೆಂಪೇಗೌಡ-2 ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ವಿಲನ್ ಪಾತ್ರವನ್ನು ನಿಭಾಯಿಸಿದ್ದೇನೆ. ಹಾಗಾಗಿ ನಾನು ದಪ್ಪಗಾಗ ಬೇಕಾಯಿತ್ತು ಎಂದು ಶ್ರೀಶಾಂತ್, ಸಲ್ಮಾನ್ ಖಾನ್ ಬಳಿ ಹೇಳಿದರು.

ಸದ್ಯ ಸಲ್ಮಾನ್ ಖಾನ್ ಜೊತೆ ಶ್ರೀಶಾಂತ್ ಕೆಂಪೇಗೌಡ-2 ಚಿತ್ರದ ಬಗ್ಗೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನವರಸನಾಯಕ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜಗ್ಗೇಶ್ ವಿಡಿಯೋ ಶೇರ್ ಮಾಡಿ ತಮ್ಮ ಸಹೋದರ ಕೋಮಲ್ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಶ್ರೀಶಾಂತ್ ಮಾತನಾಡಿದ ವಿಡಿಯೋವನ್ನು ನಟ ಜಗ್ಗೇಶ್ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ಕೋಮಲ್ ನಟಿಸಿರುವ ಕೆಂಪೇಗೌಡ-2 ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ವಿಲನ್ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ಬಗ್ಗೆ ಸಲ್ಮಾನ್ ಖಾನ್‍ಗೆ ಬಿಗ್‍ಬಾಸ್‍ಗೆ ಆಯ್ಕೆಯಾದ ಸಂದರ್ಭದಲ್ಲಿ ಶ್ರೀಶಾಂತ್ ಸಲ್ಮಾನ್‍ಗೆ ತಿಳಿಸುತ್ತಿರುವುದು ಕೇಳಿ ಕೋಮಲ್ ಅಣ್ಣನಾಗಿ ತುಂಬ ಸಂತೋಷವಾಯಿತು. ನಿಮ್ಮ ಶುಭಹಾರೈಕೆ ಇರಲಿ ಕೋಮಲ್‍ಗೆ” ಎಂದು ಟ್ವೀಟ್ ಮಾಡಿದ್ದರು.

Please follow and like us:
0
http://bp9news.com/wp-content/uploads/2018/09/dc-Cover-ihirc40cb2ac3j26vregq5cvr7-20171020164411.Medi_.jpeghttp://bp9news.com/wp-content/uploads/2018/09/dc-Cover-ihirc40cb2ac3j26vregq5cvr7-20171020164411.Medi_-150x150.jpegBP9 Bureauಕ್ರೀಡೆಸಿನಿಮಾಕಿರುತೆರೆಯ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಶುರುವಾಗಿದೆ. ಹಿಂದಿಯಲ್ಲಿ ಈ ರಿಯಾಲಿಟಿ ಶೋ 12 ನೇ ಸೀಸನ್​ ಆರಂಭವಾಗಿಗದೆ. ಬಿಗ್​ಬಾಸ್​ ಹೌಸ್​ಗೆ ಕ್ರಿಕೆಟಿಗ ಶ್ರೀಶಾಂತ್​  ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೇ ಶ್ರೀ ಶಾಂತ್​ ಎಂಟ್ರಿ ಕೊಡುವ ಮೊದಲು ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಶ್ರೀಶಾಂತ್ ನಾನು ಸಿನಿಮಾದಲ್ಲಿ ನಟಿಸಿದ್ದೇನೆ ಎಂದರು. ಇದನ್ನು ಕೇಳಿ ಸಲ್ಮಾನ್ ಸಿನಿಮಾನಾ ಎಂದು ಆಶ್ಚರ್ಯಪಟ್ಟರು. ಈ ವೇಳೆ ಶ್ರೀಶಾಂತ್, ಹೌದು. ನಾನು ಸೌತ್ ಸಿನಿಮಾ ಕೆಂಪೇಗೌಡ-2 ಚಿತ್ರದಲ್ಲಿ...Kannada News Portal