ಬೆಂಗಳೂರು: ಕೊಪ್ಪಳ ಅಕ್ಷರ ಸಹ ಆ್ಯಂಟಿ ಕಾಂಗ್ರೆಸ್​ ಆಗಿ ಪರಿಣಮಿಸುತ್ತಿದೆ. ಸಿಎಂ ಸಿದ್ದರಾಮಯ್ಯನವರು ಇಕ್ಬಾಲ್​ ಅನ್ಸಾರಿಗೆ ಟಿಕೆಟ್​ ಎಂದು ಘೋಷಣೆ ಮಾಡುತ್ತಿದಂತೆ ಮಾಜಿ ಎಂಎಲ್​ಸಿ, ಕಾಂಗ್ರೆಸ್​ ಮುಖಂಡ ಶ್ರೀನಾಥ್​ರವರು ಡಾ. ಪರಮೇಶ್ವರ್​ ಅವರಿಗೆ​ ರಾಜಿನಾಮೆ ಪತ್ರ ಕಳುಹಿಸಿದ್ದರು.

ಇದೀಗ ಮಾಜಿ ಎಂಎಲ್​ಸಿ ಶ್ರೀನಾಥ್ರವರ ಬೆಂಬಲಿಗರಾದ 12ಜನ ಗಂಗಾವತಿ ನಗರಸಭಾ ಸದಸ್ಯರೂ ಕೂಡ ಕಾಂಗ್ರೆಸ್​ ತೊರೆದು ಭಿನ್ನಮತದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಸದ್ಯ ಕಾಂಗ್ರೆಸ್​ ಪಕ್ಷವನ್ನು ಮಾತ್ರ ತೊರೆದಿದ್ದು, 12ಜನ ಗಂಗಾವತಿ ನಗರಸಭಾ ಸದಸ್ಯರೂ ಕೂಡ ಮುಂದೆ ತಮ್ಮ ನಾಯಕರಾದ ಮಾಜಿ ಎಂಎಲ್​ಸಿ ಶ್ರೀನಾಥ್ರವರು ಏನು ಹೇಳುತ್ತಾರೆಯೋ ಹಾಗೇ ಮಾಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಗರಸಭೆ ಗದ್ದುಗೆ ಅಲುಗಾಡುವಂತೆ ಮಾಡಿದ್ದಾರೆ.

ಜೊತೆಗೆ ಚುನಾವಣೆಯ ಹತ್ತಿರದ ದಿನಗಳಲ್ಲಿ ಈ ಪರಿಯ ಭಿನ್ನಮತ ಕಾಂಗ್ರೆಸ್​ ಪಕ್ಷಕ್ಕೆ ಕೊಪ್ಪಳದಲ್ಲಿ ಬಾರಿ ಹೊಡೆತ ಕೊಡಬಹುದು ಎಂಬ ಚರ್ಚೆ ಕೊಪ್ಪಳದಲ್ಲಿ ಈಗಾಲೇ ಅರಿದಾಡುತ್ತಿದೆ. ಅಷ್ಟೇ ಅಲ್ಲಾ ಈಗಾಗಲೇ ಕಾಮಗ್ರೆಸ್​ಗೆ ರಾಜಿನಾಮೆ ನೀಡಿರುವ ಮಾಜಿ ಎಂಎಲ್​ಸಿ ಶ್ರೀನಾಥ್​ರವರು ಏನಾದರೂ ಬಿಜೆಪಿ ಅಥವಾ ಜೆಡಿಎಸ್​ ಕಡೆ ಮುಖ ಮಾಡಿದರೇ ನಿಜಕ್ಕೂ ಕಾಂಗ್ರೆಸ್​ ಪಕ್ಷಕ್ಕೆ ಕೇವಲ ಕೊಪ್ಪಳ ಮಾತ್ರವಲ್ಲದೇ ಅಕ್ಕಪಕ್ಕದ 2 ರಿಂದ ಮೂರು ಕ್ಷೇತ್ರಗಳಲ್ಲಿಯೂ ಆ್ಯಂಟಿ ಅಲೆಯನ್ನು ಎದುರಿಸ ಬೇಕಾಗಬಹುದು ಎಂಬುದು ಕೊಪ್ಪಳ ಜಿಲ್ಲೆಯ ರಾಜಕಾರಣವನ್ನು ಹತ್ತಿರದಿಂದ ನೋಡಿರುವ ರಾಜಕೀಯ ವಿಮರ್ಶಾತ್ಮಕರ ವಾದವಾಗಿದೆ.

Please follow and like us:
0
http://bp9news.com/wp-content/uploads/2017/12/mlc-1.jpghttp://bp9news.com/wp-content/uploads/2017/12/mlc-1-150x150.jpgPolitical Bureauಕೊಪ್ಪಳಪ್ರಮುಖರಾಜಕೀಯಬೆಂಗಳೂರು: ಕೊಪ್ಪಳ ಅಕ್ಷರ ಸಹ ಆ್ಯಂಟಿ ಕಾಂಗ್ರೆಸ್​ ಆಗಿ ಪರಿಣಮಿಸುತ್ತಿದೆ. ಸಿಎಂ ಸಿದ್ದರಾಮಯ್ಯನವರು ಇಕ್ಬಾಲ್​ ಅನ್ಸಾರಿಗೆ ಟಿಕೆಟ್​ ಎಂದು ಘೋಷಣೆ ಮಾಡುತ್ತಿದಂತೆ ಮಾಜಿ ಎಂಎಲ್​ಸಿ, ಕಾಂಗ್ರೆಸ್​ ಮುಖಂಡ ಶ್ರೀನಾಥ್​ರವರು ಡಾ. ಪರಮೇಶ್ವರ್​ ಅವರಿಗೆ​ ರಾಜಿನಾಮೆ ಪತ್ರ ಕಳುಹಿಸಿದ್ದರು. ಇದೀಗ ಮಾಜಿ ಎಂಎಲ್​ಸಿ ಶ್ರೀನಾಥ್ರವರ ಬೆಂಬಲಿಗರಾದ 12ಜನ ಗಂಗಾವತಿ ನಗರಸಭಾ ಸದಸ್ಯರೂ ಕೂಡ ಕಾಂಗ್ರೆಸ್​ ತೊರೆದು ಭಿನ್ನಮತದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಸದ್ಯ ಕಾಂಗ್ರೆಸ್​ ಪಕ್ಷವನ್ನು ಮಾತ್ರ ತೊರೆದಿದ್ದು, 12ಜನ ಗಂಗಾವತಿ...Kannada News Portal