ಹುಡುಗಿಯನ್ನು ಸಪ್ಲೈ ಮಾಡುತ್ತಿದ್ದರು ಸ್ಟಾರ್​ ನಟ ರಾಜಶೇಖರ್​ ಪತ್ನಿ ಜೀವಿತಾ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿಯೇ  ಜೀವಿತಾ ಆಕ್ರೋಶಗೊಂಡಿದ್ದಾರೆ. ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸಂದ್ಯಾ ಮಾಡಿರುವ ಆರೋಪದಲ್ಲಿ ಸತ್ಯವಿಲ್ಲವೆಂದು ಗುಡುಗಿದ್ದಾರೆ. ಇವರ   ಮಹಿಳಾ ಕಾರ್ಯಕರ್ತೆ ವಿರುದ್ಧ ಮಾನನಷ್ಟ  ಮೊಕದ್ದಮೆ ಹೂಡುತ್ತೇನೆ ಎಂದು  ಪ್ರತಿಕ್ರಿಯೆ ನೀಡಿದ್ದಾರೆ.

ಅಂದಹಾಗೇ ಸಂಧ್ಯಾ ಕಾಸ್ಟಿಂಗ್​ ಕೌಚ್​  ಪ್ರತಿಭಟನೆಯಲ್ಲಿ ಬಗ್ಗೆ ಮಾತನಾಡಿ, ನಟ  ರಾಜಶೇಖರ್​ ಪತ್ನಿ ಅವಕಾಶದ ಆಮೀಷ ತೋರಿ ಅವರನ್ನು  ಬಳಸಿಕೊಳ್ಳುತ್ತಿದ್ದರು.  ಸ್ವತಹ  ಜೀವಿತಾ ಅವರೇ ತಮ್ಮ ಗಂಡನಿಗೆ ಹುಡುಗಿಯರನ್ನ ಸಪ್ಲೈ ಮಾಡುತ್ತಿದ್ದರು  ಎಂದು ಸಂಧ್ಯಾ ಆರೋಪ ಮಾಡಿದ್ದಾರೆ. ಇದಕ್ಕೆ ಜೀವಿತಾ ರಾಜಶೇಖರ್​ ಪತ್ರಿಕಾ ಗೋಷ್ಠಿ ನಡೆಸಿ ನಾನು ಆ ಕೆಲಸ ಮಾಡಿಲ್ಲ, ನನ್ನ ಮೇಲಿನ ಆರೋಪದಲ್ಲಿ ಸತ್ಯವಿಲ್ಲ, ಮಹಿಳೆಯರನ್ನು ರಕ್ಷಿಸಬೇಕಾದವರಿಂದಲೇ ಮತ್ತೊಬ್ಬ  ಮಹಿಳೆ ಮೇಲೆ ಆರೋಪ ನಿಜಕ್ಕೂ ಆಘಾತಕಾರಿ ಎಂಲದಿದ್ದಾರೆ . ಇವರು ಮಾಡಿರುವ ಆರೋಪಕ್ಕೆ ಆದಾರಗಳಿಲ್ಲ, ಇವರ  ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದಾರೆ..

ಇನ್ನು ಮಾಧ್ಯಮದವರ ಜೊತೆ ಮಾತನಾಡುತ್ತಾ ”ನನ್ನನ್ನು ಮನೆ ಮಗಳಂತೆ ಆಂಧ್ರ ಪ್ರದೇಶದ ಜನ ನೋಡುತ್ತಿದ್ದಾರೆ. 25 ವರ್ಷದಿಂದ 60 ವರ್ಷದವರೆಗೂ ಎಲ್ಲರೂ ನನ್ನನ್ನು ಇಷ್ಟ ಪಡ್ತಾರೆ. ಅವರ ಮನೆಗೆ ಹೋದಾಗ ಅಷ್ಟೇ ಚೆನ್ನಾಗಿ ನನ್ನನ್ನು ನೋಡಿಕೊಳ್ಳುತ್ತಾರೆ. ಸೆಲೆಬ್ರಿಟಿ ಅಂದಾಕ್ಷಣ ಅವರ ಬಗ್ಗೆ ಏನೇ ಹೇಳಿದ್ರು ಅದು ಸುದ್ದಿಯಾಗಿಬಿಡುತ್ತೆ. ಸುದ್ದಿ ವಾಹಿನಿಗಳು ಕೂಡ ಅವರ ಹೇಳಿಕೆಗೆ ಭಿನ್ನ-ವಿಭಿನ್ನವಾದ ಹೆಡ್ ಲೈನ್ ಇಟ್ಟು ಕಾರ್ಯಕ್ರಮ ಮಾಡಿವೆ. ಇದು ಉತ್ತಮ ಬೆಳವಣಿಗೆ ಅಲ್ಲ” ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಶ್ರೀರೆಡ್ಡಿ ಬಗ್ಗೆ ಮಾತನಾಡಿದ ಜೀವಿತಾ ”ಅವರ ಬಗ್ಗೆ ನನಗೇನೂ ಮಾತನಾಡಲು ಇಲ್ಲ. ಆದ್ರೆ, ಅವಕಾಶ ಬೇಕು ಅಂದ್ರೆ ಕಾಂಪ್ರುಮೈಸ್ ಆಗ್ಬೇಕು ಎನ್ನುವುದು ತಪ್ಪು, ಅದು ನಾನು ಎಲ್ಲಿಯೂ ನೋಡಿಲ್ಲ. ನಾನು ಕೂಡ ನಟಿ, ನಿರ್ದೇಶನ ಹಾಗೂ ನಿರ್ಮಾಣ ಕೂಡ ಮಾಡಿದ್ದೇನೆ” ಎಂದರು.

 

Please follow and like us:
0
http://bp9news.com/wp-content/uploads/2018/04/download-12.jpghttp://bp9news.com/wp-content/uploads/2018/04/download-12-150x150.jpgBP9 Bureauಸಿನಿಮಾಹುಡುಗಿಯನ್ನು ಸಪ್ಲೈ ಮಾಡುತ್ತಿದ್ದರು ಸ್ಟಾರ್​ ನಟ ರಾಜಶೇಖರ್​ ಪತ್ನಿ ಜೀವಿತಾ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿಯೇ  ಜೀವಿತಾ ಆಕ್ರೋಶಗೊಂಡಿದ್ದಾರೆ. ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸಂದ್ಯಾ ಮಾಡಿರುವ ಆರೋಪದಲ್ಲಿ ಸತ್ಯವಿಲ್ಲವೆಂದು ಗುಡುಗಿದ್ದಾರೆ. ಇವರ   ಮಹಿಳಾ ಕಾರ್ಯಕರ್ತೆ ವಿರುದ್ಧ ಮಾನನಷ್ಟ  ಮೊಕದ್ದಮೆ ಹೂಡುತ್ತೇನೆ ಎಂದು  ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೇ ಸಂಧ್ಯಾ ಕಾಸ್ಟಿಂಗ್​ ಕೌಚ್​  ಪ್ರತಿಭಟನೆಯಲ್ಲಿ ಬಗ್ಗೆ ಮಾತನಾಡಿ, ನಟ  ರಾಜಶೇಖರ್​ ಪತ್ನಿ ಅವಕಾಶದ ಆಮೀಷ ತೋರಿ ಅವರನ್ನು  ಬಳಸಿಕೊಳ್ಳುತ್ತಿದ್ದರು. ...Kannada News Portal