ವಾರಾಣಾಸಿ:  ಬೀದಿ ಕಾಮುಕರು ಕೇಂದ್ರ ಸಚಿವೆ   ಅನುಪ್ರಿಯಾ ಪಟೇಲ್​ ಅವರನ್ನು ಚುಡಾಯಿಸಿರುವ ಘಟನೆ ಉತ್ತರ ಪ್ರದೇಶದ ಅರೋಯ್​ ಮತ್ತು ಮಿರ್ಜಾಮುರದ್​ ನಡುವೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೇಂದ್ರ ಆರೋಗ್ಯ   ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾದ ಅನುಪ್ರಿಯಾ ಪಟೇಲ್​ ರವರು ಕಳೆದ ಸೋಮವಾರ  ಕಾಶಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಕಾರಿನಲ್ಲಿ  ವಾಪಸ್ಸಾಗುತ್ತಿದ್ದರು.  ಈ ವೇಳೆ ನೋಂದಣಿ ಇಲ್ಲದ ಕಾರಿನಲ್ಲಿ ಬಂದ ಮೂವರು ಯುವಕರು ಓವರ್​ ಟೇಕ್​ ಮಾಡುವ ವೇಳೆ ಸಚಿವೆಗೆ  ಅಸಭ್ಯವಾಗಿ  ಬೈದಿದ್ದಾರೆ. ಅಲ್ಲದೇ ಭದ್ರತಾ ಸಿಬ್ಬಂದಿಯವರ ಜೊತೆಗೂ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದ ಪುಂಡರ  ಮೇಲೆ ಭದ್ರತಾ ಸಿಬ್ಬಂದಿಯವರು ತಿರುಗಿ ಬಿದ್ದಾಗ ಅಲ್ಲಿಂದ ಪರಾರಿಯಾಗಿದ್ದಾರೆ.

ಘಟನೆ ಕುರಿತು ಸಚಿವೆ ವಾರಣಾಸಿಯ ಎಸ್‍ಪಿ ಎಸ್ ಕೆ ಭಾರದ್ವಾಜ್ ಬಳಿ ದೂರು ನೀಡಿದ್ದಾರೆ. ನೋಂದಣಿ ಇಲ್ಲದ ಕಾರಿನಲ್ಲಿ ಬಂದ ಆರೋಪಿಗಳನ್ನು ಪತ್ತೆಹಚ್ಚುವಂತೆ ತಿಳಿಸಿದ್ದಾರೆ. ಕೂಡಲೇ ಜಾಗೃತರಾದ ಮಿರ್ಜಾಪುರದ್ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿಗೂ ಇದೇ ಅನುಭವ ಆಗಿತ್ತು. ವಿಮಾನ ನಿಲ್ದಾಣದಿಂದ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಬೀದಿ  ಕಾಮುಕರು ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸಿದ್ದರು.

 

Please follow and like us:
0
http://bp9news.com/wp-content/uploads/2018/06/swearing-ceremony_b7fb21ba-42e6-11e6-b0f4-7520104944f6.jpghttp://bp9news.com/wp-content/uploads/2018/06/swearing-ceremony_b7fb21ba-42e6-11e6-b0f4-7520104944f6-150x150.jpgBP9 Bureauಪ್ರಮುಖರಾಷ್ಟ್ರೀಯವಾರಾಣಾಸಿ:  ಬೀದಿ ಕಾಮುಕರು ಕೇಂದ್ರ ಸಚಿವೆ   ಅನುಪ್ರಿಯಾ ಪಟೇಲ್​ ಅವರನ್ನು ಚುಡಾಯಿಸಿರುವ ಘಟನೆ ಉತ್ತರ ಪ್ರದೇಶದ ಅರೋಯ್​ ಮತ್ತು ಮಿರ್ಜಾಮುರದ್​ ನಡುವೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt); ಕೇಂದ್ರ ಆರೋಗ್ಯ   ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾದ ಅನುಪ್ರಿಯಾ ಪಟೇಲ್​ ರವರು...Kannada News Portal