ಮಹದೇಶ್ವರ ಬೆಟ್ಟ: ಇಲ್ಲಿಗೆ ಸಮೀಪ, ತಮಿಳುನಾಡು ಗಡಿಯಂಚಿನಲ್ಲಿರುವ ಕಾವೇರಿಪುರಂ ಗ್ರಾಮದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಚಲಿಸಬಲ್ಲ ಸೈಕಲ್‌ ಅಭಿವೃದ್ಧಿಪಡಿಸಿದ್ದಾರೆ.

ಪಾಲಾರ್‌ ಗ್ರಾಮಕ್ಕೆ ಹತ್ತಿರದಲ್ಲಿರುವ ಕಾವೇರಿಪುರಂ ಗ್ರಾಮ ತಮಿಳುನಾಡಿಗೆ ಸೇರಿದೆ. ಇಲ್ಲಿ ಪಾಲಿಟೆಕ್ನಿಕ್‌ ಓದುತ್ತಿರುವ ತಮಿಳ್‌ ಕುಮಾರನ್‌ ಮತ್ತು ಗುಣ ಎಂಬುವರು ಈ ವಿನೂತನ ಸೈಕಲ್‌ನ ರೂವಾರಿಗಳು.

ಇಂಧನ ರಹಿತವಾಗಿ ನದಿಯನ್ನು ದಾಟಲು ಬಳಸಬಹುದಾದ ಸೈಕಲ್‌ ಅನ್ನು ತಮ್ಮ ಗ್ರಾಮದ ಮಕ್ಕಳು ಅಭಿವೃದ್ಧಿ ಪಡಿಸಿರುವುದು ಗ್ರಾಮಸ್ಥರ ಸಂಭ್ರಮಕ್ಕೆ ಕಾರಣವಾಗಿದೆ. ಮಹದೇಶ್ವರ ಬೆಟ್ಟ: ಇಲ್ಲಿಗೆ ಸಮೀಪ, ತಮಿಳುನಾಡು ಗಡಿಯಂಚಿನಲ್ಲಿರುವ ಕಾವೇರಿಪುರಂ ಗ್ರಾಮದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಚಲಿಸಬಲ್ಲ ಸೈಕಲ್‌ ಅಭಿವೃದ್ಧಿಪಡಿಸಿದ್ದಾರೆ.
ಪಾಲಾರ್‌ ಗ್ರಾಮಕ್ಕೆ ಹತ್ತಿರದಲ್ಲಿರುವ ಕಾವೇರಿಪುರಂ ಗ್ರಾಮ ತಮಿಳುನಾಡಿಗೆ ಸೇರಿದೆ. ಇಲ್ಲಿ ಪಾಲಿಟೆಕ್ನಿಕ್‌ ಓದುತ್ತಿರುವ ತಮಿಳ್‌ ಕುಮಾರನ್‌ ಮತ್ತು ಗುಣ ಎಂಬುವರು ಈ ವಿನೂತನ ಸೈಕಲ್‌ನ ರೂವಾರಿಗಳು.

ಇಂಧನ ರಹಿತವಾಗಿ ನದಿಯನ್ನು ದಾಟಲು ಬಳಸಬಹುದಾದ ಸೈಕಲ್‌ ಅನ್ನು ತಮ್ಮ ಗ್ರಾಮದ ಮಕ್ಕಳು ಅಭಿವೃದ್ಧಿ ಪಡಿಸಿರುವುದು ಗ್ರಾಮಸ್ಥರ ಸಂಭ್ರಮಕ್ಕೆ ಕಾರಣವಾಗಿದೆ.

₹3 ಸಾವಿರ ಖರ್ಚು:

ಸರಳ ತಂತ್ರಜ್ಞಾನದ ಸೈಕಲ್‌ ಅನ್ನು ಕಡಿಮೆ ವೆಚ್ಚ ಮತ್ತು ಕಡಿಮೆ ಅವಧಿಯಲ್ಲಿ ತಯಾರಿಸಿದ್ದಾರೆ. ‘ಮೂರು ಗಂಟೆಗಳಲ್ಲಿ‌, ₹3 ಸಾವಿರ ವೆಚ್ಚದಲ್ಲಿ ಸೈಕಲ್‌ ಸಿದ್ಧಪಡಿಸಬಹುದು. ಪಿವಿಸಿ ಪೈಪ್‌, ಕಬ್ಬಿಣದ ಸಲಾಕೆ, ಪೆಡಲ್‌, ಚೈನ್‌ ಇನ್ನಿತರ ‌ಸಣ್ಣ ಪುಟ್ಟ ಸಲಕರಣೆಗಳಿದ್ದರೆ ಸಾಕು’ ಎಂದು ಸೈಕಲ್ ತಯಾರಕರಲ್ಲಿ ಒಬ್ಬರಾದ ತಮಿಳ್‌ ಕುಮಾರನ್ ಹೇಳುತ್ತಾರೆ.

‘ಕೆಲವು ಬಾರಿ ನದಿ ದಾಟಲು ತೆಪ್ಪಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇದಕ್ಕೆ ಪರಿಹಾರ ಕಂಡು ಹಿಡಿಯುವುದಕ್ಕಾಗಿ ಸೈಕಲ್‌ ಅಭಿವೃದ್ಧಿ ಪಡಿಸಿದ್ದೇವೆ. ತುರ್ತು ಸಂದರ್ಭಗಳಲ್ಲಿ ಇದನ್ನು ಬಳಸಬಹುದಾಗಿದೆ. ರಜಾ ದಿನಗಳಲ್ಲಿ ಜಲವಿಹಾರಕ್ಕೂ ಬಳಸಿ ಕೊಳ್ಳಬಹುದು’ ಎಂದರು.

‘ಸರ್ಕಾರ ಮಕ್ಕಳ ಸಾಧನೆಯನ್ನು ಗುರುತಿಸಿ ಮತ್ತಷ್ಟು ಪ್ರೋತ್ಸಾಹ ನೀಡಬೇಕು’ ಎಂದು ಸ್ಥಳೀಯರಾದ ಗೋಪಾಲ್‌ ಅವರು ‘ಬಿಪಿ9 ನ್ಯೂಸ್’ಗೆ ತಿಳಿಸಿದರು.

ಸೈಕಲ್‌ ಹೀಗಿದೆ… :

ನೆಲದಲ್ಲಿ ಸಂಚರಿಸುವ ಸೈಕಲ್‌ ಅನ್ನೇ ಮಾದರಿಯಾಗಿಟ್ಟುಕೊಂಡು ನೀರಿನ ಮೇಲೆ ಚಲಿಸಬಲ್ಲ ಸೈಕಲ್‌ ರೂಪಿಸಲಾಗಿದೆ. ಇದರಲ್ಲಿ ಚಕ್ರಗಳ ಬದಲು ತಲಾ ಆರು ಅಡಿಗಳ ನಾಲ್ಕು ಪಿವಿಸಿ ಪೈಪ್‌ಗಳನ್ನು ಸೈಕಲ್‌ನ ಎಡ ಬದಿ ಮತ್ತು ಬಲ ಬದಿಗಳಲ್ಲಿ ಸಮಾನಾಂತರವಾಗಿ ಬಳಸಲಾಗಿದೆ. ಹಿಂಬದಿ ಚಕ್ರದ ಜಾಗದಲ್ಲಿ ಟರ್ಬೈನ್‌ ಮಾದರಿಯ ಚಕ್ರವನ್ನು ಅಳವಡಿಸಲಾಗಿದೆ.
ಪಿವಿಸಿ ಪೈಪ್‌ಗಳಿಗೆ ಮುಂಭಾಗ ಮತ್ತು ಹಿಂಬದಿಗೆ ಕಬ್ಬಿಣದ ರಾಡ್‌ಗಳನ್ನು ಅಳವಡಿಸಲಾಗಿದೆ. ಈ ಪೈಪ್‌ಗಳು ನೀರಿನಲ್ಲಿ ಸೈಕಲ್‌ ತೇಲುವಂತೆ ಮಾಡುತ್ತವೆ.

ಚೈನ್‌ ಅನ್ನು ಪೆಡಲಿನಿಂದ ಹಿಂಬದಿಯ ಟರ್ಬೈನ್‌ಗೆ ಸಂಪರ್ಕಿಸಲಾಗಿದೆ. ಪೆಡಲ್‌ ಒತ್ತುತ್ತಿದ್ದಂತೆಯೇ, ಹಿಂದಿನ ಟರ್ಬೈನ್‌ ತಿರುಗಿ ನೀರನ್ನು ಹಿಂದಕ್ಕೆ ತಳ್ಳುತ್ತದೆ. ಆಗ ಸೈಕಲ್‌ ಮುಂದಕ್ಕೆ ಸಾಗುತ್ತದೆ. ಈ ಸೈಕಲ್‌ನಲ್ಲಿ ಒಬ್ಬರು ಮಾತ್ರ ಸಂಚರಿಸಬಹುದು. ನಿಂತ ನೀರಿನಲ್ಲಿ ಸೈಕಲ್‌ ಸುಲಭವಾಗಿ ಓಡಿಸಬಹುದು. ಪ್ರವಾಹ ಅಥವಾ ಸೆಳೆತ ಇರುವ ನೀರಿನಲ್ಲಿ ಓಡಿಸುವುದು ಕಷ್ಟ.

 

Please follow and like us:
0
http://bp9news.com/wp-content/uploads/2018/09/400888912-1.jpghttp://bp9news.com/wp-content/uploads/2018/09/400888912-1-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯStudent's spectacle !!! Bicycle floating in waterಮಹದೇಶ್ವರ ಬೆಟ್ಟ: ಇಲ್ಲಿಗೆ ಸಮೀಪ, ತಮಿಳುನಾಡು ಗಡಿಯಂಚಿನಲ್ಲಿರುವ ಕಾವೇರಿಪುರಂ ಗ್ರಾಮದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಚಲಿಸಬಲ್ಲ ಸೈಕಲ್‌ ಅಭಿವೃದ್ಧಿಪಡಿಸಿದ್ದಾರೆ. ಪಾಲಾರ್‌ ಗ್ರಾಮಕ್ಕೆ ಹತ್ತಿರದಲ್ಲಿರುವ ಕಾವೇರಿಪುರಂ ಗ್ರಾಮ ತಮಿಳುನಾಡಿಗೆ ಸೇರಿದೆ. ಇಲ್ಲಿ ಪಾಲಿಟೆಕ್ನಿಕ್‌ ಓದುತ್ತಿರುವ ತಮಿಳ್‌ ಕುಮಾರನ್‌ ಮತ್ತು ಗುಣ ಎಂಬುವರು ಈ ವಿನೂತನ ಸೈಕಲ್‌ನ ರೂವಾರಿಗಳು. ಇಂಧನ ರಹಿತವಾಗಿ ನದಿಯನ್ನು ದಾಟಲು ಬಳಸಬಹುದಾದ ಸೈಕಲ್‌ ಅನ್ನು ತಮ್ಮ ಗ್ರಾಮದ ಮಕ್ಕಳು ಅಭಿವೃದ್ಧಿ ಪಡಿಸಿರುವುದು ಗ್ರಾಮಸ್ಥರ ಸಂಭ್ರಮಕ್ಕೆ ಕಾರಣವಾಗಿದೆ. ಮಹದೇಶ್ವರ ಬೆಟ್ಟ: ಇಲ್ಲಿಗೆ ಸಮೀಪ,...Kannada News Portal