ಬಳ್ಳಾರಿ :  ಬಳ್ಳಾರಿ ಅಭ್ಯರ್ಥಿ ಸೋಮಶೇಖರ ರೆಡ್ಡಿ   ಮತ್ತು ಎಸ್.​ ಫಕೀರಪ್ಪ ಪರ ಕಿಚ್ಚ ಸುದೀಪ ಪ್ರಚಾರ ಮಾಡಲಿದ್ದಾರೆ. ಇಂದು ಬಳ್ಳಾರಿ ಗ್ರಾಮೀಣ ಮತ್ತು ಬಳ್ಳಾರಿ ಪಟ್ಟಣದಲ್ಲಿ   ಸೋಮಶೇಖರರೆಡ್ಡಿ ಪರ ಕ್ಯಾಂಪೇನ್​ ಮಾಡಲಿದ್ದಾರೆ. ಈಗಾಗಲೇ ಅಲ್ಲಿ ಸೋಮಶೇಖರ ರೆಡ್ಡಿ ಪರ    ಶ್ರೀ ರಾಮುಲು ರೋಡ್​ ಶೋ ಆರಂಭಿಸಿದ್ದಾರೆ. ಆ ರೋಡ್​ ಶೋ ನಲ್ಲಿ  ಸುದೀಪ್​  ಕೂಡ ಭಾಗವಹಿಸಲಿದ್ದಾರೆ ಎಂಬ  ಮಾಹಿತಿ ತಿಳಿದು ಬಂದಿದೆ. ಇನ್ನು  ಸದ್ಯ  ಏರ್​ಪೋರ್ಟ್​ಗೆ ಆಗಮಿಸಿರುವ ಸುದೀಪ್​ ಸುದ್ದಿಗಾರರ ಜೊತೆ ಪ್ರಚಾರದ ವಿಷಯವನ್ನು  ಪ್ರತಿಕ್ರಿಯಿಸಲು ಹಿಂದೇಟು  ಹಾಕಿದ್ದಾರೆ.

ಬಳ್ಳಾರಿಯಲ್ಲಿ ಮುಗಿಸಿ  ಆನಂತರ  ಶ್ರೀರಾಮುಲು  ಪರ ನಾಯಕನಹಟ್ಟಿಯಲ್ಲಿ ಸುದೀಪ್​ ರೋಡ್​ ಶೋ  ಮಾಡುತ್ತಾರೆ ಎಂಬ  ಸುದ್ದಿ   ಹೊರಬಿದ್ದಿದೆ.  ಅಂದಹಾಗೆ ಸುದೀಪ್​ ಸಿಎಂ ಪರವಾಗಿ ನಾನು ಮೊಳಕಾಲ್ಮೂರಿಗೆ  ಬಂದು ಪ್ರಚಾರ ಮಾಡಲ್ಲ, ಶ್ರೀರಾಮುಲು ನನಗೆ ಆತ್ಮೀಯ, ಅವರ ವಿರುದ್ಧ ಹೇಗೆ   ಪ್ರಚಾರ ಮಾಡಲು  ಸಾಧ್ಯವೆಂದು ತಾವೇ ಸ್ವತಃ ಹೇಳಿಕೆ ಕೊಟ್ಟ ಮೇಲೆ. ಇದೀಗ ಸುದೀಪ್ ಶ್ರೀರಾಮುಲುಪರ ಮೊಳಕಾಲ್ಮೂರಿನಲ್ಲಿ   ಪ್ರಚಾರ ಮಾಡಲಿದ್ದಾರೆ ಎಂಬ ಖಚಿತ   ಮಾಹಿತಿ ಹೊರ ಬಿದ್ದಿದೆ.

ಒಟ್ಟಾರೆ ಶ್ರೀರಾಮುಲು ಮತ್ತು  ಸುದೀಪ್​ ಒಂದೇ ಸಮುದಾಯದದವರು. ಆಗಾಗಿ  ನಾಯಕನಟ್ಟಿ ಸೇರಿದಂತೆ ಇನ್ನೂ ನಾಲ್ಕು ಕಡೆ  ಸುದೀಪ್​ ಪ್ರಚಾರ ಮಾಡುವಲ್ಲಿದ್ದಾರೆ.  ಇಂದು ಸುದೀಪ್​ ವೇಳಾಙಪಟ್ಟಿಯ ಪ್ರಕಾರ ಇಡೀ ದಿನ ಬಿಜೆಪಿ ಅಭ್ಯರ್ಥಿಗಳ ಪರ ರೋಡ್​ ಶೋ ನಡೆಸಲಿದ್ದಾರೆ.

Please follow and like us:
0
http://bp9news.com/wp-content/uploads/2018/05/download-1-3.jpghttp://bp9news.com/wp-content/uploads/2018/05/download-1-3-150x150.jpgBP9 Bureauಪ್ರಮುಖಬಳ್ಳಾರಿರಾಜಕೀಯಸಿನಿಮಾಬಳ್ಳಾರಿ :  ಬಳ್ಳಾರಿ ಅಭ್ಯರ್ಥಿ ಸೋಮಶೇಖರ ರೆಡ್ಡಿ   ಮತ್ತು ಎಸ್.​ ಫಕೀರಪ್ಪ ಪರ ಕಿಚ್ಚ ಸುದೀಪ ಪ್ರಚಾರ ಮಾಡಲಿದ್ದಾರೆ. ಇಂದು ಬಳ್ಳಾರಿ ಗ್ರಾಮೀಣ ಮತ್ತು ಬಳ್ಳಾರಿ ಪಟ್ಟಣದಲ್ಲಿ   ಸೋಮಶೇಖರರೆಡ್ಡಿ ಪರ ಕ್ಯಾಂಪೇನ್​ ಮಾಡಲಿದ್ದಾರೆ. ಈಗಾಗಲೇ ಅಲ್ಲಿ ಸೋಮಶೇಖರ ರೆಡ್ಡಿ ಪರ    ಶ್ರೀ ರಾಮುಲು ರೋಡ್​ ಶೋ ಆರಂಭಿಸಿದ್ದಾರೆ. ಆ ರೋಡ್​ ಶೋ ನಲ್ಲಿ  ಸುದೀಪ್​  ಕೂಡ ಭಾಗವಹಿಸಲಿದ್ದಾರೆ ಎಂಬ  ಮಾಹಿತಿ ತಿಳಿದು ಬಂದಿದೆ. ಇನ್ನು  ಸದ್ಯ  ಏರ್​ಪೋರ್ಟ್​ಗೆ...Kannada News Portal