ಸಿನಿಟಾಕ್​ : ಅಭಿನಯ ಚಕ್ರವರ್ತಿ  ಸದ್ಯ ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರಂತೆ. ಕೆಲ ಗಾಸಿಪ್​, ಅದೂ-ಇದೂ ಅಂತಾ ತಲೆಬಿಸಿ ಮಾಡಿಕೊಂಡಿದ್ದ  ಕಿಚ್ಚ ಸದ್ಯ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರಂತೆ ಅದಕ್ಕೆ ಕಾರಣ ಮನೆಗೆ ಬಂದಿರುವ ಹೊಸ ಅತಿಥಿ. ನಾಲ್ಕು ವರ್ಷದ ನಂತರ ಬಂದಿರೋ ಗೆಸ್ಟ್​ ಕಂಡ್ರೆ ಸುದೀಪ್​ಗೆ ಎಲ್ಲಿಲ್ಲದ ಪ್ರೀತಿ… ಯಾಕೆ ಗೊತ್ತಾ? ಇಲ್ಲಿದೆ  ನೋಡಿ ಅದರ ರಹಸ್ಯ.

ಅಂದ ಹಾಗೇ ಸುದೀಪ್​ ಮಿತಭಾಷಿ ಅನ್ನೋದು ಗೊತ್ತು. ಹೆಚ್ಚು ಮಾತನಾಡದೇ ಎಲ್ಲರನ್ನ ಅಟ್ರ್ಯಾಕ್ಟ್​ ಮಾಡುವ ಕಿಚ್ಚನ  ಗುಣ ಎಲ್ಲರಿಗೂ ಫೇವರೀಟ್​.  ಎಸ್​,  ಆ ಅತಿಥಿ ಇವರ ಜೊತೆ ಮಾತನಾಡದೇ ಇದ್ರೂ ಇಷ್ಟವಾಗ್ತಾರಂತೆ.  ಅಂದಹಾಗೇ ಕಿಚ್ಚನಿಗೆ ಇಷ್ಟವಾಗೋ ಆ ಅತಿಥಿ ಬೇರೆ ಯಾರೂ ಅಲ್ಲ. ಅದೇ ಸುದೀಪ್​ ಅವರ ಕ್ರಶ್​ ”ಕಾರ್”​. ಹೇಳಿ-ಕೇಳಿ ಸುದೀಪ್​ಗೆ ಕಾರ್​ ಕ್ರೇಜ್​ ಸಿಕ್ಕಾಪಟ್ಟೆ ಇದೆ. ಹೀಗಾಗಿ ಅವರು ಒಂದು ಹೊಸ ಕಾರನ್ನು ಕೊಂಡು ಕೊಂಡಿದ್ದಾರೆ. ಅವರ  ನ್ಯೂರ್​ ಕಾರ್​ ಜೊತೆಗಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಅಭಿಮಾನಿಗಳಿಗೂ ಕಾರ್​  ಕ್ರೇಜ್​ ಹುಟ್ಟುವ ಹಾಗೇ ಮಾಡಿರುವುದೇ ಸುದೀಪ್​ ಅವರ  ವಿಶೇಷತೆ.

ಆ ಕಾರ್​ನಲ್ಲಿ ಸೂಪರ್​ ಸ್ಪೆಷಾಲಿಟಿ ಏನಾದ್ರೂ ಇದ್ಯಾ ಅಂತಾ ಹುಡುಕ್ತಾ ಇರ್ತಾರೆ.  ಮನಸ್ಸಿಗೆ  ಹಿಡಿಸಿದ್ರೆ ಫಟ್​ ಅಂತಾ ತಕ್ಕೊಂಡ್​ ಬಿಟ್ತಾರೆ.  ಮೂರು ತಿಂಗಳ ಹಿಂದೆ ಸುದೀಪ್ ತನ್ನ ಅಕ್ಕನ ಮಗಳಿಗಾಗಿ ಜೀಪ್ ಖರೀದಿಸಿ ಅದನ್ನು ಗಿಫ್ಟ್ ಆಗಿ ನೀಡಿದ್ದರು. ಅದನ್ನು ಬಿಟ್ಟರೆ ಸುದೀಪ್ ತಮಗಾಗಿ ಎಂದೂ ನಾಲ್ಕು ವರ್ಷದಿಂದ ಯಾವುದೇ ಕಾರು ಖರೀದಿಸಿಲ್ಲ.

ಸುದೀಪ್ ಬಳಿ ಈಗಾಗಲೇ ರೇಂಜ್ ರೋವರ್, ಬಿಎಂಡಬ್ಲ್ಯೂ, ಫೋರ್ಡ್ ಸೇರಿದಂತೆ ಹಲವಾರು ಬೇರೆ ಬೇರೆ ಕಂಪೆನಿಯ ಕಾರುಗಳು ಇವೆ. ಅಲ್ಲದೇ ತಮ್ಮ ಬಳಿಯಿರುವ ಕಾರುಗಳಲ್ಲಿ ಒಂದು ಕಾರನ್ನು ಮಾರಾಟ ಮಾಡಿದ್ದರು. ನಂತರ ಅದರಿಂದ ಬಂದ ಹಣವನ್ನು ‘ವಿ ರೆಸ್ಪೆಕ್ಟ್ ಫಾರ್ಮರ್ಸ್’ ಟ್ರಸ್ಟ್ ಗೆ ಕಿಚ್ಚ ಸುದೀಪ್ ಹಣ ನೀಡಿ, ರೈತರಿಗೆ ಸಹಾಯ ಮಾಡಿದ್ದರು.

 

Please follow and like us:
0
http://bp9news.com/wp-content/uploads/2018/06/572559ac-ea13-11e7-ba01-0264b08f54bd.jpghttp://bp9news.com/wp-content/uploads/2018/06/572559ac-ea13-11e7-ba01-0264b08f54bd-150x150.jpgBP9 Bureauಪ್ರಮುಖಸಿನಿಮಾಸಿನಿಟಾಕ್​ : ಅಭಿನಯ ಚಕ್ರವರ್ತಿ  ಸದ್ಯ ರಿಲ್ಯಾಕ್ಸ್​ ಮೂಡ್​ನಲ್ಲಿದ್ದಾರಂತೆ. ಕೆಲ ಗಾಸಿಪ್​, ಅದೂ-ಇದೂ ಅಂತಾ ತಲೆಬಿಸಿ ಮಾಡಿಕೊಂಡಿದ್ದ  ಕಿಚ್ಚ ಸದ್ಯ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರಂತೆ ಅದಕ್ಕೆ ಕಾರಣ ಮನೆಗೆ ಬಂದಿರುವ ಹೊಸ ಅತಿಥಿ. ನಾಲ್ಕು ವರ್ಷದ ನಂತರ ಬಂದಿರೋ ಗೆಸ್ಟ್​ ಕಂಡ್ರೆ ಸುದೀಪ್​ಗೆ ಎಲ್ಲಿಲ್ಲದ ಪ್ರೀತಿ... ಯಾಕೆ ಗೊತ್ತಾ? ಇಲ್ಲಿದೆ  ನೋಡಿ ಅದರ ರಹಸ್ಯ. ಅಂದ ಹಾಗೇ ಸುದೀಪ್​ ಮಿತಭಾಷಿ ಅನ್ನೋದು ಗೊತ್ತು. ಹೆಚ್ಚು ಮಾತನಾಡದೇ ಎಲ್ಲರನ್ನ ಅಟ್ರ್ಯಾಕ್ಟ್​ ಮಾಡುವ ಕಿಚ್ಚನ ...Kannada News Portal