ಬೆಂಗಳೂರು :   ಸ್ಯಾಂಡಲ್​ವುಡ್​ ಸ್ಟಾರ್​  ಕಿಚ್ಚ  ಸುದೀಪ್​ ಕಾರ್ಯಕ್ರಮವೊಂದರಲ್ಲಿ  ಮಾತನಾಡುತ್ತಿದ್ದ ವೇಳೆ ತಮಗೆ ಮೊದಲು ಕ್ರಶ್​  ಆದ ಹುಡುಗಿಯ  ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

 ಮಹಿಳಾ ಅಭಿಮಾನಿಗಳನ್ನೇ  ಹೆಚ್ಚು ಹೊಂದಿರುವ ಅಭಿನಯ ಚಕ್ರವರ್ತಿ ಮೊದಲ ಬಾರಿಗೆ ಯಾವ ಹುಡುಗಿಗೆ ಮನಸೋತಿದ್ದು ಗೊತ್ತಾ…? ಅಂದಹಾಗೆ  ಕೆಲ ಹುಡುಗಿಯರಿಗೆ ಹೇಗಿರಬೇಕು ನಿಮ್ಮ ಹುಡುಗ ಅಂತಾ ಕೇಳಿದ್ರೆ  ಸುದೀಪ್​ ತರ ಇರಬೇಕು ಅಂತಾ ಹೇಳುತ್ತ್ತಾರೆ. ಆದರೆ ನಮ್ಮ ಸ್ಯಾಂಡಲ್​ವುಡ್​ ಮಹಾರಾಜ  ಸುದೀಪ್​ ಗೆ ಕ್ರಶ್​ ಆಗಿದ್ದು  ಒಬ್ಬ ಸಿನಿ ನಟಿಯ ಮೇಲಂತೆ…

 ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ.1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಸುದೀಪ್ ತಮ್ಮಕಾರ್ಯಕ್ರಮದ ಮೊದಲ ಸೆಗ್ಮೆಂಟ್​ ಅಂದರೆ (ಸತ್ಯನಾ… ಧೈರ್ಯನಾ…) ಎಂಬ ಟಾಸ್ಕ್ ನಲ್ಲಿ ಸುದೀಪ್ ಸತ್ಯ ಹೇಳುವ ಟಾಸ್ಕ್ ಆಯ್ಕೆ ಮಾಡಿಕೊಂಡಿದ್ದರು. ಆಗ ಶಿವಣ್ಣ ಕನ್ನಡ ಚಿತ್ರರಂಗದಲ್ಲಿರುವ ಯಾವ ನಟಿಯ ಮೇಲೆ ನಿಮಗೆ ಕ್ರಶ್ ಆಗಿತ್ತು ಎಂದು ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಸುದೀಪ್ ಕನಸಿನ ರಾಣಿ ನಟಿ ಮಾಲಾಶ್ರೀ ಮೇಲೆ ಕ್ರಶ್ ಆಗಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ಸುದೀಪ್ ಮಾಲಾಶ್ರೀ ಅವರ ಸಿನಿಮಾ ಬಿಡುಗಡೆಯಾದಾಗ ಅವರನ್ನೇ ನೋಡಲು ಹೋಗುತ್ತಿದ್ದೆ ಅಂತ ಹೇಳಿದ್ದಾರೆ. ಸದ್ಯಕ್ಕೆ ಸುದೀಪ್ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ.  ಲಕ್ಷಾಂತರ ಅಭಿಮಾನಿಗಳ ಮನಗೆದ್ದ ಕನಸಿನ ರಾಣಿ ಸುದೀಪ್​ ಮನಸ್ಸನ್ನ ಕದ್ದಿದ್ದಾರೆ.

 

Please follow and like us:
0
http://bp9news.com/wp-content/uploads/2018/05/kichcha-sudeep-759.jpghttp://bp9news.com/wp-content/uploads/2018/05/kichcha-sudeep-759-150x150.jpgBP9 Bureauಸಿನಿಮಾ ಬೆಂಗಳೂರು :   ಸ್ಯಾಂಡಲ್​ವುಡ್​ ಸ್ಟಾರ್​  ಕಿಚ್ಚ  ಸುದೀಪ್​ ಕಾರ್ಯಕ್ರಮವೊಂದರಲ್ಲಿ  ಮಾತನಾಡುತ್ತಿದ್ದ ವೇಳೆ ತಮಗೆ ಮೊದಲು ಕ್ರಶ್​  ಆದ ಹುಡುಗಿಯ  ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ.  ಮಹಿಳಾ ಅಭಿಮಾನಿಗಳನ್ನೇ  ಹೆಚ್ಚು ಹೊಂದಿರುವ ಅಭಿನಯ ಚಕ್ರವರ್ತಿ ಮೊದಲ ಬಾರಿಗೆ ಯಾವ ಹುಡುಗಿಗೆ ಮನಸೋತಿದ್ದು ಗೊತ್ತಾ...? ಅಂದಹಾಗೆ  ಕೆಲ ಹುಡುಗಿಯರಿಗೆ ಹೇಗಿರಬೇಕು ನಿಮ್ಮ ಹುಡುಗ ಅಂತಾ ಕೇಳಿದ್ರೆ  ಸುದೀಪ್​ ತರ ಇರಬೇಕು ಅಂತಾ ಹೇಳುತ್ತ್ತಾರೆ. ಆದರೆ ನಮ್ಮ ಸ್ಯಾಂಡಲ್​ವುಡ್​ ಮಹಾರಾಜ  ಸುದೀಪ್​ ಗೆ ಕ್ರಶ್​ ಆಗಿದ್ದು ...Kannada News Portal