ಬೆಂಗಳೂರು : ಕಿಚ್ಚ ಸುದೀಪ ಅವರು ಮತ್ತು ನಾನು ಒಂದೇ ಸಮುದಾಯದವರು. ಹಲವಾರು ಚಲನ ಚಿತ್ರಗಳಲ್ಲಿ ನಾಯಕನಾಗಿ ಹೊರ ಹೊಮ್ಮಿದ ನಮ್ಮ ಸುಮುದಾಯದ ನಾಯಕ ನಟ. ಹಾಗೆ ನಾನು ರಾಜಕೀಯ ವಲಯದಲ್ಲಿ ನಾಯಕ ಜನಾಂಗದ ಒರ್ವ ಮುಖಂಡ. ಆದ್ದರಿಂದ ನಮ್ಮ ವಿರುದ್ಧ ಸೋದರರಾದ ಕಿಚ್ಚ ಸುದೀಪ್ ಪ್ರಚಾರ ಮಾಡಲ್ಲ. ಈ ಬಗ್ಗೆ ನನ್ನ ಜೊತೆ ಸುದೀಪ್ ಅವರು ಕೂಡ ಮಾತನಾಡಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ನಾನು ನಿಮ್ಮ ವಿರುದ್ಧ ಬದಾಮಿಯಲ್ಲಿ ಪ್ರಚಾರ ಮಾಡಲ್ಲ ಎಂದಿದ್ದಾರೆ ಎಂದು ಶ್ರೀರಾಮುಲು ಮೊಳಕಾಲ್ಮೂರಿನಲ್ಲಿ ಸುದ್ದಿಗಾರರ ಜೊತೆ ಸ್ಪಷ್ಟ ಪಡಿಸಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಗಾಜಿನ ಮನೆಯಲ್ಲಿದ್ದು ಮತ್ತೊಬ್ಬರ ಗಾಜಿನ ಮನೆ ಮೇಲೆ ಕಲ್ಲು ಹೊಡೆಯಲು ಹೊರಟಿದ್ದಾರೆ ಎಂದು ಸಂಸದ ಬಿ.ಶ್ರೀರಾಮುಲು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನವರು ಮೂರು ಬಿಟ್ಟವರು, ಬಹಳ ಮೊಂಡರು, ಇವರ ಅಧಿಕಾರದ ಅವಧಿಯಲ್ಲಿ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ. ಸಿದ್ದರಾಮಯ್ಯ ನೈತಿಕತೆಯ ತಾಕತ್ತಿದ್ದರೆ ಆರೋಪ ಬಂದ ಮಂತ್ರಿಗಳನ್ನು ತೆಗೆದುಹಾಕಿ ತನಿಖೆ ಮಾಡಿಸಬೇಕಿತ್ತು ಎಂದರು.

ಸುದೀಪ್ ಬದಾಮಿಯಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸುದೀಪ್ ನಮ್ಮ ಸಮುದಾಯದ ಓರ್ವ ಕಲಾವಿದ. ಸಿನಿಮಾದಲ್ಲಿ ಸುದೀಪ್ ಅದ್ಭುತವಾಗಿ ನಟಿಸುತ್ತಾರೆ. ನಾನು ವಾಲ್ಮೀಕಿ ಸಮುದಾಯದ ರಾಜಕಾರಣಿ, ಸುದೀಪ್ ಪ್ರಚಾರಕ್ಕೆ ಬರುತ್ತಾರೆಂದ ತಕ್ಷಣ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದೆ. ಅವರೇ ಇಂದು ಮುಂಜಾನೆ ನನ್ನ ಜೊತೆ ಮಾತನಾಡಿದ್ದಾರೆ. ಪ್ರಚಾರಕ್ಕೆ ಬರಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದು ರಾಮುಲು ತಿಳಿಸಿದರು.

Please follow and like us:
0
http://bp9news.com/wp-content/uploads/2018/05/sudeep-sri1.jpghttp://bp9news.com/wp-content/uploads/2018/05/sudeep-sri1-150x150.jpgPolitical Bureauಚಿತ್ರದುರ್ಗಪ್ರಮುಖರಾಜಕೀಯSudheep not seen in Badami !!! : Sriramuluಬೆಂಗಳೂರು : ಕಿಚ್ಚ ಸುದೀಪ ಅವರು ಮತ್ತು ನಾನು ಒಂದೇ ಸಮುದಾಯದವರು. ಹಲವಾರು ಚಲನ ಚಿತ್ರಗಳಲ್ಲಿ ನಾಯಕನಾಗಿ ಹೊರ ಹೊಮ್ಮಿದ ನಮ್ಮ ಸುಮುದಾಯದ ನಾಯಕ ನಟ. ಹಾಗೆ ನಾನು ರಾಜಕೀಯ ವಲಯದಲ್ಲಿ ನಾಯಕ ಜನಾಂಗದ ಒರ್ವ ಮುಖಂಡ. ಆದ್ದರಿಂದ ನಮ್ಮ ವಿರುದ್ಧ ಸೋದರರಾದ ಕಿಚ್ಚ ಸುದೀಪ್ ಪ್ರಚಾರ ಮಾಡಲ್ಲ. ಈ ಬಗ್ಗೆ ನನ್ನ ಜೊತೆ ಸುದೀಪ್ ಅವರು ಕೂಡ ಮಾತನಾಡಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ನಾನು ನಿಮ್ಮ ವಿರುದ್ಧ ಬದಾಮಿಯಲ್ಲಿ...Kannada News Portal