ನವದೆಹಲಿ : ಕಾಂಗ್ರೆಸ್​ ಸಂಸದ ಶಶಿ ತರೂರ್​ ಪತ್ನಿ ಸುನಂದಾ ಪುಷ್ಕರ್​ ಅನುಮಾನಾಸ್ಪದ  ಸಾವಿನ  ಪ್ರಕರಣದಲ್ಲಿ ದೆಹಲಿ ಪೊಲೀಸರು  ಚಾರ್ಜ್​ ಶೀಟ್​ ಸಲ್ಲಿಸಿದ್ದು ,ಅದರಲ್ಲಿ  ಶಶಿ  ತರೂರ್​ ಅವರ ವಿರುದ್ಧ  ಆತ್ಮಹತ್ಯೆಗೆ ಪ್ರಚೋದನೆ  ನೀಡಿದ ಆರೋಪ  ಹೊರಿಸಲಾಗಿದೆ.  

  ಪಾಟಿಯಾಲ  ಹೌಸ್​  ಕೋರ್ಟ್​ನ  ಮೆಟ್ರೋ ಪೊಲಿಟನ್​ ಮ್ಯಾಜಿಸ್ಟ್ರೇಟ್​ ಧರ್ಮೇಂಧರ್​​ ಅವರಿಗೆ  ಚಾರ್ಜ್​ ಷೀಟ್​ ಸಲ್ಲಿಸಿದ್ದು   ಅದರಲ್ಲಿ ಸುನಂದಾ  ಪುಷ್ಕರ್​ ಅವರದ್ದು ಆತ್ಮಹತ್ಯೆಯೇ ವಿನಾ ಕೊಲೆಯಲ್ಲ.  ಎಂದು ಪೊಲೀಸರು ಅಭಿಪ್ರಾಯ  ವ್ಯಕ್ತಪಡಿಸಿದ್ದಾರೆ.

ಪೊಲೀಸರು ತಮ್ಮ ಅಂತಿಮ ವರದಿಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ಮತ್ತು 498ಎ ಅಡಿಯಲ್ಲಿ ಶಶಿ ತರೂರ್ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಪತ್ನಿ ಮೇಲಿನ ಕ್ರೌರ್ಯದ ಆರೋಪಗಳನ್ನು ಹೊರಿಸಿದ್ದಾರೆ. ತರೂರ್‌ ಅವರನ್ನು ಶಂಕಿತ ಎಂದು ಎರಡನೆಯ ಕಾಲಂನಲ್ಲಿ ನಮೂದಿಸಲಾಗಿದೆ.

ಮೇ 24ರಂದು ಕೋರ್ಟ್‌ ಚಾರ್ಜ್‌ಶೀಟ್‌ ಸಂಬಂಧ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ತರೂರ್ ಅವರಿಗೆ ಸಮನ್ಸ್ ನೀಡುವ ಸಂಬಂಧ ದೆಹಲಿ ಪೊಲೀಸರು ಮನವಿ ಸಲ್ಲಿಸಲಿದ್ದಾರೆ. ಪ್ರಕರಣದಲ್ಲಿ ತರೂರ್ ಅವರನ್ನು ಶಂಕಿತ ಎಂದು ಕೋರ್ಟ್ ಪರಿಗಣಿಸಿದರೆ ಮಾತ್ರ ಅವರ ವಿರುದ್ಧ ಕಾನೂನಾತ್ಮಕ ಪ್ರಕ್ರಿಯೆ ನಡೆಸಲು ಸಮನ್ಸ್‌ ನೀಡಬಹುದಾಗಿದೆ.

ಸುನಂದಾ ಪುಷ್ಕರ್ ಅವರು 2014ರ ಜನವರಿ 17ರಂದು ದಕ್ಷಿಣ ದೆಹಲಿಯ ಲೀಲಾ ಹೋಟೆಲ್‌ನ 345ನೇ ರೂಮ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದರು. ಐಪಿಸಿ ಸೆಕ್ಷನ್ 302ರ ಅಡಿ ಪ್ರಕರಣ ದಾಖಲಾಗಿತ್ತು.

Please follow and like us:
0
http://bp9news.com/wp-content/uploads/2018/05/Sunanda-Pushkar.jpghttp://bp9news.com/wp-content/uploads/2018/05/Sunanda-Pushkar-150x150.jpgBP9 Bureauಪ್ರಮುಖರಾಷ್ಟ್ರೀಯ  ನವದೆಹಲಿ : ಕಾಂಗ್ರೆಸ್​ ಸಂಸದ ಶಶಿ ತರೂರ್​ ಪತ್ನಿ ಸುನಂದಾ ಪುಷ್ಕರ್​ ಅನುಮಾನಾಸ್ಪದ  ಸಾವಿನ  ಪ್ರಕರಣದಲ್ಲಿ ದೆಹಲಿ ಪೊಲೀಸರು  ಚಾರ್ಜ್​ ಶೀಟ್​ ಸಲ್ಲಿಸಿದ್ದು ,ಅದರಲ್ಲಿ  ಶಶಿ  ತರೂರ್​ ಅವರ ವಿರುದ್ಧ  ಆತ್ಮಹತ್ಯೆಗೆ ಪ್ರಚೋದನೆ  ನೀಡಿದ ಆರೋಪ  ಹೊರಿಸಲಾಗಿದೆ.     ಪಾಟಿಯಾಲ  ಹೌಸ್​  ಕೋರ್ಟ್​ನ  ಮೆಟ್ರೋ ಪೊಲಿಟನ್​ ಮ್ಯಾಜಿಸ್ಟ್ರೇಟ್​ ಧರ್ಮೇಂಧರ್​​ ಅವರಿಗೆ  ಚಾರ್ಜ್​ ಷೀಟ್​ ಸಲ್ಲಿಸಿದ್ದು   ಅದರಲ್ಲಿ ಸುನಂದಾ  ಪುಷ್ಕರ್​ ಅವರದ್ದು ಆತ್ಮಹತ್ಯೆಯೇ ವಿನಾ ಕೊಲೆಯಲ್ಲ.  ಎಂದು ಪೊಲೀಸರು ಅಭಿಪ್ರಾಯ ...Kannada News Portal