ಬೆಂಗಳೂರು : ಮೇಲಧಿಕಾರಿ ವಿರುದ್ಧ ಸಿಂಗಂ ಸಿನಿಮಾ ಸ್ಟೈಲಿನಲ್ಲಿ ಆವಾಜ್ ಹಾಕಿದ್ದ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣೆ ಪಿಎಸ್ಐ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ.

ವಿಶ್ವನಾಥಪುರ ಎಸ್ಐ ಶ್ರೀನಿವಾಸ್ ಸ್ಥಳೀಯ ಜನರಿಗೆ ತೊಂದರೆ ಕೊಡುತ್ತಿದ್ದ ಆರೋಪ ಹಾಗೂ ಮೇಲಧಿಕಾರಿಯಾದ ವಿಜಯಪುರ ಪೊಲೀಸ್ ಇಸ್ಪೆಕ್ಟರ್ ಮಂಜುನಾಥ್ ವಿರುದ್ಧ ಶಿಷ್ಠಾಚಾರ ಬಿಟ್ಟು ಸಾರ್ವಜನಿಕವಾಗಿ ಅಸಭ್ಯವಾಗಿ ಮಾತನಾಡಿದ ಹಿನ್ನಲೆಯಲ್ಲಿ ತನಿಖೆ ನಡೆಸಿ ಕ್ರಮ ತೆಗೆದು ಕೊಳ್ಳುವ ಸಲುವಾಗಿ ಪಿಎಸ್ಐ ಶ್ರೀನಿವಾಸ್ಅವರನ್ನು ಅಮಾನತು ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಭೀಮಾಶಂಕರ್ ಗುಳೇದ್ ಆದೇಶ ಹೊರಡಿಸಿದ್ದಾರೆ.

ಅಲ್ಲದೇ ಬಿಪಿ9 ಜತೆ ಮಾತನಾಡಿದ ಎಸ್ಪಿ, ಸಾಮಾಜಿಕ ಜಾಲತಾಣಗಳು ಈ ದಿನ ಯಾವ ಸ್ಥಿತಿಗೆ ತಲುಪಿದೆ ಎಂದರೆ ಬೇರೆ ಕೆಲಸವಿಲ್ಲದೆ, ನಿಜ ಸಂಗತಿ ಅರಿಯದೆ, ಕಾನೂನು ಕಟ್ಟಲೆ ತಿಳಿಯದೇ ಎಲ್ಲೋ ಕುಳಿತು ಕಮೆಂಟ್ ಮಾಡಿ, ತಪ್ಪನ್ನೇ ಸರಿ ಎನ್ನುತ್ತಾ, ತಪ್ಪು ಮಾಡಿದವರನ್ನೇ ಹೀರೋಗಳನ್ನಾಗಿ ಬಿಂಬಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಅಧಿಕಾರಿಯ ಆದೇಶಕ್ಕೆ ಸೊಪ್ಪು ಹಾಕದೆ ಟಾಂಗ್ ನೀಡಿದ್ದ ಪಿಎಸ್ಐ ಶ್ರೀನಿವಾಸ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

Please follow and like us:
0
http://bp9news.com/wp-content/uploads/2018/06/vairal-video-Karnatakada-Miditha.jpeghttp://bp9news.com/wp-content/uploads/2018/06/vairal-video-Karnatakada-Miditha-150x150.jpegPolitical Bureauಪ್ರಮುಖರಾಜಕೀಯSuspended PSI suspended over boss SP simply says that they are just doing heroes !!!ಬೆಂಗಳೂರು : ಮೇಲಧಿಕಾರಿ ವಿರುದ್ಧ ಸಿಂಗಂ ಸಿನಿಮಾ ಸ್ಟೈಲಿನಲ್ಲಿ ಆವಾಜ್ ಹಾಕಿದ್ದ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣೆ ಪಿಎಸ್ಐ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ. ವಿಶ್ವನಾಥಪುರ ಎಸ್ಐ ಶ್ರೀನಿವಾಸ್ ಸ್ಥಳೀಯ ಜನರಿಗೆ ತೊಂದರೆ ಕೊಡುತ್ತಿದ್ದ ಆರೋಪ ಹಾಗೂ ಮೇಲಧಿಕಾರಿಯಾದ ವಿಜಯಪುರ ಪೊಲೀಸ್ ಇಸ್ಪೆಕ್ಟರ್ ಮಂಜುನಾಥ್ ವಿರುದ್ಧ ಶಿಷ್ಠಾಚಾರ ಬಿಟ್ಟು ಸಾರ್ವಜನಿಕವಾಗಿ ಅಸಭ್ಯವಾಗಿ ಮಾತನಾಡಿದ ಹಿನ್ನಲೆಯಲ್ಲಿ ತನಿಖೆ ನಡೆಸಿ ಕ್ರಮ ತೆಗೆದು ಕೊಳ್ಳುವ ಸಲುವಾಗಿ ಪಿಎಸ್ಐ ಶ್ರೀನಿವಾಸ್ಅವರನ್ನು ಅಮಾನತು ಮಾಡಲಾಗಿದೆ ಎಂದು...Kannada News Portal