ಬೆಂಗಳೂರು : ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಒಂದೆರಡು ದಿನ ವಾಸ್ತವ್ಯ ಹೂಡಿ ಶಾಲಾ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಕೆಂದಾಳು ಬಯಲು ಗ್ರಾಮದ ಬಳಿ ಆಶಿಕಾ ಎಂಬ ವಿದ್ಯಾರ್ಥಿನಿ ತನ್ನ ತಾಯಿ ಎದುರೇ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆಯನ್ನು ಸರ್ಕಾರ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನೀರಿನಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿನಿಯ ಕುಟುಂಬಕ್ಕೆ ಶಿಕ್ಷಕರ ಅಭಿವೃದ್ಧಿ ನಿಧಿಯಿಂದ ಒಂದು ಲಕ್ಷ ರೂ., ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹೆಚ್ಚಿನ ನೆರವು ನೀಡುವುದು ಒಂದು ಭಾಗವಾದರೆ, ಅಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಮತ್ತೊಂದು ಭಾಗ ಎಂದು ಹೇಳಿದ್ದಾರೆ.

ಅಲ್ಲದೇ ಶಿವಮೊಗ್ಗ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ನೀರಿನಲ್ಲಿ ಕೊಚ್ಚಿ ಹೋದ ಸ್ಥಳದ ಕಾಲು ದಾರಿ ಕುಸಿದಿದೆ. ಆ ಭಾಗದಲ್ಲಿ ಅಡಿಕೆ ಮರಗಳನ್ನು ಇಟ್ಟಿದ್ದಾರೆ ಅಲ್ಲಿ ಅತಡೆಗೋಡೆಗಳಿಲ್ಲ. ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡಿದ್ದು, ಮುರಿದಿರುವ ಕಾಲು ದಾರಿ ಸರಿ ಮಾಡಿ ತಡೆ ಗೋಡೆ ಕಟ್ಟಲು ನಿರ್ದೇಶನ ನೀಡಲಾಗಿದೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಪ್ಲ್ಯಾನ್​ ಫುಲ್ ಆಗಿ ಪಕ್ಷ ಸಂಘಟಿಸುತ್ತಿದ್ದಾರಾ ಕುಮಾರಸ್ವಾಮಿ :

ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಜೆಡಿಎಸ್ ಹೇಳಿಕೊಳ್ಳುವಷ್ಟು  ಸ್ಟ್ರಾಂಗ್​  ಆಗಿ ಏನು ಇಲ್ಲ. ಆದ ಕಾರಣವಾಗಿಯೇ ಸಿಎಂ ಕುಮಾರಸ್ವಾಮಿ ಅವಕಾಶ ಸಿಕ್ಕ ಸಿಕ್ಕಾಗಲೆಲ್ಲಾ ಸರ್ಕಾರದ ಕೆಲಸ ಜತೆ ಜೊತೆಗೆ ಪಕ್ಷ ಸಂಘಟನೆ ಕೆಲಸವನ್ನು ಮಾಡಿಕೊಳ್ಳುತ್ತಿದ್ದಾರೆ.

ಇದಕ್ಕೆ ಒಂದು ಪಕ್ಕಾ ಉದಾಹರಣೆ ಅಂದ್ರೆ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಒಂದೆರಡು ದಿನ ವಾಸ್ತವ್ಯ ಹೂಡುತ್ತಿರುವುದು. ವರುಣನ ಆರ್ಭಟದಿಂದ ಬಸವಳಿಯುತ್ತಿರುವ ಮಲೆನಾಡು ಭಾಗದ ಜನರ ಗಮನ ಮತ್ತು ಮನ ಸೆಳೆಯಲು ಅಲ್ಲಿಯೇ 2 ದಿನ ವಾಸ್ತವ್ಯ ಹೂಡಿ ಜನ ಮೆಚ್ಚುಗೆಗೆ ಪಾತ್ರವಾಗಿ ಅಲ್ಲಿನ ಸಮಸ್ಯೆ ಬಗೆ ಹರಿಸುವುದರ ಜೊತೆಗೆ ಪಕ್ಷವನ್ನು ಸಂಘಟನೆ ಮಾಡುವಲ್ಲಿ ಈ ಪ್ರವಾಸ ಸಾಕಷ್ಟು ಅನುವು ಮಾಡಿಕೊಡುತ್ತದೆ. ಆ ಕಾರಣವಾಗಿಯೇ ಕುಮಾರ ಸ್ವಾಮಿ ಅವರು ಈ ವಾಸ್ತವ್ಯದ ಪ್ರವಾಸಕ್ಕೆ ಮುಂದಾಗಿದ್ದು, ಮುಂಬರುವ ಲೋಕ ಸಭೆ ಮತ್ತು ಮುಂದಿನ ದಿನಗಳ ರಾಜಕೀಯ ಬೆಳವಣಿಗೆಗಾಗಿ ಪಕ್ಷವನ್ನು ಸಂಘಟಿಸುವ ದೃಷ್ಠಿಯಿಂದ ಪ್ಲಾನ್ ಫುಲ್ ಆಗಿ ಪಕ್ಷ ಸಂಘಟಿಸುತ್ತಿದ್ದಾರೆ ಎಂದು ರಾಜ್ಯ ರಾಜಕೀಯದ ಪಡಸಾಲೆ ಮಾತನಾಡಿಕೊಳ್ಳುತ್ತಿದೆ. ಇದನ್ನು ನೋಡಿ ಕಾಂಗ್ರಸ್ ಕೆಲ ಮುಖಂಡರು ಕೈ ಕೈ ಹಿಸುಕಿ ಕೊಳ್ಳುತ್ತಿದ್ದಾರೆ ಎಂಬ ಚರ್ಚೆಯೂ ಕೂಡ ಇದ್ದೇ ಇದೆ.

Please follow and like us:
0
http://bp9news.com/wp-content/uploads/2018/07/CM-Kumaraswamy-1.jpghttp://bp9news.com/wp-content/uploads/2018/07/CM-Kumaraswamy-1-150x150.jpgPolitical Bureauಪ್ರಮುಖರಾಜಕೀಯಶಿವಮೊಗ್ಗSwami Vivekananda: The CM after the session : The party organizes the party like Kumaraswamy ???ಬೆಂಗಳೂರು : ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಒಂದೆರಡು ದಿನ ವಾಸ್ತವ್ಯ ಹೂಡಿ ಶಾಲಾ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಕೆಂದಾಳು ಬಯಲು ಗ್ರಾಮದ ಬಳಿ ಆಶಿಕಾ ಎಂಬ ವಿದ್ಯಾರ್ಥಿನಿ ತನ್ನ ತಾಯಿ ಎದುರೇ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆಯನ್ನು ಸರ್ಕಾರ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನೀರಿನಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿನಿಯ ಕುಟುಂಬಕ್ಕೆ ಶಿಕ್ಷಕರ ಅಭಿವೃದ್ಧಿ ನಿಧಿಯಿಂದ ಒಂದು...Kannada News Portal