ಮೈಸೂರು : ಹೆಚ್ಚುವರಿಯಾಗಿ ಇನ್ನೂ 35 ಸಾವಿರ ರೇಷ್ಮೆ ಸೀರೆ ಉತ್ಪಾದನೆಗೆ ಸಿದ್ದತೆ ನಡೆಯುತ್ತಿದೆ ಎಂದು ರಾಜ್ಯ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

ಇಲ್ಲಿನ ಮಾನಂದವಾಡಿ ರಸ್ತೆಯಲ್ಲಿರುವ ರೇಷ್ಮೆ ಇಲಾಖೆಯ ಶತಮಾನೋತ್ಸವ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಇದರಿಂದಾಗಿ ರಾಜ್ಯದ ಮಹಿಳೆಯರಿಗೆ ಮೈಸೂರು ಸಿಲ್ಕ್ ನ  ಹೊಸ ಹೊಸ ಬಗೆಯ ಹೊಸ ಡಿಸೈನ್ ನ ಸೀರೆಗಳು ಮಾರುಕಟ್ಟೆಗೆ ಬರಲಿವೆ.

ಇದಲ್ಲದೆ, ಮುಂದಿನ ವಾರ ಮೈಸೂರಿನಲ್ಲಿ ಪ್ರವಾಸೋಧ್ಯಮ ಮತ್ತು ರೇಷ್ಮೆ‌ ಇಲಾಖೆಗೆ ಸಂಬಂಧಿಸಿದಂತೆ ಸಭೆ ನಡೆಸುತ್ತೇನೆ.  ಆಸಕ್ತರು ಹಾಗೂ ಹೋಟೆಲ್ ಮಾಲೀಕರನ್ನು ಇದಕ್ಕೆ ಕರೆಯುತ್ತಾನೆ. ಮುಖ್ಯಮಂತ್ರಿಗಳು ಪ್ರವಾಸೋದ್ಯಮದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಯುವಕರಿಗೆ ಉದ್ಯೋಗ ನೀಡಲು ಇನ್ನೊಂದು ಉತ್ತಮ ಅವಕಾಶ.

ನಕಲಿ ರೇಷ್ಮೆ ಮಾರಾಟ ಗಮನಕ್ಕೆ ಬಂದಿಲ್ಲ

ಮೈಸೂರು ಸಿಲ್ಕ್ ಇಡಿ ದೇಶದಲ್ಲೇ ಉತ್ತಮ. ಇಂದಿನ ಸರ್ಕಾರಗಳು ಸಾಕಾದಷ್ಟು ಪ್ರೋತ್ಸಹ ನೀಡುತ್ತಾ ಬಂದಿವೆ. ನಾನು ಸಹ ಪ್ರವಾಸೋದ್ಯಮದ ಜೊತೆಗೆ ಈ ಇಲಾಖೆಯ ಜವಾಬ್ದಾರಿಯನ್ನ ಹೊತ್ತಿದ್ದೇನೆ. ಕಾರ್ಮಿಕರ ಶ್ರಮದಿಂದ ಈ ಫ್ಯಾಕ್ಟರಿ ಲಾಭದಲ್ಲಿದೆ.

ಮೈಸೂರು‌ ರೇಷ್ಮೆ‌ ಸಿಲ್ಕ್ ಹೆಸರು ಹೇಳಿಕೊಂಡು ಸಿಲ್ಕ್ ಮಾರಾಟ ಮಾಡುವ ವಿಚಾರ.  ಇಂತಹ ವಿಷಯಗಳು ನನ್ನ ಗಮನಕ್ಕೆ ಬಂದಿಲ್ಲ. ಅಕ್ರಮವಾಗಿ ಮಾರಾಟ ಮಾಡುವುದು ಕಂಡು ಬಂದರೆ ಕ್ರಮ‌ ಕೈಗೊಳ್ಳಲಾಗುವುದು. ಇಂತಹ ಬೆಳವಣಿಗೆ ಕಂಡು ಬಂದರೆ ತನಿಖಾ ತಂಡ‌ ರಚನೆ ಮಾಡಿ ತನಿಖೆ ಮಾಡಿಸುತ್ತೇನೆ.

Please follow and like us:
0
http://bp9news.com/wp-content/uploads/2018/06/ಸಾ.ರಾ.ಮಹೇಶ್-2.jpghttp://bp9news.com/wp-content/uploads/2018/06/ಸಾ.ರಾ.ಮಹೇಶ್-2-150x150.jpgBP9 Bureauಪ್ರಮುಖಮೈಸೂರು : ಹೆಚ್ಚುವರಿಯಾಗಿ ಇನ್ನೂ 35 ಸಾವಿರ ರೇಷ್ಮೆ ಸೀರೆ ಉತ್ಪಾದನೆಗೆ ಸಿದ್ದತೆ ನಡೆಯುತ್ತಿದೆ ಎಂದು ರಾಜ್ಯ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಇಲ್ಲಿನ ಮಾನಂದವಾಡಿ ರಸ್ತೆಯಲ್ಲಿರುವ ರೇಷ್ಮೆ ಇಲಾಖೆಯ ಶತಮಾನೋತ್ಸವ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಇದರಿಂದಾಗಿ ರಾಜ್ಯದ ಮಹಿಳೆಯರಿಗೆ ಮೈಸೂರು ಸಿಲ್ಕ್ ನ  ಹೊಸ ಹೊಸ ಬಗೆಯ ಹೊಸ ಡಿಸೈನ್ ನ ಸೀರೆಗಳು ಮಾರುಕಟ್ಟೆಗೆ ಬರಲಿವೆ. ಇದಲ್ಲದೆ, ಮುಂದಿನ ವಾರ ಮೈಸೂರಿನಲ್ಲಿ ಪ್ರವಾಸೋಧ್ಯಮ ಮತ್ತು ರೇಷ್ಮೆ‌...Kannada News Portal