ಮಂಡ್ಯ : ಪ್ರಸಕ್ತ ಸಾಲಿಗೆ ಮಂಡ್ಯ ಜಿಲ್ಲಾ ಪಂಚಾಯ್ತಿಯ ಕಾರ್ಯಕ್ರಮಗಳಿಗೆ ಒಟ್ಟು 77728.43 ಲಕ್ಷ ರೂ.ಗಳ ಅನುದಾನ ಹಂಚಿಕೆ ಮಾಡುವ ಮೂಲಕ ಪ್ರಸಕ್ತ ಸಾಲಿನ ಬಜೆಟ್ ಅನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಾಗರತ್ನ ಸ್ವಾಮಿ ಅವರು ಬುಧುವಾರ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ಮಂಡಿಸಿದರು.

26531.08 ಲಕ್ಷ ರೂ ಗಳನ್ನು ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ, 51083.35 ಲಕ್ಷ ರೂಗಳನ್ನು ತಾಲ್ಲೂಕು ಪಂಚಾಯತ್ ಕಾರ್ಯಕ್ರಮಗಳಿಗೆ ಮತ್ತು ರೂ.114.00 ಲಕ್ಷಗಳು ಗ್ರಾಮ ಪಂಚಾಯತ್ ಕಾರ್ಯಕ್ರಮಗಳಿಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ.

2018-19ನೇ ಸಾಲಿಗೆ ಸರ್ಕಾರದಿಂದ ಜಿಲ್ಲಾ ಪಂಚಾಯತ್ ಕಾರ್ಯಕ್ರಮದಡಿ ರೂ.77728.43 ಲಕ್ಷಗಳನ್ನು ಜಿಲ್ಲೆಗೆ ಹಿಂದಿನ ವರ್ಷಕ್ಕಿಂತ 1117.82 ಲಕ್ಷಗಳ ಅನುದಾನವನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಈ ಸಾಲಿನಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು 437.13 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಬಿಸಿಯೂಟ ಕಾರ್ಯಕ್ರಮಕ್ಕೆ 47.65 ಕೋಟಿ ರೂ. ನಿಗದಿಪಡಿಸಿದೆ. ಕಳೆದ ವರ್ಷ ಬಿಸಿಯೂಟಕ್ಕೆ 40.42 ಕೋಟಿ ರೂ. ಹಣವನ್ನು ಒದಗಿಸಿದ್ದು, ಈ ಬಾರಿ 7.233 ಕೋಟಿ ರೂ. ಹೆಚ್ಚುವ ಅನುದಾನ ಒದಗಿಸಲಾಗಿದೆ.
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಗೆ 9 ಲಕ್ಷ ರೂ. ನಿಗದಿಯಾಗಿದೆ. ಜಿಲ್ಲೆಯಲ್ಲಿ 234 ಗ್ರಾಮ ಲೋಕ ಶಿಕ್ಷಣ ಸಮಿತಿಗಳಿದ್ದು, ಆಯ್ದ ಗ್ರಾ.ಪಂ.ಗಳಲ್ಲಿ ಮೂಲ ಸಾಕ್ಷರತೆ ಹಮ್ಮಿಕೊಳ್ಳಲಾಗಿದೆ. ಜನ್-ಧನ್, ಬಾಲ್ಯವಿವಾಹ ನಿಷೇಧ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಹಾಗೂ ಸ್ವಚ್ಛ ಭಾರತ್ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ 1.54 ಕೋಟಿ ರೂ. ಹಣ ಒದಗಿಸಲಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕ್ರೀಡಾಂಗಣ, ಆರು ತಾಲೂಕು ಕ್ರೀಡಾಂಗಳಿದ್ದು, ಶ್ರೀರಂಗಪಟ್ಟಣದಲ್ಲಿ ಒಂದು ತಾಲೂಕು ಯುವಜನ ಕೇಂದ್ರವಿದೆ. ಯೋಜನೆಯ ಅನುದಾನದಲ್ಲಿ ಎಲ್ಲವನ್ನೂ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ಸದರಿ ಅನುದಾನದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವೇತನ, ಕಚೇರಿ ವೆಚ್ಚ, ಅಂತರರಾಷ್ಟ್ರ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಪ್ರೋತ್ಸಾಹಧನ, ಸಂಘ ಸಂಸ್ಥೆಗಳಿಗೆ ಕ್ರೀಡಾ ಸಲಕರಣೆಗಳನ್ನು ಕೊಳ್ಳಲು ಅನುದಾನ, ಗ್ರಾಮಾಂತರ ಪ್ರದೇಶದ ಆಟದ ಮೈದಾನಗಳ ಅಭಿವೃದ್ಧಿ, ಕ್ರೀಡಾಕೂಟಗಳನ್ನು ನಡೆಸುವುದು, ಪರಿಸರ, ಹಿರಿಯ ನಾಗರೀಕರ, ಮಹಿಳಾ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಅಂಗವಿಕಲರ ದಿನಾಚರಣೆ ಕಾರ್ಯಕ್ರಮಕ್ಕೆ ವೆಚ್ಚ ಮಾಡಲಾಗುವುದು ಎಂದು ವಿವರಿಸಿದರು.

ಆರೋಗ್ಯ ಇಲಾಖೆಗೆ 56.92 ಕೋಟಿ ರೂ. ನೀಡಿದ್ದು, ಈ ಹಣದಲ್ಲಿ ಕಟ್ಟಡಗಳ ದುರಸ್ತಿಗೆ 69 ಲಕ್ಷ ರೂ ರೂ., ಸಲಕರಣೆಗಳ ಖರೀದಿ, ರಿಪೇರಿಗೆ 18 ಲಕ್ಷ ರೂ ., ಸಾಮಗ್ರಿಗಳ ಖರೀದಿಗೆ 18 ಲಕ್ಷ ರೂ. ತಾ.ಪಂ. ಲೆಕ್ಕ ಶೀರ್ಷಿಕೆಯಲ್ಲಿ ಸಾಮಗ್ರಿಗಳ ಖರೀದಿಗಾಗಿ 18 ಲಕ್ಷ ರೂ.ಗಳನ್ನು ಉಪಯೋಗಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಗೆ 42.72 ಕೋಟಿ ರೂ. ನಿಗದಿಯಾಗಿದೆ. ಜಿ.ಪಂ. ಕಾರ್ಯಕ್ರಮಗಳಿಗೆ 17.24 ಕೋಟಿ, ತಾಪಂ ಕಾರ್ಯಕ್ರಮಗಳಿಗೆ 25.47 ಕೋಟಿ, ಈ ಪೈಕಿ ಪರಿಶಿಷ್ಟ ಜಾತಿ ಉಪಯೋಜನೆಗೆ 1.58 ಕೋಟಿ ರೂ., ಬುಡಕಟ್ಟು ಯೋಜನೆಗೆ 32 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದರು.

ಕೃಷಿ ಇಲಾಖೆಗೆ ಪ್ರಸಕ್ತ ವರ್ಷ 8.18 ಕೋಟಿ ರೂ. ಅನುದಾನ ನೀಡಿದ್ದರೆ, ತೋಟಗಾರಿಕೆ ಇಲಾಖೆಗೆ 7.24 ಕೋಟಿ ರೂ. ಅನುದಾನ ಒದಗಿಸಿದೆ. ಪಶುಪಾಲನಾ ಮತ್ತು ಪಶುವೈದ್ಯ ಸೇವೆಗಳಿಗೆ 26.01 ಕೋಟಿ ರೂ. ಹಣ ಒದಗಿಸಲಾಗಿದೆ. ವೇತನಕ್ಕಾಗಿ 23.34 ಕೋಟಿ ರೂ., ವೇತನೇತರ ಬಾಬ್ತು 2.67 ಕೋಟಿ ರೂ. ಹಣವನ್ನು ಒದಗಿಸಿರುವುದಾಗಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳ ವಿವಿಧ ಲೆಕ್ಕಶೀರ್ಷಿಕೆಯಡಿ 82.05 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಕಾರ್ಯಕ್ರಮದಂತೆ ಐಸಿಡಿಎಸ್ ಘಟಕದ ಆಡಳಿತ ವೆಚ್ಚ ಲೆಕ್ಕ ಶೀರ್ಷಿಕೆ ವೇತನಾಂಶಕ್ಕಾಗಿ 37 ಲಕ್ಷ, ಹೊರಗುತ್ತಿಗೆ ಸಿಬ್ಬಂದಿ ವೇತನಕ್ಕೆ 3 ಲಕ್ಷ ಸೇರಿ ಒಟ್ಟು 40 ಲಕ್ಷ ಮೀಸಲಿಟ್ಟಿದ್ದರೆ, ಆಡಳಿತ ಮತ್ತು ನಿರ್ದೇಶನದ ಆಡಳಿತ ವೆಚ್ಚ ಹಾಗೂ ಅಧಿಕಾರಿ, ಸಿಬ್ಬಂದಿ ವೇತನಕ್ಕಾಗಿ 15 ಲಕ್ಷ, ವೇತನೇತರ ಬಾಬ್ತು 5.72 ಲಕ್ಷ, ಹೊರಗುತ್ತಿಗೆಗಾಗಿ 3 ಲಕ್ಷ ಸೇರಿ ಒಟ್ಟು 23.72 ಲಕ್ಷ ಅನುದಾನ ನಿಗಧಿಪಡಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಪಿ.ಕೆ.ಗಾಯಿತ್ರಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಎನ್.ಯೋಗೇಶ್, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಬೋರಯ್ಯ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣರಾಜು ಹಾಗೂ ಇತರರು ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/06/WhatsApp-Image-2018-06-20-at-4.55.08-PM-1.jpeghttp://bp9news.com/wp-content/uploads/2018/06/WhatsApp-Image-2018-06-20-at-4.55.08-PM-1-150x150.jpegPolitical Bureauಪ್ರಮುಖಮಂಡ್ಯರಾಜಕೀಯSweetheart budget in sugar Nagaratne Swamy presented a budget worth Rs 77728.43 lakh !!!ಮಂಡ್ಯ : ಪ್ರಸಕ್ತ ಸಾಲಿಗೆ ಮಂಡ್ಯ ಜಿಲ್ಲಾ ಪಂಚಾಯ್ತಿಯ ಕಾರ್ಯಕ್ರಮಗಳಿಗೆ ಒಟ್ಟು 77728.43 ಲಕ್ಷ ರೂ.ಗಳ ಅನುದಾನ ಹಂಚಿಕೆ ಮಾಡುವ ಮೂಲಕ ಪ್ರಸಕ್ತ ಸಾಲಿನ ಬಜೆಟ್ ಅನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಾಗರತ್ನ ಸ್ವಾಮಿ ಅವರು ಬುಧುವಾರ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ಮಂಡಿಸಿದರು. 26531.08 ಲಕ್ಷ ರೂ ಗಳನ್ನು ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ, 51083.35 ಲಕ್ಷ ರೂಗಳನ್ನು ತಾಲ್ಲೂಕು ಪಂಚಾಯತ್ ಕಾರ್ಯಕ್ರಮಗಳಿಗೆ ಮತ್ತು ರೂ.114.00 ಲಕ್ಷಗಳು ಗ್ರಾಮ ಪಂಚಾಯತ್...Kannada News Portal