ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಪೋಲಿಟಿಕಲ್‌ ಹೈಡ್ರಾಮಾ ಕ್ಷಣ ಕ್ಷಣಕ್ಕೂ ಬೇರೆ ಬೇರೆ ತಿರುವು  ತೆಗೆದುಕೊಳ್ಳುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ತಮ್ಮ ಪಕ್ಷದ ಶಾಸಕರಿಗೆ ಫೋನ್‌ ಸ್ವಿಚ್‌ ಆಫ್‌ ಮಾಡುವಂತೆ  ಸೂಚಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇದು ಮಹತ್ತರವಾದ ಸಮಯ, ಬಿಜೆಪಿಯವರು ಆಸೆ ತೋರಿಸಿ ಗಾಳ ಹಾಕಿ ಬಿಡ್ತಾರೆ ಎಂಬ ಕಾರಣಕ್ಕಾಗಿ ಎಲ್ಲಾ ಶಾಸಕರು ಮತ್ತು ಶಾಸಕರ ಪಿಎ ಹೀಗೆ ಎಲ್ಲರ ಫೋನ್‌ಗಳು ಈಗ ಆಫ್‌ ಆಗಿವೆ. ಇಲ್ಲಿಯವರಗೆ ಶಾಸಕರ ಫೋನ್‌ಗಳು ಆನ್‌ ಇದ್ದು,  ಇಬ್ಬರು ಮೂವರು ಶಾಸಕರು ಎಸ್ಕೇಪ್‌ ಆದ ಕಾರಣ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರಿಗೆ ಟೆನ್​ಶನ್​ ಶುರುಆಗಿದೆ. ಈ ಹಿನ್ನಲೆಯಲ್ಲಿ  ಎಲ್ಲಾ ಶಾಸಕರ ಫೋನ್‌ಗಳು ಬಂದ್‌ ಆಗಿವೆ. ಇನ್ನು ಕೆಲ ದಿನ ಸಹಕರಿಸಿ ಪಕ್ಷಕ್ಕೆ ಮೋಸ ಮಾಡಬೇಡಿ ಎಂದು ಮುಖಂಡರು ಕೇಳಿಕೊಳ್ಳುತ್ತಿದ್ದಾರಂತೆ.  ಈ ಬೆಳವಣಿಗೆ ಬಿಜೆಪಿ ನಾಯಕರಿಗೆ ಅತ್ಯಂತ ತಲೆನೋವಾಗಿದೆ. ಶಾಸಕರ ಫೋನ್‌ ಸಿಗದ ಕಾರಣ ಆಪರೇಷನ್‌ ಕಮಲಕ್ಕೆ ತೊಂದರೆಯಾಗಿದೆ ಅಂತ ಬಿಜೆಪಿ ನಾಯಕರು ತಲೆಕಡಿಸಿಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/05/3_Venue_for_International_Delegations_w.jpghttp://bp9news.com/wp-content/uploads/2018/05/3_Venue_for_International_Delegations_w-150x150.jpgBP9 Bureauಪ್ರಮುಖಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಪೋಲಿಟಿಕಲ್‌ ಹೈಡ್ರಾಮಾ ಕ್ಷಣ ಕ್ಷಣಕ್ಕೂ ಬೇರೆ ಬೇರೆ ತಿರುವು  ತೆಗೆದುಕೊಳ್ಳುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ತಮ್ಮ ಪಕ್ಷದ ಶಾಸಕರಿಗೆ ಫೋನ್‌ ಸ್ವಿಚ್‌ ಆಫ್‌ ಮಾಡುವಂತೆ  ಸೂಚಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದು ಮಹತ್ತರವಾದ ಸಮಯ, ಬಿಜೆಪಿಯವರು ಆಸೆ ತೋರಿಸಿ ಗಾಳ ಹಾಕಿ ಬಿಡ್ತಾರೆ ಎಂಬ ಕಾರಣಕ್ಕಾಗಿ ಎಲ್ಲಾ ಶಾಸಕರು ಮತ್ತು ಶಾಸಕರ ಪಿಎ ಹೀಗೆ ಎಲ್ಲರ ಫೋನ್‌ಗಳು ಈಗ ಆಫ್‌ ಆಗಿವೆ. ಇಲ್ಲಿಯವರಗೆ ಶಾಸಕರ...Kannada News Portal