ಸೂಪರ್​ ಸ್ಟಾರ್​ ರಜನೀಕಾಂತ್ ವಿರುದ್ಧ ಕನ್ನಡಪರ  ವಾಟಾಳ್​ ನಾಗರಾಜ್​ ತೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಕೇಳಿದ ರಜನೀಕಾಂತ್​ ಹೇಳಿಕೆಗೆ ತೀವ್ರವಾಗಿ ಟೀಕಿಸಿದ ವಾಟಾಳ್​ ನಾಗರಾಜ್​ ರಜನಿಕಾಂತ್ ಅವರ ಕಾವೇರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಜನಿಕಾಂತ್ ಒಬ್ಬ ಕನ್ನಡ ದ್ರೋಹಿಯಾಗಿದ್ದು, ತಮಿಳುನಾಡಿನ ಏಜೆಂಟ್ ಆಗಿದ್ದಾರೆ. ರಜನಿಕಾಂತ್ ಶೂಟಿಂಗ್‍ಗೂ ಕೂಡ ಕರ್ನಾಟಕಕ್ಕೆ ಬರಬಾರದು. ಅವರ ಮನೆಗೆ ಬರಬೇಕಾದರೆ ಬರಲಿ. ಅವರೇನು ಗೌನ್ ಹಾಕೊಂಡು ಬರೋಕಾಗುತ್ತಾ? ಹಾಗೇನಾದರೂ ಬಂದರೆ ನಾವು ಹೋರಾಟ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

ಹೆಚ್​ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ, ಖಂಡಿತಾ ನಮಗೆ ಕಾವೇರಿ  ನೀರು ಕೊಡುತ್ತಾರೆ ಎಂಬ ಭರವಸೆ ನನಗಿದೆ ಎಂದು  ಪತ್ರಿಕಾಗೋಷ್ಠಿಯಲ್ಲಿ ರಜನೀಕಾಂತ್​ ಹೇಳಿದ್ದ ಮಾತಿಗೆ  ಕುಮಾರಸ್ವಾಮಿ ಕೂಡ ತಿರುಗೇಟು ನೀಡಿದ್ದರು. ನಮ್ಮ ರೈತರ ಸ್ಥಿತಿ, ನಮ್ಮಲ್ಲಿನ ಪರಿಸ್ಥಿತಿ ನೋಡಿಯೂ ನೀವು ನೀರು ಕೇಳುವುದಾದ್ರೆ ನಾವು ಆ ಬಗ್ಗೆ ಚರ್ಚೆಸೋಣ ಎಂದು ಟಾಂಗ್​ ನೀಡಿದ್ದರು.

ಆ ರಜಿನಿಕಾಂತ್‍ಗೆ ಬುದ್ಧಿ ಇಲ್ಲ. ಸಿನಿಮಾ ನಟನಿಂದ ನೇರವಾಗಿ ರಾಜಕಾರಣಿ ತರಹ ಮಾತನಾಡುತ್ತಿದ್ದಾರೆ. ಈಗಾಗಲೇ ಅವರಿಗೆ ಎಚ್ಚರಿಕೆ ಕೊಟ್ಟಿದೆ. ಮತ್ತೆ ಹೀಗೆ ಮಾತನಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದರು.

ಕರ್ನಾಟಕದಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಸರಿ, ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನವನ್ನು ಅನುಷ್ಟಾನಕ್ಕೆ ತರಬೇಕು. ಕೋರ್ಟ್ ಸ್ಪಷ್ಟ ಆದೇಶ ನೀಡಿದ್ದು, ನಿರ್ವಹಣಾ ಮಂಡಳಿ ಅಥವಾ ಪ್ರಾಧಿಕಾರವೆಂಬ ತಾಂತ್ರಿಕ ಚೌಕಟ್ಟನ್ನು ಪ್ರದರ್ಶಿಸಬಾರದು ಎಂದು ರಜನಿಕಾಂತ್ ಚೆನ್ನೈನಲ್ಲಿ ಹೇಳಿಕೆ ನೀಡಿದ್ದರು. 

 

Please follow and like us:
0
http://bp9news.com/wp-content/uploads/2018/05/collage-2-34-1024x768.jpghttp://bp9news.com/wp-content/uploads/2018/05/collage-2-34-150x150.jpgBP9 Bureauಪ್ರಮುಖಸಿನಿಮಾಸೂಪರ್​ ಸ್ಟಾರ್​ ರಜನೀಕಾಂತ್ ವಿರುದ್ಧ ಕನ್ನಡಪರ  ವಾಟಾಳ್​ ನಾಗರಾಜ್​ ತೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಕೇಳಿದ ರಜನೀಕಾಂತ್​ ಹೇಳಿಕೆಗೆ ತೀವ್ರವಾಗಿ ಟೀಕಿಸಿದ ವಾಟಾಳ್​ ನಾಗರಾಜ್​ ರಜನಿಕಾಂತ್ ಅವರ ಕಾವೇರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಜನಿಕಾಂತ್ ಒಬ್ಬ ಕನ್ನಡ ದ್ರೋಹಿಯಾಗಿದ್ದು, ತಮಿಳುನಾಡಿನ ಏಜೆಂಟ್ ಆಗಿದ್ದಾರೆ. ರಜನಿಕಾಂತ್ ಶೂಟಿಂಗ್‍ಗೂ ಕೂಡ ಕರ್ನಾಟಕಕ್ಕೆ ಬರಬಾರದು. ಅವರ ಮನೆಗೆ ಬರಬೇಕಾದರೆ ಬರಲಿ. ಅವರೇನು ಗೌನ್ ಹಾಕೊಂಡು ಬರೋಕಾಗುತ್ತಾ? ಹಾಗೇನಾದರೂ ಬಂದರೆ ನಾವು ಹೋರಾಟ ಮಾಡುತ್ತೇವೆ...Kannada News Portal