ಬೆಂಗಳೂರು :  ಮಾನವ ಹಕ್ಕುಗಳ ಹೋರಾಟಗಾರ ತಮಿಳುನಾಡಿನ ತಿರುಮುರುಗನ್‌ ಗಾಂಧಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹಲವು ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ತಿರುಮುರುಗನ್‌ ಗಾಂಧಿ ಅವರನ್ನು ಬಂಧಿಸಲು ತಮಿಳುನಾಡು ಸರ್ಕಾರ ಲುಕ್​ ಔಟ್​ ನೋಟಿಸ್​ ಜಾರಿ ಮಾಡಿತ್ತು. ಈ ಲುಕ್​ ಔಟ್​ ನೋಟಿಸ್​ ನಂತರ ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಎಲ್ಲಾ ಪೊಲೀಸ್​ ಠಾಣೆಗಳಲ್ಲೂ ತಿರುಮುರುಗನ್​ ಗಾಂಧಿಯ ಭಾವಚಿತ್ರ ಅಥವಾ ಚಹರೆ ಪಟ್ಟಿ ಪ್ರಕಟಿಸಲಾಗಿತ್ತು. ಇದರನ್ವಯ  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜರ್ಮನಿಯಿಂದ ಬಂದಿಳಿದ ಕೂಡಲೇ ಆತನನ್ನು ಬಂಧಿಸಿದ ಪೊಲೀಸರು, ತಮಿಳುನಾಡಿನ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಇನ್ನು ಬಂಧಿತ ಆರೋಪಿ, ಮಾನವ ಹಕ್ಕುಗಳ ಹೋರಾಟಗಾರ ತಿರುಮುರುಗನ್‌ ಗಾಂಧಿ ಮೇಲೆ 2009ರಲ್ಲಿ ಎಲ್‌ಟಿಟಿಇ ಹಾಗೂ ಶ್ರೀಲಂಕಾ ನಡುವಿನ ಸಂಘರ್ಷದಲ್ಲಿ ತಿರುಮುರುಗನ್‌ ತಮಿಳು ಈಳಂ ಬಂಡುಕೋರರಿಗೆ ಪ್ರೊತ್ಸಾಹಿಸಿದ್ದ ಆರೋಪ ಮತ್ತು ಈ ಹೋರಾಟದ ಮುಂಚೂಣಿ ನಾಯಕತ್ವ ವಹಿಸಿಕೊಂಡಿದ್ದ ತಿರುಮುರುಗನ್‌ ಗಾಂಧಿ ವಿರುದ್ಧ ರಾಜ್ಯದ್ರೋಹ ಆರೋಪದಡಿ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿದ್ದರು. ಜತೆಗೆ 2017ರಲ್ಲಿ ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದರು. ಈ ಹೋರಾಟವು ಮೇ 17 ಎಂದೇ ಹೆಸರುವಾಸಿಯಾಗಿತ್ತು.

ತಮ್ಮ ಮೇಲೆ ರಾಜ್ಯದ್ರೋಹ ಆರೋಪದಡಿ ಲುಕ್‌ ಔಟ್‌ ನೋಟಿಸ್‌ ಜಾರಿಯಾಗುತ್ತಿದ್ದಂತೆ ತಮಿಳುನಾಡು ತೊರೆದು ಜರ್ಮನಿ ಸೇರಿದ್ದರು ತಿರುಮುರುಗನ್‌ ಗಾಂಧಿ. ಕಳೆದ ಮೇ ತಿಂಗಳಿನಲ್ಲಿ ತೂತುಕುಡಿಯ ತಾಮ್ರ ಘಟಕ ಮುಚ್ಚುವಂತೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟ 13 ಮಂದಿಯ ಸಾವಿನ ವಿಚಾರವನ್ನು ಅಂತಾರಾಷ್ಟ್ರೀಯ ಮಾನಹ ಹಕ್ಕುಗಳ ಪರಿಷತ್ತಿನ ಗಮನಕ್ಕೆ ತಂದ ಇವರು, ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಪ್ಲಾನ್​ ಮಾಡಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜರ್ಮನಿಯಿಂದ ಬಂದಿಳಿಯುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮುರುಗನ್‌ ಗಾಂಧಿ ಅವರನ್ನು ಅರೆಸ್ಟ್​ ಮಾಡಿ ತಮಿಳುನಾಡಿನ ಚೆನೈ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ತಿಳಿಸಿದ್ದಾರೆ.

 

Please follow and like us:
0
http://bp9news.com/wp-content/uploads/2018/08/Thirumurugan-Gandhi1.jpghttp://bp9news.com/wp-content/uploads/2018/08/Thirumurugan-Gandhi1-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯTamil Nadu human rights activist arrested in Bangalore policeಬೆಂಗಳೂರು :  ಮಾನವ ಹಕ್ಕುಗಳ ಹೋರಾಟಗಾರ ತಮಿಳುನಾಡಿನ ತಿರುಮುರುಗನ್‌ ಗಾಂಧಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಲವು ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ತಿರುಮುರುಗನ್‌ ಗಾಂಧಿ ಅವರನ್ನು ಬಂಧಿಸಲು ತಮಿಳುನಾಡು ಸರ್ಕಾರ ಲುಕ್​ ಔಟ್​ ನೋಟಿಸ್​ ಜಾರಿ ಮಾಡಿತ್ತು. ಈ ಲುಕ್​ ಔಟ್​ ನೋಟಿಸ್​ ನಂತರ ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಎಲ್ಲಾ ಪೊಲೀಸ್​ ಠಾಣೆಗಳಲ್ಲೂ ತಿರುಮುರುಗನ್​ ಗಾಂಧಿಯ ಭಾವಚಿತ್ರ ಅಥವಾ ಚಹರೆ ಪಟ್ಟಿ ಪ್ರಕಟಿಸಲಾಗಿತ್ತು. ಇದರನ್ವಯ  ಕೆಂಪೇಗೌಡ...Kannada News Portal