ಅಲ್ಲಾ ರೀ, ಡಾಲಿ ಧನಂಜಯ ಇನ್ನು ಮದ್ವೆನೇ ಆಗಿಲ್ಲ. ಅಪ್ಪ ಆಗದೇ ಅದಾಗಲೇ ತಾತಾ ಆಗ್ತಿದ್ದಾರೆ ಡಾಲಿ ಧನಂಜಯ.  ಇದೇನೂ  ಸತ್ಯನಾ, ಸುಳ್ಳಾ ಅಂತಾ  ಕನ್ಫ್ಯೂಸ್​  ಆಗಬೇಡಿ. ನಿಜ ಜೀವನದಲ್ಲೇ ತಾತಾ ಆಗಿರುವ ಖುಷಿಯಲ್ಲಿದ್ದಾರೆ ಡಾಲಿ ಧನಂಜಯ.

ಧನಂಜಯ್ ತಮ್ಮ ಇನ್‍ಸ್ಟಾಗ್ರಾಂ ಸ್ಟೇಟಸ್‍ನಲ್ಲಿ ತಾವು ತಾತ ಆಗಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಧನಂಜಯ್ ತಮ್ಮ ಇನ್‍ಸ್ಟಾಗ್ರಾಂ ಸ್ಟೇಟಸ್‍ನಲ್ಲಿ ಒಂದು ಮಗುವಿನ ಜೊತೆಯಿರುವ ಫೋಟೋವನ್ನು ಹಾಕಿದ್ದಾರೆ.

ಧನಂಜಯ್ ಸ್ಟೇಟಸ್‍ನಲ್ಲಿ ಮಗುವಿನ ಫೋಟೋ ಹಾಕಿ ಅದಕ್ಕೆ, “ಅಣ್ಣನ ಮಗಳ ಮಗ, ನನ್ನ ಮೊಮ್ಮಗ. ಆಲ್ ರೆಡಿ ತಾತ ಆಗೋದೆ ನೋಡಿ” ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಧನಂಜಯ್ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ರಾತ್ರಿಯೇ ನೂರಾರು ಅಭಿಮಾನಿಗಳು ಸೇರಿ ಡಾಲಿ ಹುಟ್ಟುಹಬ್ಬವನ್ನು ಆಚರಿಸೋ ಪ್ಲಾನ್ ಕೂಡ ಮಾಡಿದ್ದರು. ಆದರೆ ಧನಂಜಯ್ ಮಾತ್ರ ಹುಟ್ಟುಹಬ್ಬದ ಅಡಂಭರಕ್ಕೆ ಬ್ರೇಕ್ ಹಾಕಿ ಹುಟ್ಟುಹಬ್ಬವನ್ನು ನೆರೆಪೀಡಿತ ಕೊಡಗು ಜನರ ನೆರವಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಸರಳವಾಗಿ ಬರ್ತ್ ಡೇ ಆಚರಿಸಿಕೊಂಡಿದ್ದರು. ಅಮದಹಾಗೇ  ಏಕ ಕಾಲದಲ್ಲಿಯೇ ರಿಲೀಸ್​  ಆಗ್ತಾ ಇರುವ ಸಿನಿಮಾ ಭೈರವ ಗೀತಾ ಟ್ರೇಲರ್​ನ್ನು ರಿಲೀಸ್​  ಆಗಿದ್ದೂ  ಒಳ್ಳೆ ರೆಸ್ಪಾನ್ಸ್​ ಸಿಕ್ಕಿದೆ.

ಜಯನಗರ ಬಳಿ ಇರುವ ಶಾಲಿನಿ ಮೈದಾನದಲ್ಲಿ ಧನಂಜಯ್ ಅವರ ನೂರಾರು ಅಭಿಮಾನಿಗಳು ಧಾವಿಸಿ ಶುಭ ಕೋರಿದಲ್ಲದೆ, ಕೈಲಾದ ದೇಣಿಗೆಯನ್ನು ನೀಡಿದ್ದರು. ಸೆಲ್ಫೀಗೊಂದಕ್ಕೆ ಕಾಣಿಕೆ ಎಂಬಂತೆ ಧನ ಸಂಗ್ರಹಣೆ ಕಾರ್ಯ ಮಾಡಿದ್ದ ನಟ ಧನಂಜಯ್ ಅಲ್ಲಿನ ಜನ ಸಂಕಷ್ಟದಲ್ಲಿದ್ದಾರೆ ಅವರಿಗೆ ನಾನು ಸಹ ಸಹಾಯ ಮಾಡುತ್ತೇನೆ ಎಂದು ಹೇಳಿದ್ದರು.

Please follow and like us:
0
http://bp9news.com/wp-content/uploads/2018/09/dc-Cover-t704h7fasr6p8mu0unqqgmt0s6-20170312221812.Medi_.jpeghttp://bp9news.com/wp-content/uploads/2018/09/dc-Cover-t704h7fasr6p8mu0unqqgmt0s6-20170312221812.Medi_-150x150.jpegBP9 Bureauಸಿನಿಮಾಅಲ್ಲಾ ರೀ, ಡಾಲಿ ಧನಂಜಯ ಇನ್ನು ಮದ್ವೆನೇ ಆಗಿಲ್ಲ. ಅಪ್ಪ ಆಗದೇ ಅದಾಗಲೇ ತಾತಾ ಆಗ್ತಿದ್ದಾರೆ ಡಾಲಿ ಧನಂಜಯ.  ಇದೇನೂ  ಸತ್ಯನಾ, ಸುಳ್ಳಾ ಅಂತಾ  ಕನ್ಫ್ಯೂಸ್​  ಆಗಬೇಡಿ. ನಿಜ ಜೀವನದಲ್ಲೇ ತಾತಾ ಆಗಿರುವ ಖುಷಿಯಲ್ಲಿದ್ದಾರೆ ಡಾಲಿ ಧನಂಜಯ. ಧನಂಜಯ್ ತಮ್ಮ ಇನ್‍ಸ್ಟಾಗ್ರಾಂ ಸ್ಟೇಟಸ್‍ನಲ್ಲಿ ತಾವು ತಾತ ಆಗಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಧನಂಜಯ್ ತಮ್ಮ ಇನ್‍ಸ್ಟಾಗ್ರಾಂ ಸ್ಟೇಟಸ್‍ನಲ್ಲಿ ಒಂದು ಮಗುವಿನ ಜೊತೆಯಿರುವ ಫೋಟೋವನ್ನು ಹಾಕಿದ್ದಾರೆ. ಧನಂಜಯ್ ಸ್ಟೇಟಸ್‍ನಲ್ಲಿ ಮಗುವಿನ ಫೋಟೋ ಹಾಕಿ ಅದಕ್ಕೆ,...Kannada News Portal