ಬೆಂಗಳೂರು :ಆಂಧ್ರದ ಖಾಸಗೀ ಹೋಟೆಲ್​ವೊಂದರಲ್ಲಿ  ಕಾಂಗ್ರೆಸ್​  ಮತ್ತು ಜೆಡಿಎಸ್​ ಶಾಸಕರು  ಉಳಿದುಕೊಂಡಿದ್ದರು. ಆಪರೇಷನ್​ ಕಮಲ ಭೀತಿಯಿಂದ ಬೆಂಗಳೂರಿನ ಶಾಂಘ್ರಿಲಾ ಮತ್ತು ಬಿಡದಿಯ ರೆಸಾರ್ಟ್​ನಿಂದ ರಾತ್ರೋರಾತ್ರಿ ಆಂಧ್ರಕ್ಕೆ  ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿಆಂಧ್ರದಲ್ಲಿ ಮಾಧ್ಯಮದವರೊಂದಿಗೆ ಶಾಸಕ ಬಸವರಾಜ ಹೊರಟ್ಟಿಯೊಂದಿಗಿನ ಸಂದರ್ಶನ ಇಲ್ಲಿದೆ.

ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, ನಾವು ಮತ್ತು  ಕಾಂಗ್ರೆಸ್​ ಶಾಸಕರು ಸಭೆ ನಡೆಸುತ್ತಿದ್ದೇವೆ.  ಆ ನಂತರ ಜೆಡಿಎಸ್​​ ಶಾಸಕರು ಮತ್ತು ಕಾಂಗ್ರೆಸ್​ ಶಾಸಕರು ಒಟ್ಟಿಗೆ ಸಭೆ ನಡೆಸಿ ಮುಂದಿನ ನಡೆ ತೀರ್ಮಾನಿಸುತ್ತೇವೆ. ನಾವಲ್ಲಾ ಒಟ್ಟಿಗೆ  ಸೇರಿ ಒಂದೇ ಸ್ಥಳಕ್ಕೆ ಹೋಗುತ್ತೇವೆ. ಬಿಜೆಪಿಯವರು ಸುಳ್ಳು ಹೇಳುತ್ತಾರೆ, ಅವರ ಮ್ಯಾಜಿಕ್​ ನಂ ವರ್ಕೌಟ್​ ಆಗಲ್ಲ. ಸೋಮಣ್ಣ ಅವರು ಹೈದರಬಾದ್​ಗೆ ಬಂದಿಲ್ಲ. ಅವರು ಸುಪ್ರೀಂ ಕೋರ್ಟ್​ ವಿಚಾರವಾಗಿ ಇಲ್ಲಿಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿದರು.

ಬಿಜೆಪಿಯವರಿಂದ ತಪ್ಪಿಸಿಕೊಳ್ಳಲು ಸೆಕ್ಯೂರಿಟಿಗಾಗಿ ನಾವು ಇಲ್ಲಿಗೆ ಬಂದಿದ್ದೇವೆ. ತೆಲಂಗಾಣ ಸರ್ಕಾರ ಕರ್ನಾಟಕದ ಜೆಡಿಎಸ್​ ಮತ್ತು ಕಾಂಗ್ರೆಸ್​ ಸರ್ಕಾರಕ್ಕೆ ಸಪೋರ್ಟ್​ ಮಾಡುತ್ತಿದೆ. ನೀವು ಬಿಜೆಪಿ ಜೊತೆ  ಹೋಗುತ್ತೀರಾ ಎಂದಾಗ ಅದು ಸಾಧ್ಯವಿಲ್ಲ ಎಂದರು. ಇಂದು ಹೈದರಬಾದ್​ನ ಮುಖ್ಯ ಮಂತ್ರಿ  ಭೇಟಿಗಾಗಿ ಅಪಾಯಿಂಟ್​ಮೆಂಟ್​ ಕೂಡ ಇತ್ತು. ಆದರೆ ತುಂಬಾ ಅನಿವಾರ್ಯವಾಗಿ  ನಾವು ಮತ್ತೆ ಬೆಂಗಳೂರಿಗೆ ಹೋಗುವ ಪರಿಸ್ಥಿತಿ ಬಂದಿದೆ ಎಂದು ಮಾಧ್ಯಮದವರೊಂದಿಗೆ ತಿಳಿಸಿದರು.

Please follow and like us:
0
http://bp9news.com/wp-content/uploads/2018/05/dc-Cover-st7ic3nd5mj11eqa6muum6lv91-20170731070808.Medi_.jpeghttp://bp9news.com/wp-content/uploads/2018/05/dc-Cover-st7ic3nd5mj11eqa6muum6lv91-20170731070808.Medi_-150x150.jpegBP9 Bureauಪ್ರಮುಖಬೆಂಗಳೂರು :ಆಂಧ್ರದ ಖಾಸಗೀ ಹೋಟೆಲ್​ವೊಂದರಲ್ಲಿ  ಕಾಂಗ್ರೆಸ್​  ಮತ್ತು ಜೆಡಿಎಸ್​ ಶಾಸಕರು  ಉಳಿದುಕೊಂಡಿದ್ದರು. ಆಪರೇಷನ್​ ಕಮಲ ಭೀತಿಯಿಂದ ಬೆಂಗಳೂರಿನ ಶಾಂಘ್ರಿಲಾ ಮತ್ತು ಬಿಡದಿಯ ರೆಸಾರ್ಟ್​ನಿಂದ ರಾತ್ರೋರಾತ್ರಿ ಆಂಧ್ರಕ್ಕೆ  ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿಆಂಧ್ರದಲ್ಲಿ ಮಾಧ್ಯಮದವರೊಂದಿಗೆ ಶಾಸಕ ಬಸವರಾಜ ಹೊರಟ್ಟಿಯೊಂದಿಗಿನ ಸಂದರ್ಶನ ಇಲ್ಲಿದೆ. ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, ನಾವು ಮತ್ತು  ಕಾಂಗ್ರೆಸ್​ ಶಾಸಕರು ಸಭೆ ನಡೆಸುತ್ತಿದ್ದೇವೆ.  ಆ ನಂತರ ಜೆಡಿಎಸ್​​ ಶಾಸಕರು ಮತ್ತು ಕಾಂಗ್ರೆಸ್​ ಶಾಸಕರು ಒಟ್ಟಿಗೆ ಸಭೆ ನಡೆಸಿ ಮುಂದಿನ ನಡೆ ತೀರ್ಮಾನಿಸುತ್ತೇವೆ....Kannada News Portal