ಬೆಂಗಳೂರು : ಜೀವನದಲ್ಲಿ ಒಮ್ಮೆ ನಡೆಯುವ ಸಡಗರ ತುಂಬಿದ ಹಬ್ಬ ದಿಬ್ಬಣ. ನನ್ನ ಮದುವೆ ಹಾಗೆ ಇರಬೇಕು, ಹೀಗೆ ಇರಬೇಕು… ಎಲ್ಲರಿಗಿಂತ ಡಿಫ್ರೆಂಟ್ ಆಗಿ ಇರಬೇಕು… ಕಲರ್ ಫುಲ್ ಆಗಿ ಇರಬೇಕು ಎಂದು ಥಿಂಕ್ ಮಾಡೋದು ಈಗ ಸರ್ವೇ ಸಾಮಾನ್ಯ…

ಆದ್ರೆ ಪುತ್ತೂರಿನಲ್ಲಿ ಒಂದು ಜೋಡಿ ವಿಶೇಷ ಮದುವೆ ದಿಬ್ಬಣವನ್ನು ಮಾಡಿಕೊಂಡಿದ್ದಾರೆ. ಅಂಥದ್ದು ಏನು ವಿಶೇಷ ಅಂದ್ರೆ ಜೆಸಿಬಿಯಲ್ಲಿ ದಿಬ್ಬಣ ನಡೆಸಿದ್ದಾರೆ. ಹೌದು, ಸಂಟ್ಯಾರ್ ನಿವಾಸಿ ಜೆಸಿಬಿ ಆಪರೇಟರ್ ಚೇತನ್, ಮಮತಾ ಎಂಬಾಕೆ ಜೊತೆ ಕುಂಬ್ರ ಸಮೀಪದ ಕೊಯಿಲತ್ತಡ್ಕ ಶಿವಕೃಪಾ ಆಡಿಟೋರಿಯಂನಲ್ಲಿ ಮದುವೆಯಾಗಿದ್ದಾರೆ.

ಮದುವೆ ಬಳಿಕ ದಿಬ್ಬಣದ ಮೆರವಣಿಗೆ ಮಾಡಿಕೊಂಡಿದ್ದು, ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ಕಿ . ಮೀ ವರೆಗೆ ಮದುವೆ ಮೆರವಣಿಗೆ ಮಾಡಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇನ್ನು ಚೇತನ್ ಹಲವು ವರ್ಷಗಳಿಂದ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು ಆದ ಕಾರಣವಾಗಿಯೇ ತಮ್ಮ ಮದುವೆ ದಿಬ್ಬಣವನ್ನು ಈ ರೀತಿ ಜೆಸಿಬಿಯಲ್ಲಿ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-19-at-10.49.23-AM-1.jpeghttp://bp9news.com/wp-content/uploads/2018/06/WhatsApp-Image-2018-06-19-at-10.49.23-AM-1-150x150.jpegPolitical Bureauಪ್ರಮುಖಮಂಗಳೂರುThe bride-groom on JCB: A strange mood in Puttur !!!ಬೆಂಗಳೂರು : ಜೀವನದಲ್ಲಿ ಒಮ್ಮೆ ನಡೆಯುವ ಸಡಗರ ತುಂಬಿದ ಹಬ್ಬ ದಿಬ್ಬಣ. ನನ್ನ ಮದುವೆ ಹಾಗೆ ಇರಬೇಕು, ಹೀಗೆ ಇರಬೇಕು... ಎಲ್ಲರಿಗಿಂತ ಡಿಫ್ರೆಂಟ್ ಆಗಿ ಇರಬೇಕು... ಕಲರ್ ಫುಲ್ ಆಗಿ ಇರಬೇಕು ಎಂದು ಥಿಂಕ್ ಮಾಡೋದು ಈಗ ಸರ್ವೇ ಸಾಮಾನ್ಯ... ಆದ್ರೆ ಪುತ್ತೂರಿನಲ್ಲಿ ಒಂದು ಜೋಡಿ ವಿಶೇಷ ಮದುವೆ ದಿಬ್ಬಣವನ್ನು ಮಾಡಿಕೊಂಡಿದ್ದಾರೆ. ಅಂಥದ್ದು ಏನು ವಿಶೇಷ ಅಂದ್ರೆ ಜೆಸಿಬಿಯಲ್ಲಿ ದಿಬ್ಬಣ ನಡೆಸಿದ್ದಾರೆ. ಹೌದು, ಸಂಟ್ಯಾರ್ ನಿವಾಸಿ ಜೆಸಿಬಿ ಆಪರೇಟರ್ ಚೇತನ್,...Kannada News Portal