ಬೆಂಗಳೂರು : ಇಲ್ಲಿನ ಸರ್ಕಾರ ಹಸಿದವರಿಗೆ ಅನ್ನ ಕೊಡುತ್ತೇನೆ ಎಂದು ಯೋಜನೆ ತಂದಿದೆ. ಇದು ಒಂದು ಒಳ್ಳೆಯ ಯೋಜನೆ. ಆದರೆ ಈ ಯೋಜನೆಗಾಗಿ ಅಧಿಕ ಹಣ ಕೇಂದ್ರ ಸರ್ಕಾರ ನೀಡುತ್ತಿದೆ ಎಂಬ ಸತ್ಯವನ್ನು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಚ್ಚಿಡುತ್ತಿದೆ.

ಅಲ್ಲದೇ ಸೊಸೈಟಿಯಲ್ಲಿ ನಡೆಯುತ್ತಿದ್ದ ಅಕ್ರಮವನ್ನು ಕ್ರಾಂತಿಕಾರಕ ಬೆಳವಣಿಗೆಯಲ್ಲಿ ನಾವು ಮಟ್ಟ ಹಾಕಿದ್ದೇವೆ. ಆಧಾರ್ ಲಿಂಕ್‌ನ ನಂತರ ಒಂದೂವರೆ ಕೋಟಿಗೂ ಹೆಚ್ಚು ಅಕ್ರಮ ರೇಷನ್ ಕಾರ್ಡ್ಗಳು ಹೊರಗೆ ಬಂದವು. ಅಸ್ತಿತ್ವದಲ್ಲಿ ಇಲ್ಲದ ಒಂದೂವರೆ ಕೋಟಿಗೂ ಹೆಚ್ಚು ಜನರಿಗೆ ಅಕ್ಕಿ ಹೋಗುತ್ತಿತ್ತು. ಅದನ್ನೆಲ್ಲಾ ನಾವು ಬಂದ್ ಮಾಡಿಬಿಟ್ಟೆವು. ಫಲಾನುಭಿವಿಗಳಿಗೆ ನಾವು ನೇರವಾಗಿ ಯೋಜನೆಗಳನ್ನು ತಲುಪಿಸಿದ್ದೇವೆ ಎಂದು ಇದೇ ಮೊದಲ ಬಾರಿಗೆ ಮೋದಿ ಅನ್ನಭಾಗ್ಯ ಯೋಜನೆ ಬಗ್ಗೆ ಹೇಳಿಕೆ ನೀಡಿದರು.

ಇನ್ನು ರಾಯಚೂರಿನ ಸೋನಾ ಮಸೂರಿ ಅಕ್ಕಿಗೆ ತನ್ನದೇ ಆದ ಪ್ರಖ್ಯಾತಿ ಇದೆ. ಆದರೆ ಇಲ್ಲಿನ ರೈತರು ನೀರಿಗಾಗಿ ಒದ್ದಾಡುತ್ತಿದ್ದಾರೆ. ಕಾಂಗ್ರೆಸ್‌ ಮಂತ್ರಿಗಳು ನೀರಿನ ವಿಷಯದಲ್ಲೂ ಹಣ ಮಾಡುವುದನ್ನು ಕಲಿತಿದ್ದಾರೆ. ಕೃಷ್ಣ-ತುಂಗಭದ್ರೆಯ ವರ ಇದ್ದರೂ ಇಲ್ಲಿನ ರೈತರಿಗೆ ನೀರಿಲ್ಲ.

ನಾವು 2022ರೊಳಗೆ ಸೌರಶಕ್ತಿ ಉತ್ಪಾದನೆಯನ್ನು 100% ಹೆಚ್ಚು ಮಾಡುವ ಗುರಿಯನ್ನು ಹೊಂದಿದೆ. ನಾವು ಎಲ್‌ಇಡಿ ಅಭಿಯಾನ ಕೂಡ ಮಾಡಿದೆವು. ಇದರಿಂದ ಮಧ್ಯಮ ವರ್ಗದ ಹೊರೆ ಕಡಿಮೆ ಆಗುತ್ತದೆ. ಈ ಎಲ್‌ಇಡಿ ಬಲ್ಬ್‌ ಕಾಂಗ್ರೆಸ್‌ ಸರ್ಕಾರ ಇದ್ದಾಗ 350 ರೂಪಾಯಿ ಇತ್ತು ಆದರೆ ನಮ್ಮ ಸರ್ಕಾರ ಬಂದಾಗ 50-60 ರೂಪಾಯಿಗೆ ಲಭ್ಯವಾಗುತ್ತಿದೆ ಎಂದರು.

ಮಹಾರಾಷ್ಟ್ರದಲ್ಲೂ ಬರ ಬರುತ್ತದೆ. ಆದರೆ, ಬಿಜೆಪಿ ನೇತೃತ್ವದ ಸರ್ಕಾರ ಅಲ್ಲಿ ಎಲ್ಲಾ ಡ್ಯಾಂಗಳಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದೆ. ಆದರೆ, ಕರ್ನಾಟಕದಲ್ಲಿ ತುಂಗ ಭದ್ರ ಡ್ಯಾಂನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಹೂಳೆತ್ತುವ ಕೆಲಸ ಮಾಡಿಲ್ಲ. ಹೂಳೆತ್ತುವ ಕೆಲಸ ಮಾಡುವುದರಿಂದ ಬರವನ್ನು ಸುಲಭವಾಗಿ ಎದುರಿಸುತ್ತಿದ್ದಾರೆ. ಇಲ್ಲಿನ ಸರ್ಕಾರ ಕೂಡ ಈ ಬಗ್ಗೆ ಮಾತನಾಡಿತ್ತು, ಅಧಿಕಾರ ಬಂದ ಪ್ರಾರಂಭದಲ್ಲಿ. ಆದರೆ 5 ವರ್ಷ ಕಳೆದಿದೆ ಆ ಯೋಜನೆಯ ನೆನಪೇ ಇಲ್ಲ ಈ ಸರ್ಕಾರಕ್ಕೆ ಎಂದು ರಾಯಚೂರಿನಲ್ಲಿ ಮೋದಿ ಭಾಷಣದುದ್ದಕ್ಕೂ ಲೆಫ್ಟ್ ಅಂಡ್ ರೈಟ್ ತೆಗೆದು ಕೊಂಡರು.

Please follow and like us:
0
http://bp9news.com/wp-content/uploads/2018/05/modi-2.jpghttp://bp9news.com/wp-content/uploads/2018/05/modi-2-150x150.jpgPolitical Bureauಪ್ರಮುಖರಾಜಕೀಯರಾಯಚೂರುThe central government is not the only Siddaramaiah government: Modiಬೆಂಗಳೂರು : ಇಲ್ಲಿನ ಸರ್ಕಾರ ಹಸಿದವರಿಗೆ ಅನ್ನ ಕೊಡುತ್ತೇನೆ ಎಂದು ಯೋಜನೆ ತಂದಿದೆ. ಇದು ಒಂದು ಒಳ್ಳೆಯ ಯೋಜನೆ. ಆದರೆ ಈ ಯೋಜನೆಗಾಗಿ ಅಧಿಕ ಹಣ ಕೇಂದ್ರ ಸರ್ಕಾರ ನೀಡುತ್ತಿದೆ ಎಂಬ ಸತ್ಯವನ್ನು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಚ್ಚಿಡುತ್ತಿದೆ. ಅಲ್ಲದೇ ಸೊಸೈಟಿಯಲ್ಲಿ ನಡೆಯುತ್ತಿದ್ದ ಅಕ್ರಮವನ್ನು ಕ್ರಾಂತಿಕಾರಕ ಬೆಳವಣಿಗೆಯಲ್ಲಿ ನಾವು ಮಟ್ಟ ಹಾಕಿದ್ದೇವೆ. ಆಧಾರ್ ಲಿಂಕ್‌ನ ನಂತರ ಒಂದೂವರೆ ಕೋಟಿಗೂ ಹೆಚ್ಚು ಅಕ್ರಮ ರೇಷನ್ ಕಾರ್ಡ್ಗಳು ಹೊರಗೆ ಬಂದವು. ಅಸ್ತಿತ್ವದಲ್ಲಿ ಇಲ್ಲದ...Kannada News Portal