ಬೆಂಗಳೂರು: ರಾಜ್ಯಪಾಲರು ಬಿಜೆಪಿ ಸರ್ಕಾರ ರಚಿಸುವಂತೆ ಆಹ್ವಾನಕೊಟ್ಟಿದ್ದರಿಂದ, ಅಧಿಕ ಸಂಖ್ಯೆಯನ್ನು ಹೊಂದಿರು ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌  ಸುಪ್ರಿಂ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿವೆ.

ಹೈಕಮಾಂಡ್‌ ಸಂಪರ್ಕಿಸಿರುವ ಕಾಂಗ್ರೆಸ್‌ ಮುಖಂಡರು ತಮ್ಮ ಪಟ್ಟು ಬಿಡದೆ ಸರ್ಕಾರ ರಚಿಸಲೇ ಬೇಕಾಗಿರುವುದರಿಂದ ನ್ಯಾಯಾಲಯದ ಮೊರೆ ಹೋಗಿಯಾದ್ರೂ  ಅಧಿಕಾರ ಪಡೆಯುವ ತವಕದಲ್ಲಿದ್ದಾರೆ. ಇದಕ್ಕೆ ಹೈಕಮಾಂಡ್‌ ಕೂಡ ಸಮ್ಮತಿ ನೀಡಿದ್ದು ಹಿರಿಯ ವಕೀಲ  ಅಭಿಷೇಕ್‌ ಮನು ಸಿಂಘ್ವಿ ಅವರನ್ನು ಕೂಡಲೇ ದೆಹಲಿಗೆ ಬರುವಂತೆ ಬುಲಾವ್‌ ನೀಡಿದೆ. ಬುಧವಾರ ಬೆಳಗ್ಗೆ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಪಡಿಸಿ ದೆಹಲಿಯ ವಿಮಾನವೇರಿದ್ದಾರೆ.

ಸಂವಿಧಾನಬದ್ಧವಾಗಿ ಬಹುಮತ ಇರುವ ಪಕ್ಷಗಳಿಗೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸಿಕೊಡಬೇಕು ಆದರೆ ಬಿಜೆಪಿ ಕಡಿಮೆ ಸಂಖ್ಯೆಯಲ್ಲಿ ಅಂದರೆ 104 ಮಂದಿ ಶಾಸಕರನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. 224 ಶಾಸಕರನ್ನು ಹೊಂದಿರುವ ರಾಜ್ಯದಲ್ಲಿ 113  ಮಂದಿ ಶಾಸಕರಿದ್ದರೆ  ಆ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶವಿದೆ. ಆದರೆ ರಾಜರಾಜೇಶ್ವರಿ ನಗರ ಕ್ಷೇತ್ರ, ಜಯನಗರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯದ ಕಾರಣ 222  ಅಭ್ಯರ್ಥಿಗಳು ಆರಿಸಿ ಬಂದಿದ್ದಾರೆ. ಇದರಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ ಶಾಸಕರ ಬಲ 111 ಇರಬೇಕಾಗುತ್ತದೆ. ಈ ಸಂಖ್ಯೆಯನ್ನು ಆಧರಿಸಿ ರಾಜ್ಯಪಾಲರು ವಾರದೊಳಗೆ  ಬಹುಮತ ಸಾಭೀತು ಪಡಿಸಿ ಎಂದು ಬಿಜೆಪಿಗೆ ಆಹ್ವಾನ ನೀಡಿದ್ದಾರೆ. ಒಂದು ವೇಳೆ ಬಿಜೆಪಿಗೆ ಆಹ್ವಾನ ನೀಡದೆ ಇದ್ದಲ್ಲಿ ಬಿಜೆಪಿಗೆ ರಾಜ್ಯಪಾಲರನ್ನೂ ಪ್ರಶ್ನಿಸಲು ಅವಕಾಶ ನಿರ್ಮಾಣವಾಗುತ್ತಿತ್ತು. ಈ ಅವಕಾಶವನ್ನು ನೀಡದ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ರಾಜ್ಯಪಾಲರ ನಡೆಯನ್ನು ಸುಪ್ರಿಂಕೋರ್ಟ್‌ನಲ್ಲಿ ಕಾಂಗ್ರೆಸ್‌ ಪ್ರಶ್ನಿಸಬಹುದು. ಸುಪ್ರಿಂಕೋರ್ಟ್‌ ಕೂಡ ವಾರದೊಳಗೆ ಗಡುವು ನೀಡಲೂ ಬಹುದು. ಆ ಅವಧಿಯಲ್ಲಿ  ಬಿಜೆಪಿ ರಾಜಪಾಲರ ಮುಂಜೆ ಬಹುಮತ ಸಾಭೀತು ಪಡಿಸುವ ಕಾರ್ಯಕ್ರಮ ಮುಗಿದಿರುತ್ತೆ.

 

Please follow and like us:
0
http://bp9news.com/wp-content/uploads/2018/05/collage-2-20.jpghttp://bp9news.com/wp-content/uploads/2018/05/collage-2-20-150x150.jpgBP9 Bureauಪ್ರಮುಖಬೆಂಗಳೂರು: ರಾಜ್ಯಪಾಲರು ಬಿಜೆಪಿ ಸರ್ಕಾರ ರಚಿಸುವಂತೆ ಆಹ್ವಾನಕೊಟ್ಟಿದ್ದರಿಂದ, ಅಧಿಕ ಸಂಖ್ಯೆಯನ್ನು ಹೊಂದಿರು ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌  ಸುಪ್ರಿಂ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿವೆ. ಹೈಕಮಾಂಡ್‌ ಸಂಪರ್ಕಿಸಿರುವ ಕಾಂಗ್ರೆಸ್‌ ಮುಖಂಡರು ತಮ್ಮ ಪಟ್ಟು ಬಿಡದೆ ಸರ್ಕಾರ ರಚಿಸಲೇ ಬೇಕಾಗಿರುವುದರಿಂದ ನ್ಯಾಯಾಲಯದ ಮೊರೆ ಹೋಗಿಯಾದ್ರೂ  ಅಧಿಕಾರ ಪಡೆಯುವ ತವಕದಲ್ಲಿದ್ದಾರೆ. ಇದಕ್ಕೆ ಹೈಕಮಾಂಡ್‌ ಕೂಡ ಸಮ್ಮತಿ ನೀಡಿದ್ದು ಹಿರಿಯ ವಕೀಲ  ಅಭಿಷೇಕ್‌ ಮನು ಸಿಂಘ್ವಿ ಅವರನ್ನು ಕೂಡಲೇ ದೆಹಲಿಗೆ ಬರುವಂತೆ ಬುಲಾವ್‌ ನೀಡಿದೆ. ಬುಧವಾರ...Kannada News Portal