ಬೆಂಗಳೂರು:ಸರ್ಕಾರ ರಚಿಸುವ ಕುರಿತು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆದಿದ್ದು,ಮೂರು ಪಕ್ಷಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ, ಇದರಿಂದಾಗಿ ಚಂಡು ಈಗ ರಾಜ್ಯಪಾಲರ ಅಂಗಳದಲ್ಲಿದ್ದು ಮುಂದಿನ ಬೆಳವಣಿಗೆಗಾಗಿ ಎಲ್ಲರ ಚಿತ್ತ ರಾಜ್ಯಪಾಲರತ್ತ ಹೊರಳಿದೆ.

ಬುಧವಾರ ನಡೆದ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ 117 ಶಾಸಕರ ಸಹಿ ಇರುವ ಪತ್ರಗಳನ್ನ ರಾಜ್ಯಪಾಲರಿಗೆ ಸಲ್ಲಿಸಿವೆ. ಅಲ್ಲದೆ,  ಸರ್ಕಾರ ರಚಿಸುವ ತಮ್ಮ ಮನವಿ ಪತ್ರಗಳನ್ನ ಇದರ ಜೊತೆಯೇ ಸಲ್ಲಿಸಿರುವುದಾಗಿಯೂ ಮತ್ತು ರಾಜ್ಯಪಾಲರಿಂದ ಸೂಚನೆ ಬರುವವರೆಗೆ ಕಾಯುವುದಾಗಿ ಉಭಯ ಪಕ್ಷಗಳ ಮುಖಂಡರಾದ ಎಚ್ ಡಿ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ತಿಳಿಸಿದ್ದಾರೆ.
ಬುಧವಾರ ಸಂಜೆ ರಾಜ್ಯಪಾಲರನ್ನ ಭೇಟಿ ಮಾಡಿದ ನಂತ್ರ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್ , ಇಂದು ಬೆಳಗ್ಗೆ ಕಾಂಗ್ರೆಸ್ ಪಕ್ಷದ 78 ಮಂದಿ ಶಾಸಕರು ಸೇರಿ ನಡೆಸಿದ ಶಾಸಕಾಂಗ ಪಕ್ಷದ ಸಭೆಯಲ್ಲಿ ಜೆಡಿಎಸ್ ಗೆ ಬೆಂಬಲ ಸೂಚಿಸಿ ತೆಗೆದುಕೊಂಡಿರುವ ನಿರ್ಣಯದ ಪತ್ರವನ್ನ ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ. ರಾಜ್ಯಪಾಲರು ಕಾನೂನಿನ ಪ್ರಕಾರ, ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಸಂವಿಧಾನಾತ್ಮಕವಾಗಿ ಇತ್ತೀಚೆಗೆ ಈ ಪರಿಸ್ಥಿತಿ ಇದ್ದ ಇತರೆ ರಾಜ್ಯಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದರು.
ಕುಮಾರಸ್ವಾಮಿ ಮಾತನಾಡಿ, ಇಂದು ಬೆಳಗ್ಗೆ ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ನಮಗೆ ಬೆಂಬಲ ನೀಡಿ ಸರ್ಕಾರ ರಚಿಸಲು ತೆಗೆದುಕೊಂಡ ನಿರ್ಣಯವನ್ನ ಪ್ರಸ್ತಾಪಿಸಿದಾಗ ಎಲ್ಲಾ ಶಾಸಕರು ಒಪ್ಪಿ ಇದಕ್ಕೆ ಸಮ್ಮತಿ ಸೂಚಿಸಿದರು. ಅದರಂತೆ ನಾವು ಕಾಂಗ್ರೆಸ್ ನ ನಿರ್ಣಯದ ಜೊತೆಗೆ ನಮ್ಮ ನಿರ್ಣಯವನ್ನೂ ಸೇರಿಸಿ ಹಕ್ಕು ಮಂಡನೆಗಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.

 

ಇದಕ್ಕೆ ಉತ್ತರಿಸಿದ ರಾಜ್ಯಪಾಲರು, ಈ ಸಮಸ್ಯೆ ಕುರಿತು  ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಇತ್ತು ಸಂವಿಧಾನಾತ್ಮಕವಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯಪಾಲರು ತೆಗೆದುಕೊಂಡ ತೀರ್ಮಾನಗಳನ್ನ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಹಿಂದೆ ಗೋವಾದಲ್ಲಿ , ಬಿಜೆಪಿ ಕಡಿಮೆ ಸಂಖ್ಯೆಗಳಲ್ಲಿದ್ದರೂ ತಾನೇ ಸರ್ಕಾರ ರಚಿಸಿತ್ತು. ಅಲ್ಲದೆ, ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಗೆ ಅವಕಾಶ ನೀಡಬೇಕೆಂಬ ಸಂವಿಧಾನದ ನಿಯಮವನ್ನ ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಎರಡು ಪಕ್ಷಗಳು ಸೇರಿ ಒಟ್ಟಿಗೆ ಸೇರಿ ಸರ್ಕಾರ ರಚಿಸಲು ಮುಂದಾದಾಗ ಆ ಎರಡು ಪಕ್ಷಗಳ ಸಂಖ್ಯೆ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಪಡೆದಿರುವ ಸಂಖ್ಯೆಗಿಂತಾ ಹೆಚ್ಚಿದ್ದರೆ ಅವರಿಗೆ ಅವಕಾಶ ಕೊಡಬೇಕೆಂದು ತೀರ್ಪು ನೀಡಿದೆ. ಇದರಂತೆ ಬಿಜೆಪಿ ಗೋವಾದಲ್ಲಿ ತಾನೇ ಸರ್ಕಾರ ರಚಿಸಿದೆ. ಇದಲ್ಲದೆ, ಮಣಿಪುರ, ಬಿಹಾರ, ನಾಗಾಲ್ಯಾಂಡ್, ಕಾಶ್ಮೀರದಲ್ಲಿಯೂ ಸರ್ಕಾರ ರಚಿಸಿದೆ. ಈಗ ಇದೇ ಮಾದರಿಯಲ್ಲಿ ನಮಗೂ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕೋರಿರುವುದಾಗಿ ಹೇಳಿದ್ದಾರೆ.

 

Please follow and like us:
0
http://bp9news.com/wp-content/uploads/2018/05/karnataka-vajubhai.jpghttp://bp9news.com/wp-content/uploads/2018/05/karnataka-vajubhai-150x150.jpgBP9 Bureauಪ್ರಮುಖಬೆಂಗಳೂರು:ಸರ್ಕಾರ ರಚಿಸುವ ಕುರಿತು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆದಿದ್ದು,ಮೂರು ಪಕ್ಷಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ, ಇದರಿಂದಾಗಿ ಚಂಡು ಈಗ ರಾಜ್ಯಪಾಲರ ಅಂಗಳದಲ್ಲಿದ್ದು ಮುಂದಿನ ಬೆಳವಣಿಗೆಗಾಗಿ ಎಲ್ಲರ ಚಿತ್ತ ರಾಜ್ಯಪಾಲರತ್ತ ಹೊರಳಿದೆ. ಬುಧವಾರ ನಡೆದ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ 117 ಶಾಸಕರ ಸಹಿ ಇರುವ ಪತ್ರಗಳನ್ನ ರಾಜ್ಯಪಾಲರಿಗೆ ಸಲ್ಲಿಸಿವೆ. ಅಲ್ಲದೆ,  ಸರ್ಕಾರ ರಚಿಸುವ ತಮ್ಮ ಮನವಿ ಪತ್ರಗಳನ್ನ ಇದರ ಜೊತೆಯೇ ಸಲ್ಲಿಸಿರುವುದಾಗಿಯೂ ಮತ್ತು ರಾಜ್ಯಪಾಲರಿಂದ...Kannada News Portal