ಭೋಪಾಲ್ : ನಾವು ಯಾವ ಕಾಲದಲ್ಲಿ ಇದ್ದೇವೆ… ಇದು ನಾಗರೀಕ ಸಮಾಜವೇ.. ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ನಿಷ್ಕ್ರಿಯವಾಗಿದ್ದಾರೆ ಎಂದು ಅಣುಕಿಸುವಂತಾ ವಿಡಿಯೋ ತುಣುಕೊಂದು ಸಾಮಾಜಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಭೋಪಾಲ್​​ನ ಮಸ್ತಾಪುರ ಗ್ರಾಮದ ಕನ್ವರ್ಬಾಯಿ ಎಂಬ ಮಹಿಳೆಗೆ ಭಾನುವಾರ ಹಾವು ಕಡಿದಿತ್ತು. ಆಕೆಯನ್ನು ಮೋಹನ್ ಗಢದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ದೇಹವನ್ನು 35 ಕಿ. ಲೋ ಮೀಟರ್ ದೂರದ ಟಿಕಂಘರ್ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಯ್ಯುವಂತೆ ಪೊಲೀಸರು ಈಕೆಯ ಪುತ್ರ ರಾಜೇಶ್​​ಗೆ ಸೂಚಿಸಿದ್ದರು. ಆದರೆ ಆಡಳಿತ ವ್ಯವಸ್ಥೆ ರಾಜೇಶ್​ಗೆ ಶವವಾಹನ ಒದಗಿಸಿರಲಿಲ್ಲ.

ಇದರಿಂದ ಅನಿವಾರ್ಯವಾಗಿ ರಾಜೇಶ್ ತನ್ನ ತಾಯಿಯ ಶವವನ್ನು ಮೋಟರ್ ಸೈಕಲ್​​ಗೆ ಕಟ್ಟಿ ಸಂಬಂಧಿಯೊಬ್ಬನ ನೆರವಿನೊಂದಿಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೀಗ ಆ ವಿಡಿಯೋ ನೋಡಿದ ಸಾರ್ವಜನಿಕ ವಲಯದಲ್ಲಿ ಭೋಪಾಲ್ ಜಿಲ್ಲಾಡಳಿತದ ಮೇಲೆ ಗರಂ ಆಗಿದ್ದು ಇದೇನಾ ನಿಮ್ಮ ಕರ್ತವ್ಯ ನಿರ್ವಹಿಸುವ ಪರಿ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ನಡೆದಿರುವುದು ಏನು ??? :

ಮಸ್ತಾಪುರದಲ್ಲಿ ಇರುವ ಯುವಕನೊಬ್ಬ ಹಾವು ಕಡಿದಿರುವ ತಾಯಿಯನ್ನು ಮೋಹನ್​ ಗಢದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆತನ ತಾಯಿ ಮೃತಪಟ್ಟಿದ್ದರು. ಆದರೆ ಪೊಲೀಸರು ಶವಪರೀಕ್ಷೆ ನಡೆಸದೇ ಮೃತದೇಹವನ್ನು ಶವ ಸಂಸ್ಕಾರ ಮಾಡಲಾಗದು ಎಂದು ಹೇಳಿದರು.

ಆದರೆ ಈ ಸಮಯದಲ್ಲಿ ಶವ ಸಾಗಿಸುವ ವಾಹನವನ್ನು ಯಾರೂ ಕೂಡ ವ್ಯವಸ್ಥೆ ಮಾಡಲಿಲ್ಲ. ಆರ್ಥಿಕ ಸಮಸ್ಯಯಿಂದ ಮೃತಳ ಮಗನ ಬಳಿ ಖಾಸಗೀ ವಾಹನಕ್ಕೆ ಬಾಡಿಗೆ ತೆರಲು ಹಣ ಇರಲಿಲ್ಲ. ಈ ಸಂದರ್ಭದಲ್ಲಿ ದಿಕ್ಕು ತೋಚದಾದ ಆತ ತನ್ನ ಬೈಕ್​​ನಲ್ಲೆ ತಾಯಿಯ ಶವವನ್ನು ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ. ( ಇದೇ ವಿಡಿಯೋ ಇದೀಗ ವೈರಲ್ ಆಗಿರುವುದು )

ಆದರೆ ಮರಣೋತ್ತರ ಪರೀಕ್ಷೆ ಮಾಡಿದ ಭೋಪಾಲ್ ಜಿಲ್ಲಾ ಆಸ್ಪತ್ರೆ ಮೃತದೇಹವನ್ನು ವಾಪಾಸು ತೆಗೆದು ಕೊಂಡು ಹೋಗಲು ಈತನಿಗೆ ಶವವಾಹನ ಒದಗಿಸಿದೆ.

ಇನ್ನು ಈ ವಿಡಿಯೋ ನೋಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವೈದ್ಯಾಧಿಕಾರಿಗಳು ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದು, ರಾಜೇಶ್ ತಾಯಿಗೆ ಹಾವು ಕಡಿತ ತಕ್ಷಣ ಆಕೆಯನ್ನು ಗುಣಮುಖಳಾಗುತ್ತಾಳೆ ಎಂಬ ನಂಬಿಕೆಯಿಂದ ದೇವಾಲಯಕ್ಕೆ ಕರೆದೊಯ್ಯಲು ನಿರ್ಧರಿಸಿದ್ದ. ಆದರೆ ಬಳಿಕ ಮನಸ್ಸು ಬದಲಾಯಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಷ್ಟರಲ್ಲಿ ಸಮಯ ಮೀರಿದ್ದರಿಂದ ಆತನ ತಾಯಿಯನ್ನು ಉಳಿಸಲಾಗಲಿಲ್ಲ ಎಂದು ಆರೋಗ್ಯ ಕೇಂದ್ರ ಮಾಹಿತಿ ನೀಡಿದೆ ಎಂದು ಜಿಲ್ಲಾಧಿಕಾರಿ ಅಭಿಜಿತ್ ಅಗರ್ ವಾಲ್ ಸ್ಪಷ್ಟಪಡಿಸಿದ್ದು, ಇತ್ತ ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು 108 ಕ್ಕೆ ಕರೆ ಮಾಡಿದ್ದರೆ ಜಿಲ್ಲಾ ಆಸ್ಪತ್ರೆಯೇ ಶವವಾಹನಕ್ಕೆ ವ್ಯವಸ್ಥೆ ಮಾಡುತ್ತಿತ್ತು ಆದರೆ ಈ ವ್ಯಕ್ತಿ ಯಾವ ಪ್ರಯತ್ನವನ್ನೂ ಮಾಡದೇ ಈ ಕೃತ್ಯ ಮಾಡಿದ್ದಾನೆ ಎಂದು ದೂರಿದ್ದಾರೆ.

Please follow and like us:
0
http://bp9news.com/wp-content/uploads/2018/07/8d292a98-84bd-11e8-a662-45bbb3f001dc-1.jpghttp://bp9news.com/wp-content/uploads/2018/07/8d292a98-84bd-11e8-a662-45bbb3f001dc-1-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯThe deceased son who carried the dead mother's body on the bike !!!ಭೋಪಾಲ್ : ನಾವು ಯಾವ ಕಾಲದಲ್ಲಿ ಇದ್ದೇವೆ... ಇದು ನಾಗರೀಕ ಸಮಾಜವೇ.. ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ನಿಷ್ಕ್ರಿಯವಾಗಿದ್ದಾರೆ ಎಂದು ಅಣುಕಿಸುವಂತಾ ವಿಡಿಯೋ ತುಣುಕೊಂದು ಸಾಮಾಜಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭೋಪಾಲ್​​ನ ಮಸ್ತಾಪುರ ಗ್ರಾಮದ ಕನ್ವರ್ಬಾಯಿ ಎಂಬ ಮಹಿಳೆಗೆ ಭಾನುವಾರ ಹಾವು ಕಡಿದಿತ್ತು. ಆಕೆಯನ್ನು ಮೋಹನ್ ಗಢದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ದೇಹವನ್ನು 35 ಕಿ. ಲೋ ಮೀಟರ್ ದೂರದ ಟಿಕಂಘರ್ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ...Kannada News Portal