ಸಿನಿಮಾ ರಂಗದಲ್ಲಿ ಕ್ಯಾನ್ಸರ್​ ರೋಗಕ್ಕೆ ಬಲಿಯಾದ ದುರಂತ  ಸ್ಟಾರ್​ಗಳ ಬಗ್ಗೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇತ್ತೀಚೆಗೆ ನಟಿ  ಸೋನಾಲಿ ಬೇಂದ್ರೆ ಕೂಡ  ಕ್ಯಾನ್ಸರ್​ ರೋಗದಿಂದ ಬಳಲು ತ್ತಿರುವುದಾಗಿ ತಾವೇ ಸ್ವತಃ ಹೇಳಿಕೊಂಡಿದ್ದರು. ನಾಲ್ಕನೇ ಹಂತದಲ್ಲಿರುವ ರೋಗದ ಬಗ್ಗೆ ದೃಢವಾಗಿ ಬಲಾಢ್ಯಗೊಂಡಿದ್ದೇನೆ ಎಂದು ಸೋನಾಲಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಳಿಸಿದ್ದರು. ನನಗೆ ಕ್ಯಾನ್ಸರ್​ ಇರುವುದಾಗಿ,  ಕುಟುಂಬ ಮತ್ತು ಸ್ನೇಹಿತರು ಈ ಬಗ್ಗೆ ನನ್ನೊಂದಿಗೆ ​ ಇದ್ದಾರೆ.  ನಾನು  ಇನ್ನಷ್ಟು ಬದುಕಿನಲ್ಲಿ ಉತ್ಸಾಹ ಕಂಡುಕೊಂಡಿದ್ದೇನೆ ಎಂಬುದನ್ನು ಮಾತ್ರ ಹೇಳಿದ್ದರು. ಸದ್ಯ ಕ್ಯಾನ್ಸರ್​ಗೆ ಬಂದ ನಂತರ    ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

ನಟಿ ಸೋನಾಲಿ ಬೇಂದ್ರೆ ಕನ್ನಡದಲ್ಲಿ ಉಪೇಂದ್ರೆ, ಮತ್ತು ಶಿವರಾಜ್​ಕುಮಾರ್​ಅ ಭಿನಯದ ಪ್ರೀತ್ಸೆ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ.

ಕ್ಯಾನ್ಸರ್​ ಬಂದ ನಂತರ ಮೊದಲ ಬಾರಿಗೆ ಸೋನಾಲಿ ಬೇಂದ್ರೆಯವರು ಫೋಟೋವೊಂದನನ್ನು ಹಾಕಿದ್ದಾರೆ. ಇನ್ಸಟ್ರಾಗ್ರಾಂನಲ್ಲಿ ಫೋಟೋವನ್ನು ಶೇರ್​ ಮಾಡುವ ಮೂಲಕ  ಅಭಿಮಾನಿಗಳಿಗೆ ತಾನಿರುವ ಸದ್ಯದ ಪರಿಸ್ಥಿತಿ ಬಗ್ಗೆ ತಿಳಿಸಿದ್ದಾರೆ.

ಸದ್ಯ ಅವರು ಹೇರ್​ ಕಟ್​ ಮಾಡಿರುವ ಫೋಟೋವೊಂದನ್ನು ಹಾಕಿದ್ದಾರೆ.ನನ್ನ ನೆಚ್ಚಿನ ಲೇಖಕಿ ಇಸಾಬೆಲ್ ಅಲ್ಲೆಂಡೆ ಹೇಳಿರುವಂತೆ, ಅಂತರ್ಗತವಾಗಿರುವ ಸಾಮರ್ಥ್ಯವನ್ನ ಬಲವಂತವಾಗಿ ನಾವು ಹೊರತೆಗೆಯುವವರೆಗೂ ನಾವು ಎಷ್ಟು ಬಲಿಷ್ಠರು ಎಂಬುದು ನಮ್ಮ ಅರಿವಿಗೆ ಬರುವುದೇ ಇಲ್ಲ. ಯಾವುದೋ ದುರಂತ, ಯುದ್ಧ, ಅಗತ್ಯ ಸಂದರ್ಭಗಳಲ್ಲಿ ನಾವು ಅದ್ಭುತ ಕೆಲಸಗಳನ್ನ ಮಾಡುತ್ತೇವೆ ಎಂದು ಸೊನಾಲಿ ಬೇಂದ್ರೆ ಬರೆದುಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ನನಗಾಗಿ ಹೊರಹೊಮ್ಮುತ್ತಿರುವ ಪ್ರೀತಿ ನಿಜಕ್ಕೂ ಅಗಾಧವಾದುದಾಗಿದೆ. ಕ್ಯಾನ್ಸರ್ ವಿರುದ್ಧ ಹೋರಾಡುವುದರಲ್ಲಿ ತಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ಅನುಭವಗಳನ್ನ ನನ್ನ ಜೊತೆ ಹಂಚಿಕೊಂಡ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ತನಗೆ ಮಾರಕ ಕ್ಯಾನ್ಸರ್ ಹೆಮ್ಮಾರಿ ವಕ್ಕರಿಸಿರುವ ಬಗ್ಗೆ ಸ್ವತಃ ಸೊನಾಲಿ ಬೇಂದ್ರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು.

Please follow and like us:
0
http://bp9news.com/wp-content/uploads/2018/07/sonali-bendre-7591.jpghttp://bp9news.com/wp-content/uploads/2018/07/sonali-bendre-7591-150x150.jpgBP9 Bureauಪ್ರಮುಖಸಿನಿಮಾಸಿನಿಮಾ ರಂಗದಲ್ಲಿ ಕ್ಯಾನ್ಸರ್​ ರೋಗಕ್ಕೆ ಬಲಿಯಾದ ದುರಂತ  ಸ್ಟಾರ್​ಗಳ ಬಗ್ಗೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇತ್ತೀಚೆಗೆ ನಟಿ  ಸೋನಾಲಿ ಬೇಂದ್ರೆ ಕೂಡ  ಕ್ಯಾನ್ಸರ್​ ರೋಗದಿಂದ ಬಳಲು ತ್ತಿರುವುದಾಗಿ ತಾವೇ ಸ್ವತಃ ಹೇಳಿಕೊಂಡಿದ್ದರು. ನಾಲ್ಕನೇ ಹಂತದಲ್ಲಿರುವ ರೋಗದ ಬಗ್ಗೆ ದೃಢವಾಗಿ ಬಲಾಢ್ಯಗೊಂಡಿದ್ದೇನೆ ಎಂದು ಸೋನಾಲಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಳಿಸಿದ್ದರು. ನನಗೆ ಕ್ಯಾನ್ಸರ್​ ಇರುವುದಾಗಿ,  ಕುಟುಂಬ ಮತ್ತು ಸ್ನೇಹಿತರು ಈ ಬಗ್ಗೆ ನನ್ನೊಂದಿಗೆ ​ ಇದ್ದಾರೆ. ...Kannada News Portal