ಅದು ಹಂಸಲೇಖಾ ಅವರ ಕಡು ಕಷ್ಟದ ದಿನಗಳು. ಖಾಸಾ ಸೋದರ ಜಿ.ಬಾಲಕೃಷ್ಣ ಅವರ ಆರ್ಕೆಸ್ಟ್ರಾ ಮತ್ತು ನಾಟಕ ತಂಡದಲ್ಲಿ ಸಕ್ರಿಯರಾಗಿದ್ದ ಹಂಸಲೇಖಾ ಉರುಫ್ ಗಂಗರಾಜು ಅವರು ಎಷ್ಟೇ ಕಷ್ಟಪಟ್ಟು ದುಡಿದರೂ ಆ ದೇವರು ಮಾತ್ರ ಕರುಣಾಹೀನನಾಗಿದ್ದ. ಇಂಥಾ ದಾರಿದ್ರ್ಯದ ದಿನಗಳಲ್ಲಿ ಇವರಿಗೆ ದೇವರ ಮೇಲೆ ಮುನಿಸು ಬಂದದ್ದು ಸಹಜವೇ ಆಗಿತ್ತು. ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಮಹಾ ದೈವಭಕ್ತರಾಗಿದ್ದ ಹಂಸಲೇಖಾ ಕ್ರಮೇಣ ಬದುಕಿನ ಕಷ್ಟ ಕೋಟಲೆಗೊಳಗಾಗಿ ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳತೊಡಗಿದ್ದರು.

ಇದೇ ಹೊತ್ತಿನಲ್ಲಿ ಸಾಕ್ಷಾತ್ ಆ ದೇವರೇ ಕಳಿಸಿದಂತೆ ಡಿ.ಜಿ.ನಾಗರಾಜ್ ಅನ್ನುವವರು ತಾವು ನಿರ್ಮಿಸಲಿರುವ ‘ತ್ರಿವೇಣಿ’ ಎಂಬ ಚಿತ್ರಕ್ಕೆ ಹಾಡೊಂದನ್ನು ಬರೆದುಕೊಡುವಂತೆ ಹಂಸಲೇಖಾ ಅವರಿಗೆ ದುಂಬಾಲು ಬೀಳುತ್ತಾರೆ. ಚಿತ್ರದ ನಾಯಕನ ಬದುಕು ಮತ್ತು ತಮ್ಮ ವೈಯಕ್ತಿಕ ಬದುಕು ಒಂದೇ ರೀತಿ ಇದೆಯಲ್ಲಾ ಎಂದೆನಿಸಿತು ಹಂಸಲೇಖಾಗೆ. ಸನ್ನಿವೇಶದ ಪ್ರಕಾರ ‘ತ್ರಿವೇಣಿ’ ಚಿತ್ರದ ನಾಯಕ ಕೂಡಾ ಕಷ್ಟ ಕೋಟಲೆಯಲ್ಲಿ ಬೆಂದು ನೊಂದು ದೇವರನ್ನು ದೂಷಿಸುವ ಹಂತಕ್ಕೆ ಬಂದು ತಲುಪಿದ್ದನಂತೆ.  ಒಂದು ರಾತ್ರಿ ಮುರುಕು ಮನೆಯಲ್ಲಿ ಕುಳಿತು ತಮ್ಮ ಮತ್ತು ಚಿತ್ರದ ನಾಯಕನ ಜೀವನದ ಸಾಮ್ಯತೆಯನ್ನು ತಾಳೆ ಹಾಕುತ್ತಿರುವಂತೆಯೇ ಖಾಲಿ ಹಾಳೆಯ ಮೇಲೆ ಅಕ್ಷರಗಳು ಮೋಡಿ ಮಾಡಿದ್ದು ಹೀಗೆ .

‘ನೀನಾ ಭಾಗವಂತಾ, ಜಗಕುಪಕರಿಸಿ ನನಗಪಕರಿಸೋ ಜಾಗದೋದ್ದಾರಕ ನೀನೇನಾ?’ – ಹಂಸಲೇಖಾ ಅವರ ಪ್ರಶ್ನೆ ನೇರವಾಗಿ ದೇವರ್ ಹೃದಯಕ್ಕೆ ತಲುಪಿತೋ ಏನೋ, ಈ ಹಾಡು ಸೂಪರ್ ಹಿಟ್ ಆಯಿತು.
ವಾಸ್ತವವಾಗಿ ಈ ಹಾಡನ್ನು ತೆಲುಗಿನ ಗಾಯಕ ಘಂಟಸಾಲಾ ಅವರ ಕಂಠದಲ್ಲಿ ಹಾಡಿಸುವುದು ಸಂಗೀತ ನಿರ್ದೇಶಕ ಉಪೇಂದ್ರಕುಮಾರ್ ಅವರ ಆಶಯವಾಗಿತ್ತು.

ಆದರೆ ಅಷ್ಟರಲ್ಲಾಗಲೇ ಹೈ ಪಿಚ್ ಗಾಯಕನೆಂದೇ ಆರ್ಕೆಸ್ಟ್ರಾ ತಂಡದಲ್ಲಿ ಖ್ಯಾತಿ ಪಡೆದಿದ್ದ ತಮ್ಮ ಸೋದರ ಜಿ.ಬಾಲಕೃಷ್ಣ ಕಂಠದಲ್ಲೇ ಈ ಹಾಡನ್ನು ಹಾಡಿಸ ಬೇಕೆಂದು ಹಂಸಲೇಖಾ ಹಠ ಹಿಡಿದು ಕುಳಿತುಬಿಟ್ಟರಂತೆ! ‘ಲಂಕೇಶ್ ಪತ್ರಿಕೆ’ಯಲ್ಲಿ ಮೊಳೆ ಜೋಡಿಸುವ ಕೆಲಸದಲ್ಲಿದ್ದ ಬಾಲಕೃಷ್ಣ ಬದುಕು ಕೂಡಾ ಶಾಪಗ್ರಸ್ತವೇ. ಒಂದು ವಿಚಿತ್ರ ನೋಡಿ : ಯಾವ ದೇವರನ್ನು ಹಂಸಲೇಖಾ ಬೈದು ಬರೆದರೋ ಆ ದೇವರು ಅವರ ಬದುಕನ್ನು ಹಸನು ಮಾಡಿದ. ಆದರೆ ಯಾವ ದೇವರನ್ನು ಜಿ.ಬಾಲಕೃಷ್ಣ ಬೈದು ಹಾಡಿದರೋ ಅದೇ ಹಾಡು ಇವರ ಬದುಕನ್ನು ಬಂಗಾರ ಮಾಡಲೇ ಇಲ್ಲ! ಒಂದೇ ಹಾಡು ಒಬ್ಬರಿಗೆ ವರವಾದರೆ ಮತ್ತೊಬ್ಬರಿಗೆ ಶಾಪವಾದ ಬಗೆಯಿದು…!!!

ಳೇಖನ : ಗಣೇಶ್​ ಕಾಸರಗೋಡು, ಚಲನಚಿತ್ರ ವಿಮರ್ಶಕರು

Please follow and like us:
0
http://bp9news.com/wp-content/uploads/2018/11/WhatsApp-Image-2018-11-08-at-10.59.39-AM-1.jpeghttp://bp9news.com/wp-content/uploads/2018/11/WhatsApp-Image-2018-11-08-at-10.59.39-AM-1-150x150.jpegBP9 Bureauಪ್ರಮುಖಸಿನಿಮಾಅದು ಹಂಸಲೇಖಾ ಅವರ ಕಡು ಕಷ್ಟದ ದಿನಗಳು. ಖಾಸಾ ಸೋದರ ಜಿ.ಬಾಲಕೃಷ್ಣ ಅವರ ಆರ್ಕೆಸ್ಟ್ರಾ ಮತ್ತು ನಾಟಕ ತಂಡದಲ್ಲಿ ಸಕ್ರಿಯರಾಗಿದ್ದ ಹಂಸಲೇಖಾ ಉರುಫ್ ಗಂಗರಾಜು ಅವರು ಎಷ್ಟೇ ಕಷ್ಟಪಟ್ಟು ದುಡಿದರೂ ಆ ದೇವರು ಮಾತ್ರ ಕರುಣಾಹೀನನಾಗಿದ್ದ. ಇಂಥಾ ದಾರಿದ್ರ್ಯದ ದಿನಗಳಲ್ಲಿ ಇವರಿಗೆ ದೇವರ ಮೇಲೆ ಮುನಿಸು ಬಂದದ್ದು ಸಹಜವೇ ಆಗಿತ್ತು. ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಮಹಾ ದೈವಭಕ್ತರಾಗಿದ್ದ ಹಂಸಲೇಖಾ ಕ್ರಮೇಣ ಬದುಕಿನ ಕಷ್ಟ ಕೋಟಲೆಗೊಳಗಾಗಿ ದೇವರ ಮೇಲಿನ...Kannada News Portal