ಬೆಂಗಳೂರು: ಬಿನ್ನಿಪೇಟೆ ಬಿಬಿಎಂಪಿ ವಾರ್ಡ್‌ನ ಉಪಚುನಾವಣಾ ಫ‌ಲಿತಾಂಶ ಬುಧವಾರ ಪ್ರಕಟವಾಗಿದ್ದು ಜೆಡಿಎಸ್‌ ಅಭ್ಯರ್ಥಿ ಜಯಭೇರಿ ಬಾರಿಸಿದ್ದು,ಕಾಂಗ್ರೆಸ್‌ ಮುಖಭಂಗ ಅನುಭವಿಸಿದೆ.

ಬಿಬಿಎಂಪಿ ಸದಸ್ಯೆ ಮಹದೇವಮ್ಮ ಅವರ ನಿಧನದಿಂದ ತೆರವಾಗಿದ್ದ ವಾರ್ಡ್‌ ಸಂಖ್ಯೆ 121ಕ್ಕೆ ಜೂನ್‌ 18 ರಂದು ಉಪಚುನಾವಣೆ ಮತದಾನ ನಡೆದಿತ್ತು. ಶೇ.43ರಷ್ಟು ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದರು.ಜೆಡಿಎಸ್‌ ಅಭ್ಯರ್ಥಿ, ಮಾಜಿ ಸದಸ್ಯ ದಿ. ಮಹದೇವಮ್ಮ ಪುತ್ರಿ ಐಶ್ವರ್ಯ ಅವರು 1,939 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಗಾಂಧಿನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಾರ್ಡ್‌ ಇದಾಗಿದ್ದು, ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡುರಾವ್‌ ಅವರು ಫ‌ಲಿತಾಂಶದಿಂದ ಮುಖಭಂಗ ಅನುಭವಿಸಿದ್ದಾರೆ. ವಾರ್ಡ್‌ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿತ್ತು. ಐಶ್ವರ್ಯ 7,188 ಮತಗಳು ತನ್ನದಾಗಿಸಿಕೊಂಡರೆ, ಕಾಂಗ್ರೆಸ್‌ ಅಭ್ಯರ್ಥಿ ಶ್ರೀವಿದ್ಯಾ ಶಶಿಕುಮಾರ್‌ 5,243 ಮತಗಳನ್ನು ಪಡೆದರೆ, ಬಿಜೆಪಿಯ ಜಿ.ಚಾಮುಂಡೇಶ್ವರಿ 2,445 ಮತಗಳನ್ನು ಪಡೆದಿದ್ದಾರೆ.

ಗುಂಡುರಾವ್‌ಗೆ ತಿರುಗೇಟು ! :

ಗೆಲುವಿನ ಸಂಭ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಐಶ್ವರ್ಯ ‘ಜನರು ಕೆಲಸಕ್ಕೆ ಮನ್ನಣೆ ನೀಡುತ್ತಾರೆ ಹೊರತು ಹಣಕ್ಕೆ ಅಲ್ಲ’ ಎಂದು ದಿನೇಶ್‌ ಗುಂಡುರಾವ್‌ ಅವರಿಗೆ ಟಾಂಗ್‌ ನೀಡಿದ್ದಾರೆ.

‘ಬಿನ್ನಿಪೇಟೆ ಅಂದ್ರೆ ಕಾಂಗ್ರೆಸ್‌ , ಕಾಂಗ್ರೆಸ್‌ ಇಲ್ಲದೆ ಬಿನ್ನಿಪೇಟೆ ಇಲ್ಲ ಎಂದು ದಿನೇಶ್‌ ಗುಂಡೂರಾವ್‌ ಭಾವಿಸಿದ್ದರು. ಈಗ ಬಿನ್ನಿಪೇಟೆ ಅಂದರೆ ಬಿಟಿಎಸ್‌ ನಾಗರಾಜ್‌ ಅಂತಾ ಜನ ತೋರಿಸಿಕೊಟ್ಟಿದ್ದಾರೆ’ ಎಂದರು. ‘ಗೆಲುವಿನ ಮೂಲಕ ಜನರು ನನ್ನ ತಾಯಿ ಮಹದೇವಮ್ಮ ಅವರನ್ನು ಜೀವಂತವಾಗಿರಿಸಿದ್ದಾರೆ. ಗೆಲುವನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನನ್ನ ಕ್ಷೇತ್ರದ ಮತದಾರರಿಗೆ ಅರ್ಪಿಸುತ್ತೇನೆ’ ಎಂದರು.

Please follow and like us:
0
http://bp9news.com/wp-content/uploads/2018/06/bannipet.jpghttp://bp9news.com/wp-content/uploads/2018/06/bannipet-150x150.jpgPolitical Bureauಪ್ರಮುಖಬೆಂಗಳೂರುರಾಜಕೀಯlost Dinesh Gundoorao,The victory for the JDS in the Binnipeet by-electionಬೆಂಗಳೂರು: ಬಿನ್ನಿಪೇಟೆ ಬಿಬಿಎಂಪಿ ವಾರ್ಡ್‌ನ ಉಪಚುನಾವಣಾ ಫ‌ಲಿತಾಂಶ ಬುಧವಾರ ಪ್ರಕಟವಾಗಿದ್ದು ಜೆಡಿಎಸ್‌ ಅಭ್ಯರ್ಥಿ ಜಯಭೇರಿ ಬಾರಿಸಿದ್ದು,ಕಾಂಗ್ರೆಸ್‌ ಮುಖಭಂಗ ಅನುಭವಿಸಿದೆ. ಬಿಬಿಎಂಪಿ ಸದಸ್ಯೆ ಮಹದೇವಮ್ಮ ಅವರ ನಿಧನದಿಂದ ತೆರವಾಗಿದ್ದ ವಾರ್ಡ್‌ ಸಂಖ್ಯೆ 121ಕ್ಕೆ ಜೂನ್‌ 18 ರಂದು ಉಪಚುನಾವಣೆ ಮತದಾನ ನಡೆದಿತ್ತು. ಶೇ.43ರಷ್ಟು ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದರು.ಜೆಡಿಎಸ್‌ ಅಭ್ಯರ್ಥಿ, ಮಾಜಿ ಸದಸ್ಯ ದಿ. ಮಹದೇವಮ್ಮ ಪುತ್ರಿ ಐಶ್ವರ್ಯ ಅವರು 1,939 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. var domain =...Kannada News Portal