ಕಿರುತೆರೆ : ‘ಹಳ್ಳಿ ಹೈದ ಪ್ಯಾಟೆಗ್ ಬಂದ’ ರಿಯಾಲಿಟಿ ಷೋನ ಇನ್ನೊಂದು ಸೀಸನ್‌ ಆರಂಭವಾಗಲಿದೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಒಟ್ಟು 12 ಜನ ‘ಹಳ್ಳಿ ಹೈದರು’ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಕಳೆದೆರಡು ಸೀಸನ್ನುಗಳಿಗಿಂತ ಈ ಸೀಸನ್ ತೀರಾ ಭಿನ್ನ. ಹಳ್ಳಿಗಳು ಬದಲಾಗುತ್ತಿರುವಂತೆ ಹಳ್ಳಿ ಜನರ ಬದುಕು ಕೂಡ ಬದಲಾಗಿದೆ. ಸೊಪ್ಪು ಮಾರುವವವನು ಫೋರ್‌–ಜಿ ಸ್ಮಾರ್ಟ್‌ಫೋನ್ ಉಪಯೋಗಿಸುತ್ತಾನೆ. ಆಧುನೀಕರಣ ಜಗತ್ತನ್ನೇ ಒಂದು ಹಳ್ಳಿಯನ್ನಾಗಿ ಮಾಡಿದೆ. ಆದರೆ ಈ ರಿಯಾಲಿಟಿ ಷೋ ಮೂಲಕ ತೋರಿಸುತ್ತಿರುವುದು ಬದಲಾದ ಹಳ್ಳಿಗಳಲ್ಲೂ ಉಳಿದಿರುವ ಹಳ್ಳಿತನವನ್ನು’ ಎಂದು ವಾಹಿನಿ ಹೇಳಿಕೊಂಡಿದೆ.

ಚಾಮರಾಜನಗರ ಜಿಲ್ಲೆಯ ಮನೋಜ್, ದಕ್ಷಿಣ ಕನ್ನಡ ಜಿಲ್ಲೆಯ ಶ್ರೀರಾಮ್, ಹಸುಗಳನ್ನೇ ತನ್ನ ಬಂಧುಗಳನ್ನಾಗಿ ಮಾಡಿಕೊಂಡಿರುವ ಮಂಜ, ಬೆಸ್ತರ ಹುಡುಗ ರಮೇಶ, ಸಿದ್ದಿ ಸಮುದಾಯದ ಹೈದ ಸಂತೋಷ್ ಸಿದ್ದಿ, ಕಥೆಗಳನ್ನು ಕಟ್ಟುವ ಬೀಜಮಾರ್ನಹಳ್ಳಿ ಪ್ರಮೋದ್, ಉತ್ತರ ಕರ್ನಾಟಕದ ಕುಸ್ತಿ ಹೈದ ಅಮಗೊಂಡ, ಬಂಡೆ ಒಡೆಯುವುದನ್ನೇ ಬದುಕನ್ನಾಗಿ ಮಾಡಿಕೊಂಡಿರುವ ನಾಗರಾಜ, ರೈತ ಹುಡುಗ ದೇವೇಂದ್ರ, ಮಿಮಿಕ್ರಿಯ ಪ್ರತಿಭೆ ಶಿವಾನಂದ ಸೇರಿದಂತೆ 12 ಮಂದಿ ಈ ಬಾರಿ ಭಾಗವಹಿಸುತ್ತಿದ್ದಾರೆ.

‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿ ಹಳ್ಳಿ ಹೈದರಿಗೂ ವಿಶೇಷ ಪ್ರತಿಭೆ ಇದೆ, ಅವರದ್ದೇ ಆದ ಹಿನ್ನೆಲೆ ಇದೆ. ಹಳ್ಳಿ ಹೈದ ಕಾರ್ಯಕ್ರಮದಲ್ಲಿ ಇವರು ಪ್ರತಿದಿನ ತಮಗೆ ವಹಿಸಿದ ಟಾಸ್ಕ್‌ಗಳನ್ನು ಪೂರ್ಣಗೊಳಿಸಿ ಹಣ ಗಳಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ನಗರ ಪ್ರದೇಶಗಳಿಗೆ ಸೇರಿದ 12 ಹುಡುಗಿಯರೂ ಕಾಣಿಸಿಕೊಳ್ಳಲಿದ್ದಾರೆ. ಉಲ್ಲೇಖಿಸಬೇಕಾದ ಸಂಗತಿ ಎಂದರೆ, ಇಲ್ಲಿ ಹಳ್ಳಿಹೈದರಿಗೆ ನಗರದ ಬದುಕನ್ನು ಕಲಿಸುವುದಿಲ್ಲ. ಅವರ ಹಳ್ಳಿತನವನ್ನು ಗೌರವಿಸುವುದೇ ಕಾರ್ಯಕ್ರಮದ ಉದ್ದೇಶ. ನಗರದ ಕೃತಕತೆಯ ನಡುವೆ ಮಾನವೀಯ ಮೌಲ್ಯಗಳನ್ನು ನೆನಪಿಸುವುದೂ ಇದರ ಉದ್ದೇಶಗಳಲ್ಲಿ ಒಂದು’ ಎಂದೂ ವಾಹಿನಿ ಹೇಳಿದೆ. ‘ಹಳ್ಳಿ ಹೈದ ಪ್ಯಾಟೆಗ್‌ ಬಂದ’ ಕಾರ್ಯಕ್ರಮದ ಉದ್ಘಾಟನೆ ಭಾನುವಾರ (ಸೆಪ್ಟೆಂಬರ್ 23) ನಡೆಯಲಿದ್ದು, ಪ್ಯಾಟೆಗೆ ಬರುವ ಹೈದರನ್ನು ನಟಿಯರಾದ ಮಾಲಾಶ್ರೀ, ಹರಿಪ್ರಿಯಾ ಮತ್ತು ಐಂದ್ರಿತಾ ರೇ ಬರಮಾಡಿಕೊಳ್ಳಲಿದ್ದಾರೆ. ಕಾರ್ಯಕ್ರಮ ಸೋಮವಾರದಿಂದ ಪ್ರಸಾರ ಆಗಲಿದೆ.

ಏಕೆ ಈ ಷೋ? :

ಈ ಕಾರ್ಯಕ್ರಮದ ಹಿಂದಿನ ಸೀಸನ್‌ಗಳು ಪಡೆದಿದ್ದ ಯಶಸ್ಸು ಮೂರನೆಯ ಸೀಸನ್‌ ಆರಂಭಿಸುತ್ತಿರುವುದಕ್ಕೆ ಕಾರಣ ಎನ್ನುತ್ತಾರೆ ವಾಹಿನಿಯ ಬ್ಯುಸಿನೆಸ್‌ ಹೆಡ್‌ ಸಾಯಿಪ್ರಸಾದ್. ‘ಕರ್ನಾಟಕದಲ್ಲಿ ಕಿರುತೆರೆ ವೀಕ್ಷಕರು ರಿಯಾಲಿಟಿ ಷೋಗಳನ್ನು ನೋಡಲು ಬಯಸುತ್ತಾರೆ. ಹಾಗಾಗಿ ಬೇರೆ ಯಾವುದೋ ಕಾನ್ಸೆಪ್ಟ್‌ಗಳನ್ನು ಅವರ ಎದುರು ಇಡುವುದಕ್ಕಿಂತ, ನಾವೇ ರೂಪಿಸಿದ ಕಾರ್ಯಕ್ರಮವನ್ನು ಮತ್ತೆ ತೆರೆಗೆ ತರಲು ನಿರ್ಧರಿಸಿದೆವು. ಸಾಂಸ್ಕೃತಿಕವಾಗಿ ಹಳ್ಳಿ ಮತ್ತು ನಗರಗಳ ನಡುವಿನ ವ್ಯತ್ಯಾಸಗಳನ್ನು, ಹಳ್ಳಿಯ ಸೊಗಡನ್ನು ತೋರಿಸುತ್ತದೆ ಈ ಕಾರ್ಯಕ್ರಮ’ ಎಂದು ಅವರು ಹೇಳುತ್ತಾರೆ.

ಟಿ.ವಿ. ಕಾರ್ಯಕ್ರಮಗಳನ್ನು ಸಂಜೆ 7ರಿಂದ 9ರ ನಡುವಿನ ಅವಧಿಯಲ್ಲಿ ವೀಕ್ಷಿಸುವವರಲ್ಲಿ ಹೆಣ್ಣು ಮಕ್ಕಳು ಹೆಚ್ಚು. ಕುಟುಂಬದ ಎಲ್ಲರೂ ಸೇರಿ ಟಿ.ವಿ. ವೀಕ್ಷಿಸುವುದು 9 ಗಂಟೆಯ ನಂತರ. ಹಾಗಾಗಿ ಈ ಕಾರ್ಯಕ್ರಮವನ್ನು ರಾತ್ರಿ 9 ಗಂಟೆಗೆ ಪ್ರಸಾರ ಮಾಡಿದರೆ ಸೂಕ್ತ ಎಂಬ ಲೆಕ್ಕಾಚಾರ ಹಾಕಿ, ವಾಹಿನಿ ಆ ಸಮಯದಲ್ಲೇ ಪ್ರಸಾರ ಮಾಡಲು ತೀರ್ಮಾನಿಸಿದೆ.

Please follow and like us:
0
http://bp9news.com/wp-content/uploads/2018/09/35352bcaa6a3bc49650d5ccf6495c5f7.jpghttp://bp9news.com/wp-content/uploads/2018/09/35352bcaa6a3bc49650d5ccf6495c5f7-150x150.jpgPolitical Bureauಪ್ರಮುಖಸಿನಿಮಾThe village came back to cityಕಿರುತೆರೆ : ‘ಹಳ್ಳಿ ಹೈದ ಪ್ಯಾಟೆಗ್ ಬಂದ’ ರಿಯಾಲಿಟಿ ಷೋನ ಇನ್ನೊಂದು ಸೀಸನ್‌ ಆರಂಭವಾಗಲಿದೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಒಟ್ಟು 12 ಜನ ‘ಹಳ್ಳಿ ಹೈದರು’ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಕಳೆದೆರಡು ಸೀಸನ್ನುಗಳಿಗಿಂತ ಈ ಸೀಸನ್ ತೀರಾ ಭಿನ್ನ. ಹಳ್ಳಿಗಳು ಬದಲಾಗುತ್ತಿರುವಂತೆ ಹಳ್ಳಿ ಜನರ ಬದುಕು ಕೂಡ ಬದಲಾಗಿದೆ. ಸೊಪ್ಪು ಮಾರುವವವನು ಫೋರ್‌–ಜಿ ಸ್ಮಾರ್ಟ್‌ಫೋನ್ ಉಪಯೋಗಿಸುತ್ತಾನೆ. ಆಧುನೀಕರಣ ಜಗತ್ತನ್ನೇ ಒಂದು ಹಳ್ಳಿಯನ್ನಾಗಿ ಮಾಡಿದೆ. ಆದರೆ ಈ ರಿಯಾಲಿಟಿ ಷೋ...Kannada News Portal