ಏನ್​ ಅಪ್ಪಾಜಿ ನೀವು…ನನ್ನ ಜೀವನ ಮುಗಿದೇ ಹೋಯ್ತು ಅನ್ಕೊಂಡಾಗ, ನನ್ನ ಹಾಡಿಸಿ ಮತ್ತೆ ಬದುಕಿಸಿದ್ರಿ..ಮತ್ತೆ ನನಗೆ ಜೀವ ಕೊಟ್ರಿ…ನನ್ನನ್ನು ಮತ್ತೆ ಹಾಡಿಸಿದ್ರಿ. ಅಪ್ಪಾಜಿ ನೀವು ನನಗೆ ಹರಸುತ್ತಿದ್ದೀರಿ. ಇದು ರಾಘವೇಂದ್ರ ರಾಜ್​ಕುಮಾರ್​ ಅವರ ಮನದಾಳದ ಮಾತುಗಳು.  ಕನ್ನಡದ ನಟ ಸಾರ್ವಭೌಮ , ಅಣ್ಣಾವ್ರ ಫೋಟೋ ಪಕ್ಕ ನಿಂತು ಮನದಾಳದ ಭಾವನೆಗಳನ್ನು ಬಿಚ್ಚಿಟ್ಟರು.

ಅಂದಹಾಗೇ   ನಟ ರಾಘವೇಂದ್ರ ರಾಜ್​ಕುಮಾರ್​ ಅನಾರೋಗ್ಯದಿಂದಾಗಿ ಬಹುಕಾಲ ಚಿತ್ರರಂಗದಿಂದ ದೂರವೇ ಉಳಿದಿದ್ರು. ರಾಘವೇಂದ್ರ  ರಾಜ್​ಕುಮಾರ್​ ಅವರು ಗಾಯಕರಾಗಿ, ನಟರಾಗಿ  ಕನ್ನಡಚಿತ್ರರಂದದಲ್ಲಿ ಅದ್ಭುತ ಕಲಾವಿದರೆಂದು ಗುರುತಿಸಿಕೊಂಡಿದ್ದರು.  ಅವರ ಕೊನೆಯ ಸಿನಿಮಾ ಪಕ್ಕದ್ಮನೆ ಹುಡುಗಿ ನಂತರ ಅವರು ಚಿತ್ರರಂಗದ ಕಡೆ ತಿರುಗಿ ನೋಡೇ ಇಲ್ಲ.

ಸದ್ಯ ಮತ್ತೆ ಚಂದನವನದಲ್ಲಿ  ರಾಘಣ್ಣ ಗಾನ ಕೋಗಿಲೆಯಾಗಿದ್ದಾರೆ. ದೊರೆ ಭಗವಾನ್​ ನಿರ್ದೇಶನದ ಆಡುವ ಗೊಂಬೆ ಸಿನಿಮಾದಲ್ಲಿ ಹಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.  ಆಡಿಸಿ ನೋಡು ಬೀಳಿಸಿ ನೋಡು ಗೊಂಬೆಗೆ ನೀನಾಗದು…ಈಗಾಗಲೇ ಯೂಟ್ಯೂಬ್​ ಈ ಹಾಡು ರಿಲೀಸ್​ ಆಗಿದ್ದು ಸಿಕ್ಕಾಪಟ್ಟೆ ಲೈಕ್ಸ್​  ಗಿಟ್ಟಿಸಿಕೊಂಡಿದೆ.

ಈ ಹಾಡಿನ ಯಶಸ್ಸಿನಿಂದ ರಾಘವೇಂದ್ರ  ರಾಜ್​ಕುಮಾರ್​  ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಖುಷಿಗೆ ಅಭಿಮಾನಿಗಳೇ ಕಾರಣ. ಅಪ್ಪಾಜಿ ಹೇಳ್ತಿದ್ರು ನೀನ್​ ಹಾಡ್ತಿಯಾ, ಅಭಿಮಾನಿಗಳು ಇದ್ದಾರೆ ಅವ್ರ ನಿನ್ನ  ಬದುಕಿಸ್ತಾರೆ. ಅಂತಿದ್ರು ಅದೂ ನಿಜ. ನೀವ್​ ಮತ್ತೆ ನನಗೆ ಜೀವನ ಕೊಟ್ರಿ ಎಂಬುದನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/07/11-18-raghavendrarajkumarinsingapore.jpghttp://bp9news.com/wp-content/uploads/2018/07/11-18-raghavendrarajkumarinsingapore-150x150.jpgBP9 Bureauಸಿನಿಮಾಏನ್​ ಅಪ್ಪಾಜಿ ನೀವು...ನನ್ನ ಜೀವನ ಮುಗಿದೇ ಹೋಯ್ತು ಅನ್ಕೊಂಡಾಗ, ನನ್ನ ಹಾಡಿಸಿ ಮತ್ತೆ ಬದುಕಿಸಿದ್ರಿ..ಮತ್ತೆ ನನಗೆ ಜೀವ ಕೊಟ್ರಿ...ನನ್ನನ್ನು ಮತ್ತೆ ಹಾಡಿಸಿದ್ರಿ. ಅಪ್ಪಾಜಿ ನೀವು ನನಗೆ ಹರಸುತ್ತಿದ್ದೀರಿ. ಇದು ರಾಘವೇಂದ್ರ ರಾಜ್​ಕುಮಾರ್​ ಅವರ ಮನದಾಳದ ಮಾತುಗಳು.  ಕನ್ನಡದ ನಟ ಸಾರ್ವಭೌಮ , ಅಣ್ಣಾವ್ರ ಫೋಟೋ ಪಕ್ಕ ನಿಂತು ಮನದಾಳದ ಭಾವನೆಗಳನ್ನು ಬಿಚ್ಚಿಟ್ಟರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location)...Kannada News Portal