ಬೆಂಗಳೂರು: ಯಡ್ಡಿಯೂರಪ್ಪನವರ ಪ್ರಮಾಣ ವಚನದ ನಂತರ ಬಿಜೆಪಿ ಹಿರಿಯ ನಾಯಕ ಅನಂತ್‌ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು. ಬಹುಮತವನ್ನು ಒಪ್ಪಿಕೊಳ್ಳದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ವಾಮಮಾರ್ಗ ಹಿಡಿದಿದ್ದಾರೆ. ಆದರೆ ಈ ಪ್ರಯತ್ನ ಕೈಬಿಡಬೇಕು ಎಂದ್ರು. ಇನ್ನು ಕಾಂಗ್ರೆಸ್‌ ಪಕ್ಷ ತನ್ನ ದುರ್ವರ್ತನೆಯಿಂದ ದೇಶದ 22 ರಾಜ್ಯಗಳಲ್ಲಿ ಸ್ಥಾನ ಕಳೆದುಕೊಂಡಿದೆ. ಈ ವರ್ತನೆಯನ್ನೇ ಮುಂದುವರೆಸಿದ್ರೆ ಮುಂದೆ ಕಾಂಗ್ರೆಸ್‌ ಧೂಳಿಪಟವಾಗಿಬಿಡುತ್ತೆ ಎಂದು ಕಿಡಿಕಾರಿದ್ರು.

ಇನ್ನು ಯಡಿಯೂರಪ್ಪನವರು ರಾಜ್ಯದಲ್ಲಿ 3ನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅನುಭವ ಇರೋ ಅವರು , ಕೃಷಿಕರು ಮತ್ತು ಬಡವರು, ಹಿಂದುಳಿದವರ ಪರವಾದ ಅನೇಕ ಯೋಜನೆಗಳನ್ನ ಹಿಂದೆ ತೆಗೆದುಕೊಂಡಿದ್ರು.ಅಷ್ಟೇಅಲ್ಲ 2 ಬಾರಿ ಸಾಲಮನ್ನ ಮಾಡಿದ್ರು. ಶೂನ್ಯ ಬಡ್ಡಿದರದ ಸಾಲ ತಂದಿದ್ರು. ಈ ಬಾರಿಯೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಜೊತೆಗೆ ರೈತ ಪರ ಕಾರ್ಯಕ್ರಮ ಹಮ್ಮಿಕೊಂಡು ಸುಭದ್ರ ಸರ್ಕಾರ ಕೊಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

Please follow and like us:
0
http://bp9news.com/wp-content/uploads/2018/05/news-8-ananthkumar.jpghttp://bp9news.com/wp-content/uploads/2018/05/news-8-ananthkumar-150x150.jpgBP9 Bureauಪ್ರಮುಖಬೆಂಗಳೂರು: ಯಡ್ಡಿಯೂರಪ್ಪನವರ ಪ್ರಮಾಣ ವಚನದ ನಂತರ ಬಿಜೆಪಿ ಹಿರಿಯ ನಾಯಕ ಅನಂತ್‌ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು. ಬಹುಮತವನ್ನು ಒಪ್ಪಿಕೊಳ್ಳದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ವಾಮಮಾರ್ಗ ಹಿಡಿದಿದ್ದಾರೆ. ಆದರೆ ಈ ಪ್ರಯತ್ನ ಕೈಬಿಡಬೇಕು ಎಂದ್ರು. ಇನ್ನು ಕಾಂಗ್ರೆಸ್‌ ಪಕ್ಷ ತನ್ನ ದುರ್ವರ್ತನೆಯಿಂದ ದೇಶದ 22 ರಾಜ್ಯಗಳಲ್ಲಿ ಸ್ಥಾನ ಕಳೆದುಕೊಂಡಿದೆ. ಈ ವರ್ತನೆಯನ್ನೇ ಮುಂದುವರೆಸಿದ್ರೆ ಮುಂದೆ ಕಾಂಗ್ರೆಸ್‌ ಧೂಳಿಪಟವಾಗಿಬಿಡುತ್ತೆ ಎಂದು ಕಿಡಿಕಾರಿದ್ರು. ಇನ್ನು ಯಡಿಯೂರಪ್ಪನವರು ರಾಜ್ಯದಲ್ಲಿ 3ನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅನುಭವ...Kannada News Portal