thippeswami sriramulu

ಬೆಂಗಳೂರು: ಬದಲಾದ ರಾಜಕೀಯದಲ್ಲಿ ತನಗೆ ಟಿಕೆಟ್​ ಸಿಗಲಿಲ್ಲ ಎಂದು ಒಂದು ಕಾಲದ ಗಾಡ್​ ಫಾದರ್​ ಆಗಿದ್ದ ಶ್ರೀರಾಮುಲು ಅವರ ವಿರುದ್ಧ ತೊಡೆ ತಟ್ಟಿದ್ದ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್​ ಆಕಾಂಕ್ಷಿ ತಿಪ್ಪೇಸ್ವಾಮಿ ಅವರು ಈಗ ತಮ್ಮ ಬುಡಕ್ಕೆ ತಾವೇ ನೀರು ಬಿಟ್ಟುಕೊಳ್ಳುವಂತಹ  ಸ್ಥಿತಿಗೆ ಬಂದಿದ್ದಾರೆ.

ತಮಗೇ ಟಿಕೆಟ್​ ಎಂದು ಮಾತು ಕೊಟ್ಟಿದ್ದ ಶ್ರೀರಾಮುಲು ಅವರು ತಮ್ಮ ಹೈ ಕಮಾಂಡ್​ ನಿರ್ಧಾರದಂತೆ ಮೊಳಕಲ್ಮೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಇದಕ್ಕೆ ಕಾರಣ ಕೂಡ ಇದೆ, ಏಕೆಂದರೆ ಎಸ್​ಟಿ ಮೀಸಲಾತಿ ಇರುವ ಮೊಳಕಾಲ್ಮೂರು ಕ್ಷೇತ್ರದಿಂದ ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸುವುದರಿಂದ ಚಿತ್ರದುರ್ಗ ಮತ್ತು ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಪಡೆಯಬಹುದು ಎನ್ನುವ ಲೆಕ್ಕಾಚಾರವಿತ್ತು. ಆದರೆ ಇದೆಲ್ಲವೂ ಗೊತ್ತಿದ್ದರೂ ಕೂಡ ತಿಪ್ಪೇಸ್ವಾಮಿ ಅವರು ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದರು.

ಅಷ್ಟಕ್ಕೆ ಸುಮ್ಮನಾಗದೆ ಕ್ಷೇತ್ರಕ್ಕೆ ಬಂದ ಶ್ರೀರಾಮುಲು ಅವರ ಮೇಲೆ ಕಲ್ಲು, ಚಪ್ಪಲಿಗಳಿಂದ ತಮ್ಮ ಕಾರ್ಯಕರ್ತರ ಮೂಲಕ ದಾಳಿ ಮಾಡಿಸಿದರು, ಇದಕ್ಕೂ ಕೂಡ ಕಾರಣ ಇಲ್ಲದೇ ಇಲ್ಲ. ಶ್ರೀರಾಮುಲು ಅವರಿಗೆ ಟಿಕೆಟ್​ ಘೋಷಣೆಯಾದ ನಂತರ ನನಗಿನ್ನು ಟಿಕೆಟ್​ ಸಿಗುವುದಿಲ್ಲ. ಹಾಗಾಗಿ ಕಾಂಗ್ರೆಸ್​ ಸೇರುವುದೇ ಮೇಲು ಎಂದು ನಿರ್ಧರಿಸಿದ ಇವರು ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿದ್ದಾರೆ. ಆಗ ನೋಡೋಣ ಎಂದು ಹೇಳಿದ್ದ ಅವರು ಟಿಕೆಟ್​ ಕೊಡಿಸುವಲ್ಲಿ ವಿಫಲರಾದರು ಎನ್ನುವ ಮಾತುಗಳಿವೆ.

ತಮಗೆ ಕಾಂಗ್ರೆಸ್​ ಟಿಕೆಟ್​ ಸಿಗಬೇಕೆಂದರೆ ಸುಮ್ಮನೇ ಹೋಗಿ ಕಾಂಗ್ರೆಸ್​ ಬಾಗಿಲು ತಟ್ಟಿದರೆ ಕಷ್ಟವಾಗಬಹುದು ಎಂದು ಭಾವಿಸಿ, ಕ್ಷೇತ್ರದಲ್ಲಿ ಶ್ರೀರಾಮುಲು ಅವರಿಗೆ ಪ್ರಬಲ ವಿರೋಧ ವ್ಯಕ್ತಪಡಿಸಿದರೆ ಟಿಕೆಟ್​ ಸುಲಭವಾಗುತ್ತದೆ ಮತ್ತು ರಾಜ್ಯದ ಜನರಿಗೆ ತಾನಾರು ಎಂದು ಗೊತ್ತಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಅವರು ಜೋರಾಗಿಯೇ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತದೆ.

ರಾಜ್ಯಮಟ್ಟದ ನಾಯಕರಾಗಿರುವ ಶ್ರೀರಾಮುಲು ಗೆದ್ದಮೇಲೂ ಕೂಡ ತಿಪ್ಪೇಸ್ವಾಮಿಯವರೇ ಮೊಳಕಾಲ್ಮೂರು ಶಾಸಕ ಎಂದು ಮಾಧ್ಯಮಗಳಲ್ಲಿ ಹೇಳಿದ್ದರು. ಆದರೆ ಕಾಂಗ್ರೆಸ್​ ಟಿಕೆಟ್​ ಸಿಗುತ್ತದೆ ಎನ್ನುವ ಕನಸು ಕಾಣುತ್ತಾ ಇನ್ನಿಲ್ಲದ ಸ್ಟ್ರಾಟಜಿ ಮಾಡಿದ ಇವರು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಟಿಕೆಟ್​ ಕೇಳಿದ್ದಾರೆ. ಆದರೆ ಅವರು ಕೂಡ ಟಿಕೆಟ್​ ಕೊಡಲು ಸಾಧ್ಯವಿಲ್ಲ, ಈಗಾಗಲೇ ಟಿಕೆಟ್​ ನೀಡಲಾಗಿದೆ ಎಂದು ಹೇಳಿದ್ದಾರೆ.

ಹಾಗಾಗಿ ಇದೇ ಬಿಸಿಯಲ್ಲಿ ಶ್ರೀರಾಮುಲು ವಿರುದ್ಧ ತೊಡೆ ತಟ್ಟಿದ್ದ ಮೊಳಕಲ್ಮೂರು ಕ್ಷೇತ್ರದ ಶಾಸಕ ತಿಪ್ಪೇಸ್ವಾಮಿ ಅವರು ಇತ್ತ ಕಾಂಗ್ರೆಸ್​ ಟಿಕೆಟ್​ ಇಲ್ಲಾ. ಅತ್ತ ಶ್ರೀರಾಮುಲು ಅವರ ವಿರೋಧ ಕಟ್ಟಿಕೊಳ್ಳುವಂತರಾಗಿರುವುದು ತಮ್ಮ ತೊಡೆ ಕೆಂಪಾಗಿ ಉರಿಯುತ್ತಿರುವ ಅನುಭವದಲ್ಲಿದ್ದಾರೆ ಎಂದು ಅವರ ಆಪ್ತರ ಮಾತಾಗಿದೆ.

Please follow and like us:
0
http://bp9news.com/wp-content/uploads/2018/04/thippeswami-sriramulu.jpghttp://bp9news.com/wp-content/uploads/2018/04/thippeswami-sriramulu-150x150.jpgBP9 News Bureauಪ್ರಮುಖಬೆಂಗಳೂರು: ಬದಲಾದ ರಾಜಕೀಯದಲ್ಲಿ ತನಗೆ ಟಿಕೆಟ್​ ಸಿಗಲಿಲ್ಲ ಎಂದು ಒಂದು ಕಾಲದ ಗಾಡ್​ ಫಾದರ್​ ಆಗಿದ್ದ ಶ್ರೀರಾಮುಲು ಅವರ ವಿರುದ್ಧ ತೊಡೆ ತಟ್ಟಿದ್ದ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್​ ಆಕಾಂಕ್ಷಿ ತಿಪ್ಪೇಸ್ವಾಮಿ ಅವರು ಈಗ ತಮ್ಮ ಬುಡಕ್ಕೆ ತಾವೇ ನೀರು ಬಿಟ್ಟುಕೊಳ್ಳುವಂತಹ  ಸ್ಥಿತಿಗೆ ಬಂದಿದ್ದಾರೆ. ತಮಗೇ ಟಿಕೆಟ್​ ಎಂದು ಮಾತು ಕೊಟ್ಟಿದ್ದ ಶ್ರೀರಾಮುಲು ಅವರು ತಮ್ಮ ಹೈ ಕಮಾಂಡ್​ ನಿರ್ಧಾರದಂತೆ ಮೊಳಕಲ್ಮೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಇದಕ್ಕೆ ಕಾರಣ ಕೂಡ ಇದೆ,...Kannada News Portal