ಬಿಗ್​ ಬಿಗ್​ ಸ್ಟಾರ್​ಗಳೆಲ್ಲಾ ಇದೀಗ ತಮ್ಮ ಮಕ್ಕಳನ್ನೇ ಲಿಟಲ್​ ಸ್ಟಾರ್​ಗಳಾಗಿ ಮಾಡೋದಿಕ್ಕೆ ಹೊರಟಿದ್ದಾರೆ. ಸ್ಟಾರ್​ಗಳೆಂದ್ರೆನೇ ಹಾಗೇ, ತಮ್ಮ ಮಕ್ಕಳನ್ನು  ನಮ್ಮಂತೆಯೇ  ಸ್ಟಾರ್​ಗಳನ್ನಾಗಿ ಮಾಡಬೇಕು ಅನ್ನೋ ಬಹುದೊಡ್ಡ ಕನಸು ಇರುತ್ತದೆ. ಕೆಲವೊಮ್ಮೆ, ಅಪ್ಪ-ಅಮ್ಮಂದಿರ ಜೊತೆ ಹೊರಗೆ ಹೊರಟಾಗ ಕ್ಯಾಮೆರಾ ಕಣ್ಣು ಬೀಳೋದು ಮೊದಲು ಸ್ಟಾರ್​ ಮಕ್ಕಳ ಮೇಲೆ, ಅವರ ಚಲನ –ವಲನದ ಮೇಲೆ. ಅದೇನೇ ಇರಲಿ. ಇತ್ತೀಚಿಗಂತೂ  ಸ್ಟಾರ್​ಗಳಿಗೆ ಸಿಕ್ಕಾಪಟ್ಟೆ  ಕ್ರೇಜ್​  ಇದೆ. ತಮ್ಮ ಮಕ್ಕಳನ್ನು   ಎತ್ತರಕ್ಕೆ ಕೊಂಡೊಯ್ಯಬೇಕು.

ನಮ್ಮ ಹಾಗೇ ಅವರಿಗೆ ನೇಮ್​-ಫೇಮ್​ ಸಿಗಬೇಕು ಅಂತಾ. ಅದಕ್ಕಾಗಿ ಇನ್ನಿಲ್ಲದ  ಕಸರತ್ತು ನಡೆಸುತ್ತಿದ್ದಾರೆ. ದೊಡ್ಡ ದೊಡ್ಡ ಸಮಾರಂಭಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋಗುವುದು, ಅಲ್ಲಿ  ಟ್ಯಾಲೆಂಟ್​ ಪ್ರದರ್ಶನ ಮಾಡುವುದು ಇದು ಕಾಮನ್​ ಆಗಿದೆ. ಆ ಮೂಲಕ ವಿಡಿಯೋ ವನ್ನು ಸಾಮಾಜಿಕ ಜಾಲತಾಣಗಳ ಅಲ್ಲದೇ   ಸ್ಯಾಂಡಲ್​ವುಡ್​ನಲ್ಲಂತೂ  ಇದರ ಹಬ್ಬರ  ಹೆಚ್ಚಿದೆ.  ದುನಿಯಾ   ವಿಜಿ,  ಗಣೇಶ್​, ಹೀಗೆ ಇನ್ನೂ ಅನೇಕಾನೇಕ ಸ್ಟಾರ್​ ಮಕ್ಕಳು ಸದ್ಯ ಸಿಕ್ಕಾಪಟ್ಟೆ ಚಾರ್ಮ್​ ಆಗುತ್ತಿದ್ದಾರೆ.

My daughters first dubsmash….Charitriya Ganesh

A post shared by Shilpa Ganesh (@shilpaaganesh) on


ಡಬ್​ಸ್ಮ್ಯಾಷ್​ ಮೂಲಕ ತುಂಬಾ  ಅಟ್ರ್ಯಾಕ್ಟೀವ್​ ಆಗಿದ್ದಾರೆ ಗೋಲ್ಡನ್​ ಸ್ಟಾರ್​ ಮಗಳು.  ಚಾರಿತ್ಯಾ ಹಾಗೂ ಮಗ ವಿಹಾನ್​ ಫೋಟೋಗಳನ್ನು  ಅಪ್​ಲೋಡ್​ ಮಾಡುತ್ತಲೇ ಇರುತ್ತಾರೆ. ಮಕ್ಕಳಿಂದ ಸಣ್ಣ-ಸಣ್ಣ ಖುಷಿಯನ್ನು ಅನುಭವಿಸುವ ಗೋಲ್ಡನ್​ ಸ್ಟಾರ್​ಗೆ ಮಗಳೆಂದ್ರೆ ಎಲ್ಲಿಲ್ಲದ ಪ್ರೀತಿಯಂತೆ. ಸದ್ಯ ಮಗಳು ಮಾಡಿರುವ ಡಬ್​ಸ್ಮ್ಯಾಷ್​  ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಿಕ್ಕಾಪಟ್ಟೆ ಎಂಜಾಯ್​ ಮಾಡ್ತಿದ್ದಾರೆ. ಗಣೇಶ್​ ರಂತೇ ಮುದ್ದು ಮುದ್ದಾಗಿ ಕಾಣುವ ಚಾರಿತ್ಯಾ ಎಕ್ಸ್​ಪ್ರೆಷನ್​ನಲ್ಲೂ ಏನೂ ಕಡಿಮೆ ಇಲ್ಲ. ತುಂಬಾ ತುಂಬಾ ಇಷ್ಟವಾಗುವ ಸ್ಮೈಲ್​, ಕ್ಯೂಟ್​ ಕ್ಯೂಟ್​ ಮಾತು, ವಿಡಿಯೋಗಳನ್ನು ಹಾಕಿ ಖುಷಿ ಪಡುತ್ತಾರೆ ಗೋಲ್ಡನ್​ ಸ್ಟಾರ್​.

ಇನ್ನೂ ಚಾರಿತ್ಯಾ ಅವರ ಆ್ಯಕ್ಟಿಂಗ್​ ಅವಳ ಎಕ್ಸ್​ಪ್ರೆಷನ್​ ನೋಡಿದ್ರೆ ಮುಂದೆ ಈಕೆ ದೊಡ್ಡ ಹಿರೋಯಿನ್​  ಆಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು ಈಗಲೇಕೆಲ ಸ್ಟಾರ್​ಗಳು ತಮ್ಮ ಮಕ್ಕಳ ಕನಸನ್ನು ಎಣೆಯುವುದಕ್ಕೆ ಆರಂಭ ಮಾಡಿರೋದು ಮಾತ್ರ ನಿಜ.

 

Please follow and like us:
0
http://bp9news.com/wp-content/uploads/2018/06/1427782275_ganesh-shilpas-daughter-charithriyas-birthday-celebration.jpghttp://bp9news.com/wp-content/uploads/2018/06/1427782275_ganesh-shilpas-daughter-charithriyas-birthday-celebration-150x150.jpgBP9 Bureauಸಿನಿಮಾಬಿಗ್​ ಬಿಗ್​ ಸ್ಟಾರ್​ಗಳೆಲ್ಲಾ ಇದೀಗ ತಮ್ಮ ಮಕ್ಕಳನ್ನೇ ಲಿಟಲ್​ ಸ್ಟಾರ್​ಗಳಾಗಿ ಮಾಡೋದಿಕ್ಕೆ ಹೊರಟಿದ್ದಾರೆ. ಸ್ಟಾರ್​ಗಳೆಂದ್ರೆನೇ ಹಾಗೇ, ತಮ್ಮ ಮಕ್ಕಳನ್ನು  ನಮ್ಮಂತೆಯೇ  ಸ್ಟಾರ್​ಗಳನ್ನಾಗಿ ಮಾಡಬೇಕು ಅನ್ನೋ ಬಹುದೊಡ್ಡ ಕನಸು ಇರುತ್ತದೆ. ಕೆಲವೊಮ್ಮೆ, ಅಪ್ಪ-ಅಮ್ಮಂದಿರ ಜೊತೆ ಹೊರಗೆ ಹೊರಟಾಗ ಕ್ಯಾಮೆರಾ ಕಣ್ಣು ಬೀಳೋದು ಮೊದಲು ಸ್ಟಾರ್​ ಮಕ್ಕಳ ಮೇಲೆ, ಅವರ ಚಲನ –ವಲನದ ಮೇಲೆ. ಅದೇನೇ ಇರಲಿ. ಇತ್ತೀಚಿಗಂತೂ  ಸ್ಟಾರ್​ಗಳಿಗೆ ಸಿಕ್ಕಾಪಟ್ಟೆ  ಕ್ರೇಜ್​  ಇದೆ. ತಮ್ಮ ಮಕ್ಕಳನ್ನು   ಎತ್ತರಕ್ಕೆ ಕೊಂಡೊಯ್ಯಬೇಕು. ನಮ್ಮ ಹಾಗೇ...Kannada News Portal