ಬೆಂಗಳೂರು :
ವಾರ ಕಳೆಯುವುದರ ಒಳಗೆ ತುಸು ಎಚ್ಚರ ತಪ್ಪಿದರೂ ಮೂರನೇ ಮಹಾ ಯುದ್ಧ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಪ್ರಪಂಚಕ್ಕೆ ತಾನು ಏನು ಎಂದು ಈಗಾಗಲೇ ತೋರಿಸಿರುವ ಅಮೇರಿಕಾ ಈಗ ಇಡೀ ವಿಶ್ವಕ್ಕೆ ಎಚ್ಚರಿಕೆಯನ್ನು ನೀಡುತ್ತಿದೆ.

ಹೌದು, ನವೆಂಬರ್ 4 ರಿಂದ ಅಂದ್ರೇ ಭಾನುವಾರದಿಂದಲೇ ಇರಾನ್ ದೇಶದಿಂದ ವಿಶ್ವದ ಯಾವ ರಾಷ್ಟ್ರವೂ ಕಚ್ಚ ತೈಲವನ್ನು ಖರಿದಿಸುವಂತಿಲ್ಲ ಎಂದು ನಿಬಂಧನೆಯನ್ನು ಏರಿದೆ. ಅಮೇರಿಕಾದ ಈ ಕಟ್ಟಪ್ಪಣೆಯ ಹೊರತಾಗಿಯೂ ಭಾರತ, ಚೈನ ಮತ್ತು ರಷ್ಯಾ ರಾಷ್ಟ್ರಗಳು ಇರಾನ್ ಜೊತೆ ತನ್ನ ತೈಲ ವ್ಯಾಪಾರವನ್ನು ಮುಂದುವರೆಸುತ್ತಿದೆ.


ಅಲ್ಲದೇ ನಾವು ಇರಾನ್ ಜೊತೆ ವ್ಯಾಪಾರ ವಹಿವಾಟು ಮಾಡುವುದು ನಮ್ಮ ರಾಷ್ಟ್ರದ ಸಾರ್ವಭೌಮತ್ವ ಅಧಿಕಾರ. ತನ್ನ ಸ್ವಾರ್ಥಕ್ಕಾಗಿ ಅಮೇರಿಕಾ ಈ ರೀತಿಯ ನಿರ್ಬಂಧನೆಯನ್ನು ಬೇರೆ ರಾಷ್ಟ್ರದ ಮೇಲೆ ಏರುವುದು ಸರಿ ಅಲ್ಲ ಎಂದು ಭಾರತ, ಚೈನ ಮತ್ತು ರಷ್ಯಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ.

ಈ ಮೂರು ರಾಷ್ಟ್ರಗಳ ಈ ಹೇಳಿಕೆಗೆ ಕೆರಳಿರುವ ಅಮೇರಿಕಾ ಇದೇ ಭಾನುವಾರದಿಂದ ಇರಾನ್​ನಿಂದ ಯಾವ ರಾಷ್ಟ್ರವಾದರೂ ತೈಲ ವ್ಯವಹಾರ ಮಾಡಿದರೇ, ನಮ್ಮ ಸ್ವಾಮ್ಯದ ಸಮುದ್ರದಲ್ಲಿ ಪ್ರದೇಶದಲ್ಲೇನಾದರೂ ಯಾವುದೇ ಹಡಗು ಕಾಣಿಸಿ ಕೊಂಡರೂ ಅಮೇರಿಕದ ನೌಕಾ ಪಡೆ ಅಡ್ಡ ಹಾಕಿ ನಿಲ್ಲಿಸಲಿದೆ ಎಂದು ಎಚ್ಚರಿಕೆ ನೀಡಿದೆ. ಅಲ್ಲದೇ ಇದಕ್ಕೆ ಜಗ್ಗದೆ ಇದ್ದರೆ ಆ ಹಡಗು ಜಲಸಮಾಧಿಯಾಗಲಿದೆ ಎಂದು ಖಡಕ್ ಎಚ್ಚರಿಕೆಯನ್ನೇ ನೀಡಿದೆ ಅಮೇರಿಕಾ.
ಇತ್ತ ಅಮೆರಿಕಾದ ಏಕ ಮುಖ ನಿರ್ಧಾರದ ಈ ಹೇಳಿಕೆಗೆ ಪ್ರತಿಯಾಗಿ ಅಮೇರಿಕಾ ನಮ್ಮ ದೇಶದ ವ್ಯಾಪಾರ ವಹಿವಾಟುವಿನ ಮೇಲೆ ಬಾಹ್ಯ ನಿರ್ಬಂಧ ಏರಲು ಮುಂದಾದರೇ ನಾವೇನು ಕೈ ಕಟ್ಟಿ ಕೂರುವುದಿಲ್ಲ. ನಾವೂ ಸಹ ಸಿದ್ಧರಿದ್ದೇವೆ ಎಂದು ಇರಾನ್​ ಕೂಡ ಪ್ರತಿಕ್ರಿಯಿಸಿದೆ. ಸಾಂಕೇತಿಕವಾಗಿ ಹರ್ಮೋಜ್ ಜಲಸಂಧಿಯನ್ನು ಮುಚ್ಚಲಾಗುತ್ತದೆ ಎಂದು ಹೇಳಿದೆ. ಇದರಿಂದ ಅಮೇರಿಕಾದ ವ್ಯಾಪಾರದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಏಕೆಂದರೆ ಈ ಜನ ಮಾರ್ಗದಿಂದಲೇ ಅಮೇರಿಕಾ ತನ್ನ ವ್ಯಾಪಾರ ವಹಿವಾಟು ಮಾಡುತ್ತಿದೆ.

ಇರಾನ್ ಈ ಹೇಳಿಕೆಗೆ ಮತ್ತಷ್ಟು ಕೆರಳಿರುವ ಅಮೇರಿಕಾ, ಇರಾನ್ ಏನಾದರೂ ಹರ್ಮೋಜ್ ಅನ್ನು ಮುಚ್ಚಲು ಮುಂದಾದರೇ ನಮ್ಮ ಸೇನೆ ಸಿದ್ಧವಾಗಿದೆ. ಎದುರಾಳಿಗಳಿಗೆ ತಕ್ಕ ಪಾಠ ಕಲಿಸಲು ನಾವು ಸದಾ ಸಿದ್ಧರಿದ್ದೇವೆ ಎಂಬಂತೆ ತಿಳಿಸಿದೆ. ಇರಾಕ್ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದು ನೀವು ನಮ್ಮ ಮೇಲೆ ಸೇನೆ ಬಳಸಿದರೇ ನಾವೇಕೆ ಕೈ ಕಟ್ಟಿ ಕೂರಬೇಕು, ನಿಮ್ಮ ಪರ್ಷಿಯನ್ ಸಮುದ್ರ ಹಡಗು ಪಡೆಯ ಮೇಲೆ ದಾಳಿ ಮಾಡುತ್ತೇವೆ ಎಂದು ಸೇರಿಗೆ ಸವಾಸೇರು ಎಂಬಂತೆ ಉತ್ತರಿಸಿದೆ.

ಈ ಇರಾನ್ ಮತ್ತು ಅಮೇರಿಕಾ ಕೋಳಿ ಜಗಳ ಇದೀಗ ಜಾಗತಿಕ ಮಟ್ಟದ ಯುದ್ಧಕ್ಕೆ ಆಹ್ವಾನ ನೀಡುತ್ತಿದ್ದು, ಭಾರತ ಮತ್ತು ಚೀನಾ ನಿರ್ಣಾಯಕ ದೇಶಗಳಾಗಿ ನಿಂತಿವೆ.

ಇನ್ನು ಈ ವಿಚಾರವಾಗಿ  ಇರಾನ್ ಮೇಲಿನ ಕೋಪವನ್ನು ಅಮೇರಿಕಾ ಮುಂದುವರೆಸಿದ್ದೇ ಆದಲ್ಲಿ ವೈಟ್ ಹೌಸ್ನಲ್ಲಿ 5 ಮತ್ತು ವಿಶ್ವಸಂಸ್ಥೆಯಲ್ಲಿ 6 ರಂದು  ರಷ್ಯಾ ಮತ್ತು ಅಮೇರಿಯಾ ಜಂಟಿ ಸಭೆ ನಡೆಸುತ್ತವೆ. ಈ ಸಭೆಯಲ್ಲಿ ಅಮೇರಿಕಾ ಅಧ್ಯಕ್ಷ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಇಬ್ಬರು ಅಗ್ರ  ಗಣ್ಯನಾಯಕರು ಇರುವುದರಿಂದ ಈ ಸಮಸ್ಯೆ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಲಿದ್ದಾರೆ.

ಇದೀಗ ಈ ನಿರ್ಧಾರದಲ್ಲಿ ಅಮೇರಿಕಾ ತನ್ನ ಬಿಗಿ ಪಟ್ಟನ್ನು ಮುಂದುವರೆಸಿದ್ದಲ್ಲಿ ಪ್ರಪಂಚದ ಮೂರನೇ ಮಹಾ ಯುದ್ಧದ ಹೊಸ್ತಿಲಲ್ಲಿ ಬಂದು ನಿಲ್ಲುವುದು ಪಕ್ಕಾ ಆಗಲಿದೆ. ಇದಕ್ಕೆ ಕಾರಣ ಇರಾನ್​ನಿಂದ ತೈಲ ವ್ಯಾಪಾರಕ್ಕಾಗಿ ಅಮೇರಿಕಾ ಎಚ್ಚರಿಕೆಯನ್ನು ಲೆಕ್ಕಿಸದೇ ಮುನ್ನುಗ್ಗಿರುವುದು ರಷ್ಯಾ , ಭಾರತ ಮತ್ತು ಚೀನಾ. ರಷ್ಯಾ ಅಮೇರಿಕಾದ ಸಾಂಪ್ರದಾಯಿಕ ಪ್ರತಿಸ್ಪರ್ಧಿ. ಭಾರತ ಇದೀಗ ವಿಶ್ವದ ಮುಖ್ಯ ರಾಷ್ಟ್ರಗಳಲ್ಲಿ ಒಂದು. ಹಾಗೆ ವಿಶ್ವದ ಪ್ರಬಲ ಸೇನಾ ಶಕ್ತಿ ಉಳ್ಳ ದೇಶಗಳ ಪರಮ ಮಿತ್ರನಾಗಿ ಹೊರ ಹೊಮ್ಮಿದ್ದಾರೆ. ಅದರಲ್ಲೂ ಪ್ರಧಾನಿ ಮೋದಿ ನಮ್ಮ ತಂಟೆಗೆ ಬರದೇ ಇದ್ದರೆ ನಾವು ಎಲ್ಲಾ ರಾಷ್ಟ್ರಗಳ ನಡುವೆಯೂ ಸ್ನೇಹದ ಹಸ್ತಲಾಘನ ಮಾಡುತ್ತೇವೆ. ನಮ್ಮ ಆಂತರಿಕ ಅಥವಾ ಬಾಹ್ಯ ವಿಚಾರದಲ್ಲಿ , ಸಾರ್ವಭೌಮತ್ವದ ವಿಚಾರದಲ್ಲಿ ಪ್ರಶ್ನೆ ಮಾಡಿದರೆ ಸುಮ್ಮನಿರಲ್ಲಾ. ಆ ವಿಚಾರದಲ್ಲಿ ನಾವು ಯಾವುದೇ ರಾಷ್ಟ್ರ ಎದರು ನಿಂತರೂ ಅವರನ್ನು ಬಗ್ಗು ಬಡಿಯಲು ಅವರಿಗಿಂತ ಎರಡು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದ್ದೇವೆ ಎಂದಿದ್ದಾರೆ. ಇತ್ತ ಚೈನಾ ಸೇನಾ ವಿಚಾರವಾಗಿ ಸಾಕಷ್ಟು ಬಲಿಷ್ಠವಾಗಿರುವ ರಾಷ್ಟ್ರವಾಗಿದೆ.

ಈ ಮೂರು ರಾಷ್ಟ್ರಗಳಲ್ಲಿ ಯಾವುದೇ ರಾಷ್ಟ್ರದ ಹಡಗನ್ನು ಅಮೇರಿಕಾ ಮುಟ್ಟಿದರೂ ಈ ಮೂರು ರಾಷ್ಟ್ರಗಳು ಪ್ರತಿಷ್ಠಿತವಾಗಿಯೇ ಇದನ್ನು ತೆಗೆದು ಕೊಳ್ಳುವ ಸಂಭವವಿದ್ದು, ಅಮೇರಿಕಾ ಸೇನೆಗೆ ತಕ್ಕ ಪಾಠ ಕಲಿಸಲು ಮುಂದಾಗುತ್ತದೆ. ಇದು ಮೂರನೇ ಮಹಾ ಯುದ್ಧದ ತತ್ತಕ್ಷಣದ ಕಾರಣವಾಗಿ , ಈ ವಿಚಾರದ ಪರ – ವಿರೋಧದ ಗುಂಪು ಸೃಷ್ಠಿಯಾಗಿ ಇಡೀ ವಿಶ್ವ ಮಹಾ ಯುದ್ಧಕ್ಕೆ ಎದುರಾಗಲಿದೆ ಎಂದು ವಿಶ್ವ ವಿಚಾರ ವೇದಿಕೆಗಳ ಕೆಲ ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/11/iran-petrol.jpghttp://bp9news.com/wp-content/uploads/2018/11/iran-petrol-150x150.jpgPolitical Bureauಅಂತಾರಾಷ್ಟ್ರೀಯಪ್ರಮುಖರಾಜಕೀಯರಾಷ್ಟ್ರೀಯಬೆಂಗಳೂರು : ವಾರ ಕಳೆಯುವುದರ ಒಳಗೆ ತುಸು ಎಚ್ಚರ ತಪ್ಪಿದರೂ ಮೂರನೇ ಮಹಾ ಯುದ್ಧ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಪ್ರಪಂಚಕ್ಕೆ ತಾನು ಏನು ಎಂದು ಈಗಾಗಲೇ ತೋರಿಸಿರುವ ಅಮೇರಿಕಾ ಈಗ ಇಡೀ ವಿಶ್ವಕ್ಕೆ ಎಚ್ಚರಿಕೆಯನ್ನು ನೀಡುತ್ತಿದೆ. ಹೌದು, ನವೆಂಬರ್ 4 ರಿಂದ ಅಂದ್ರೇ ಭಾನುವಾರದಿಂದಲೇ ಇರಾನ್ ದೇಶದಿಂದ ವಿಶ್ವದ ಯಾವ ರಾಷ್ಟ್ರವೂ ಕಚ್ಚ ತೈಲವನ್ನು ಖರಿದಿಸುವಂತಿಲ್ಲ ಎಂದು ನಿಬಂಧನೆಯನ್ನು ಏರಿದೆ. ಅಮೇರಿಕಾದ ಈ ಕಟ್ಟಪ್ಪಣೆಯ ಹೊರತಾಗಿಯೂ...Kannada News Portal