ಲೇಡಿ ವಿಲನ್​ ಅಂದ್ರೆ ಯಾರು ತಾನೇ ಹೇಳಲ್ಲಾ, ಅದೂ ಮಾರಿಮುತ್ತು ಅಂತಾ. ನಟಿ ಮಾರಿಮುತ್ತು ರೋಜಮ್ಮ ಉಪೇಂದ್ರ ಸಿನಿಮಾಗಳಲ್ಲೇ  ಭಾರೀ ಡಿಮ್ಯಾಂಡ್​ ಉಳಿಸಿಕೊಂಡ  ಕಲಾವಿದೆ. ಅಂದಹಾಗೇ ಈ ಫೋಟೋದಲ್ಲಿ ಕಾಣ್ತಿರುವ ಈ ಬೋಲ್ಡ್​  ಬ್ಯೂಟಿಗೂ, ಮಾರಿಮುತ್ತುಗೂ ಏನಾದರು ಸಂಬಂಧವಿದ್ಯಾ…? ಮಾರಿಮುತ್ತು ಅಂದಾಕ್ಷಣ ಕಣ್ಣಿಗೆ ಬೀಳುತ್ತೆ ಅವರ ರೂಪ. ಆ ಲೇಡಿ ವಿಲನ್​ಗೂ, ಈ ಸುಂದರಿಗೂ ಸಂಬಂಧವಿದೆ. ಅಂದಹಾಗೇ ಆ ಗ್ರೇಟ್​ ಕಲಾವಿದೆಯ ಮೊಮ್ಮಗಳಂತೆ ಈ ಸೂಪರ್​ ಬ್ಯೂಟಿ ಜಯಶ್ರೀ. ಕೆಲವರಿಗೆ ಇಂಡಸ್ಟ್ರಿಯಲ್ಲಿ ಕೆಲ ನಟರನ್ನ ಗಾಡ್​ಫಾದರ್​ ಅಂತೆ ಕಾಣ್ತಾರೆ. ಅಂದಹಾಗೇ ಈ  ಹೀರೋಯಿನ್​ಗೆ  ಮಾರಿಮುತ್ತೇ ಗಾಡ್​ಫಾದರ್​ ಅಂತೇ ಹೇಗೆ ಗೊತ್ತಾ…? ರಿಯಲ್​ ಸರೋಜಮ್ಮ ಮಾರಿಮುತ್ತು ಪಾತ್ರಧಾರಿಯಾಗಿ ಬಹಳ ಹೆಸರು ಮಾಡಿದವರು.  ತಮ್ಮ ಕುಟುಂಬದಿಂದ ಯಾರಾದ್ರೂ ಚಿತ್ರರಂಗಕ್ಕರ  ಬರಬೇಕು ಅಂತಾ ಕನಸುಕಟ್ಟಿಕೊಂಡಿದ್ರು. ಅಜ್ಜಿ ಆಸೆ ಈಡೇರಿಸಿದ  ಬೋಲ್ಡ್​ ಮೊಮ್ಮಗಳ ಸ್ಟೋರಿ ಏನ್​ ಗೊತ್ತಾ..?

ಅಂದಹಾಗೆ ಇವ್ರ ಹೆಸರು ಜಯಶ್ರೀ ಅಂತಾ. ಪುಟರಾಜು ಲವ್ವರ್​ ಆಫ್​ ಶಶಿಕಲಾ ಅಂತ ಇತ್ತೀಚೆಗೆ ಒಂದು ಸಿನಿಮಾ ಬಂದಿತ್ತಲ್ಲಾ. ಆ ಸಿನಿಮಾದಲ್ಲಿ ಶಶಿಕಲಾ ಆಗಿ ಕಾಣಿಸಿಕೊಂಡ ಡೀಸೆಂಟ್​ ಗೌರಮ್ಮನೇ, ಈ ಬೋಲ್ಡ್​ ಚೆಲುವಮ್ಮ. ಇದು ಇವ್ರ ಹೊಸ ಹಿನ್ನಲೆ. ಅಸಲಿ ಹಿನ್ನಲೆ ಏನಪ್ಪ ಅಂದ್ರೆ ಇವ್ರು ಮಾರಿಮುತ್ತು ಮೊಮ್ಮಗಳು, ಆದ್ರೆ ರಿಯಲ್​ ಮಾರಿಮುತ್ತು ಅಲ್ಲ, ರೀಲ್​ ಮಾರಿಮುತ್ತು. ಹೌದು ಉಪೇಂದ್ರ ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಮಾರಿಮುತ್ತು ಪಾತ್ರದಲ್ಲಿ, ಹಲವಾರು ಕಾಮಿಡಿ ಪ್ರಧಾನ ಹಾಗೂ ಖಳನಾಯಕಿ ಪಾತ್ರದಲ್ಲಿ ಮಿಂಚಿದ್ದ, ಸ್ಯಾಂಡಲ್​​ವುಡ್​ನ ಮಾರಿಮುತ್ತು ಸರೋಜಮ್ಮ ಅವ್ರ ಮೊಮ್ಮಗಳು ಜಯಶ್ರೀ. ಜಯಶ್ರೀ ಅವ್ರ ಈ ನಯಾ ಲುಕ್​​ ನೋಡಿ, ಇನ್ನು ಪಡ್ಡೆಗಳು ಸುಸ್ತು ಬೀಳೋದು ಪಕ್ಕಾ.

ಮಾರಿಮುತ್ತು ಕ್ಯಾರೆಕ್ಟರ್​ ಮಾಡ್ತಿದ್ದ ಸರೋಜಮ್ಮ ಈಗಿಲ್ಲ, ಇವ್ರ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ದುಃಖ ತೋಡಿಕೊಂಡಿದ್ದ ಮೊಮ್ಮಗಳಿಗೆ ಸಿನಿಮಾ ಆಫರ್ಸ್​ ಹುಡುಕಿ ಬಂದ್ವು, ಈ ಪೈಕಿ ಪುಟ್ಟರಾಜು ಸಿನಿಮಾ ಓಕೆ ಮಾಡಿದ್ರು. ಈ ಸಿನಿಮಾದಲ್ಲಿ ಮುಗ್ದ ಹುಡುಗಿಯಾಗಿ ಕಾಣಿಸಿಕೊಂಡ ಜಯಶ್ರೀ, ಈಗ ಬೋಲ್ಡ್​ ಆಗಿ ಫೋಟೋಶೂಟ್​ ಮಾಡಿಸಿದ್ದಾರೆ.

ಈಗಾಗ್ಲೆ ಮೂರು ನಾಲ್ಕು ಸಿನಿಮಾ ಆಫರ್ಸ್​ ಜಯಶ್ರೀ ಮನೆ ಬಾಗಿಲಿಗೆ ಬಂದಿದ್ರು, ಜಯಶ್ರೀ ಮತ್ತೆ ಇನೋಸೆಂಟ್​ ಪಾತ್ರ ಮಾಡುವ ಬದಲು, ತಮ್ಮ ನಿಜಜೀವನದ ಕ್ಯಾರೆಕ್ಟರ್​​​ನಂತೆ ಬೋಲ್ಡ್​ ಪಾತ್ರದಲ್ಲಿ ನಟಿಸುವ ಆಸೆಯಿಂದ, ಈ ಹಾಟ್​ ಫೋಟೋಶೂಟ್​ ಮಾಡಿಸಿದ್ದಾರೆ. ಪುನೀತ್​ ಗೌಡ ಈ ಫೋಟೋಗಳನ್ನ ಕ್ಲಿಕ್ಕಿಸಿದ್ದು, ಲಕ್ಷ್ಮಿ ಕೃಷ್ಣ ಜಯಶ್ರೀ ತೊಟ್ಟಿರೋ ಗ್ಲಾಮರಸ್​​ ಕಾಸ್ಟ್ಯೂಮ್​ನ ಸೃಷ್ಟಿಕರ್ತರು.

 

Please follow and like us:
0
http://bp9news.com/wp-content/uploads/2018/09/140918_-JAYASHREE-PHOTOSHIOOT-768x432-e1536918131436.jpghttp://bp9news.com/wp-content/uploads/2018/09/140918_-JAYASHREE-PHOTOSHIOOT-768x432-e1536918131436-150x150.jpgBP9 Bureauಸಿನಿಮಾಲೇಡಿ ವಿಲನ್​ ಅಂದ್ರೆ ಯಾರು ತಾನೇ ಹೇಳಲ್ಲಾ, ಅದೂ ಮಾರಿಮುತ್ತು ಅಂತಾ. ನಟಿ ಮಾರಿಮುತ್ತು ರೋಜಮ್ಮ ಉಪೇಂದ್ರ ಸಿನಿಮಾಗಳಲ್ಲೇ  ಭಾರೀ ಡಿಮ್ಯಾಂಡ್​ ಉಳಿಸಿಕೊಂಡ  ಕಲಾವಿದೆ. ಅಂದಹಾಗೇ ಈ ಫೋಟೋದಲ್ಲಿ ಕಾಣ್ತಿರುವ ಈ ಬೋಲ್ಡ್​  ಬ್ಯೂಟಿಗೂ, ಮಾರಿಮುತ್ತುಗೂ ಏನಾದರು ಸಂಬಂಧವಿದ್ಯಾ...? ಮಾರಿಮುತ್ತು ಅಂದಾಕ್ಷಣ ಕಣ್ಣಿಗೆ ಬೀಳುತ್ತೆ ಅವರ ರೂಪ. ಆ ಲೇಡಿ ವಿಲನ್​ಗೂ, ಈ ಸುಂದರಿಗೂ ಸಂಬಂಧವಿದೆ. ಅಂದಹಾಗೇ ಆ ಗ್ರೇಟ್​ ಕಲಾವಿದೆಯ ಮೊಮ್ಮಗಳಂತೆ ಈ ಸೂಪರ್​ ಬ್ಯೂಟಿ ಜಯಶ್ರೀ....Kannada News Portal