ತುಮಕೂರು : ಹಸಿದ ಕಾಂಗ್ರೆಸ್ಸಿನವರು, ಹಳಸಿದ ಜೆಡಿಎಸ್ ನವರು ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ್ದಾರೆ. ಈ ಸರ್ಕಾರ ಹುಚ್ಚನ ಮದುವೆಯಲ್ಲಿ ಉಂಡವನೆ ಜಾಣ ಎಂಬಂತಾಗಿದೆ ಎಂದು ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ದ ಮಾಜಿ ಸಚಿವ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು , ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಹೊಟ್ಟೆಯಲ್ಲಿ ಸಾಕಷ್ಟು ಕಿಚ್ಚು ಉಳಿಸಿಕೊಂಡಿದ್ದಾರೆ. ಖಾತೆ ಹಂಚಿಕೆ ಕ್ಯಾತೆ ಇನ್ನು‌ಮುಗಿದಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೆ ಎಂಬುದನ್ನು ಹೇಳಲು ಯಾರೂ ಸಿದ್ಧರಿಲ್ಲ. ಬಿಜೆಪಿ ಅಧಿಕಾರದಿಂದ ದೂರ ಇಡುವ ದೃಷ್ಟಿಯಿಂದ ಡಿಎನ್ಎ ಮ್ಯಾಚ್ ಆಗದ ಎರಡು ಪಕ್ಷಗಳು ಸರ್ಕಾರ ರಚಿಸಿವೆ. ಈ ಸರ್ಕಾರ ಟೇಕ್ ಆಫ್ ಆಗುವುದು ಕಷ್ಟ ಎಂದರು. ರಾಜ್ಯದ ಮುಖ್ಯಮಂತ್ರಿಗಳು ಸಾಲ ಮನ್ನಾ ವಿಚಾರವಾಗಿ ಕೊಟ್ಟ ಮಾತು ಉಳಿಸಿಕೊಳ್ಳಲಿ. ಹಿಂದೆ ಕುಮಾರಸ್ವಾಮಿ ಮಾತಿಗೆ ತಪ್ಪಿ ಕುಖ್ಯಾತರಾಗಿದ್ದರು. ಆಗ ಮಾಡಿದ ತಪ್ಪಿಗೆ 10ವರ್ಷ ಅಧಿಕಾರ ಸಿಗದೆ ರಾಜಕೀಯ ವನವಾಸ ಅನುಭವಿಸುವಂತಾಯಿತು ಇದೀಗ ರೈತರ ಸಾಲಮನ್ನಾ ವಿಚಾರವಾಗಿ ಮತ್ತೊಮ್ಮೆ ಅದೇ ತಪ್ಪು ಮಾಡಿ ವಾನಪ್ರಸ್ತಾಶ್ರಮಕ್ಕೆ ಹೋಗುವುದು ಬೇಡ ಎಂದು ಸಿಎಂಗೆ ಕಿವಿಮಾತು ಹೇಳಿದರು.

ಪಾಕಿಸ್ತಾನದಲ್ಲಿ ರಾಜಕೀಯ ನಾಯಕ ಇಮ್ರಾನ್ ಖಾನ್ , ಮೋದಿ ರೀತಿ ಆಡಳಿತ ಕೊಡುತ್ತೇನೆ ಎನ್ನುತ್ತಿದ್ದಾರೆ. ಆದರೆ ದೇಶದಲ್ಲಿ ವಿರೋಧ ಪಕ್ಷಗಳಿಗೆ ಮೋದಿ ಸರಕಾರ ಅಪತ್ಯವಾಗಿರಬಹುದು. ಎನ್ ಡಿ ಎ ಸರಕಾರ ನಾಲ್ಕು ವರ್ಷದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಜಿ ಎಸ್ ಟಿ ಒಂದು ದೇಶದ ದೊಡ್ಡ ಆರ್ಥಿಕ ಸುಧಾರಣೆ ಎನಿಮಿ ಪ್ರಾಪರ್ಟಿ ಬಿಲ್ ಜಾರಿಗೆ ತಂದಿರುವುದು.

ದಾವೂದ್ ಇಬ್ರಾಹಿಂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಹಕಾರಿಯಾಗಿದೆ. ಹಿಂದಿನ ಯುಪಿಎ ಸರಕಾರ ಲಕ್ಷಾಂತರ ಕೋಟಿ ರೂ ಸಾಲ ಮಾಡಿತ್ತು , ಭಾರತ ವಿಶ್ವದ 6ನೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಮೋದಿ ಶ್ರಮಿಸಿದ್ದಾರೆ.
ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್ ಯೋಜನೆ ಮೂಲಕ ಎಲ್ಲಿಯೂ ಸರಕಾರಿ ಹಣ ದುರ್ಬಳಕೆ ಆಗಿಲ್ಲ. ವಿಶ್ವ ಯೋಗದಿನ ಜಗತ್ತಿಗೆ ಭಾರತದ ಸಂಸ್ಕೃತಿ ಯನ್ನು ತೋರಿಸುತ್ತಿದೆ. ನಾಲ್ಕು ವರ್ಷದಲ್ಲಿ 7.8 ಕೋಟಿ ಶೌಚಾಲಯಗಳು ನಿರ್ಮಾಣವಾಗಿವೆ ಎಂದು ಕೇಂದ್ರ ಸರ್ಕಾರದ ಸಾಧನೆ ವಿವರಿಸಿದರು. ಸುದ್ದಿಗೋಷ್ಟಿಯಲ್ಲಿ ಶಾಸಕ ಜಿ ಬಿ ಜ್ಯೋತಿಗಣೇಶ್,  ಮಾಜಿ ಎಂಎಲ್ ಸಿ ಹುಲಿನಾಯ್ಕರ್ಬಿ, ಜೆಪಿ‌ ಮುಖಂಡ ಬೆಟ್ಟಸ್ವಾಮಿ, ರವಿಶಂಕರ್ ಇತರರು ಹಾಜರಿದ್ದರು.

Please follow and like us:
0
http://bp9news.com/wp-content/uploads/2018/06/WhatsApp-Image-2018-06-15-at-7.15.53-PM-1-1.jpeghttp://bp9news.com/wp-content/uploads/2018/06/WhatsApp-Image-2018-06-15-at-7.15.53-PM-1-1-150x150.jpegBP9 Bureauತುಮಕೂರುಪ್ರಮುಖರಾಜಕೀಯThis is a dirty government: former minister CT Ravi !!!!ತುಮಕೂರು : ಹಸಿದ ಕಾಂಗ್ರೆಸ್ಸಿನವರು, ಹಳಸಿದ ಜೆಡಿಎಸ್ ನವರು ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ್ದಾರೆ. ಈ ಸರ್ಕಾರ ಹುಚ್ಚನ ಮದುವೆಯಲ್ಲಿ ಉಂಡವನೆ ಜಾಣ ಎಂಬಂತಾಗಿದೆ ಎಂದು ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ದ ಮಾಜಿ ಸಚಿವ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು , ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಹೊಟ್ಟೆಯಲ್ಲಿ ಸಾಕಷ್ಟು ಕಿಚ್ಚು ಉಳಿಸಿಕೊಂಡಿದ್ದಾರೆ. ಖಾತೆ ಹಂಚಿಕೆ ಕ್ಯಾತೆ ಇನ್ನು‌ಮುಗಿದಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೆ...Kannada News Portal