ಬೆಂಗಳೂರು : ರಸ್ತೆಯಲ್ಲಿ ಕಿವಿ ಮೂಗು ಮುಚ್ಚಿಕೊಂಡು ಹೊಗೆ ಸಹಿಸಲಾಗದೇ, ಹಾರನ್ ಸದ್ದಿನಿಂದ ವಿಚಲಿತಕ್ಕೆ ಒಳಗಾಗಿ, ಕಚೇರಿಗೋ ಕೈಂಕರ್ಯದ ಸ್ಥಳಕ್ಕೋ ಆದಷ್ಟು ಬೇಗ ಸೇರಿಕೊಂಡರೇ ಸಾಕಪ್ಪಾ ಎಂದು ನಾವು- ನೀವು ರಸ್ತೆಯ ಮೇಲೆ ನಮ್ಮ, ನಮ್ಮ ಅನುಕೂಲಕ್ಕೆ ತಕ್ಕಂತೆ ಕಾರು – ಬಸ್ಸು – ದ್ವಿಚಕ್ರವಾಹನಗಳ ಮೂಲಕ ತೆರಳಲು ಹಾತೊರೆಯುತ್ತಿರುತ್ತೇವೆ.

ಎಲ್ಲೋ ರಸ್ತೆಯಲ್ಲಿ ಪಟ್ ಅಂತ ವಾಹನಗಳು ತಿಂತು ಬಿಡುತ್ತವೆ. ಏನಾಯ್ತು ಅಂತ ತಲೆ ಎತ್ತಿ ನೋಡಿದ್ರೇ ರೆಡ್ ಸಿಗ್ನಲ್… ಮತ್ತೇನು ಮಾಡೋದು ಅರವತ್ತೋ , 120 ಸೆಕೆಂಡುಗಳೋ ರಸ್ತೆಯಲ್ಲೇ ಮೊಕ್ಕಾಮು…

ಹಾಗೊಮ್ಮೆ ಹೀಗೊಮ್ಮೆ ಅತ್ತಿತ್ತ ಕಣ್ಣಾಡಿಸಿದರೆ ಅಲ್ಲೇ ಹಿಂದೆ ನಿಂತಿರುವ ನೀಲಿ ಸ್ಕೂಟಿಯ ಮೇಲಿನ ಚಂದುಳ್ಳಿಯನ್ನೋ , ಕೆಂಪು ಕಾರಿನೊಳಗೆ ಲಿಫ್ಟಿಕ್ ಸರಿಮಾಡಿ ಕೊಳ್ಳುತ್ತಿರುವ ಗುಳಿಕೆನ್ನೆಯ ಬೆಡಗಿಯನ್ನೋ ಪಡ್ಡೆಗಳು ಸೇರಿದಂತೆ ಅಂಕಲ್ ಗಳು ಓರೆಗಣ್ಣಿನಲ್ಲಿ ನೋಡುತ್ತಿರುತ್ತಾರೆ. ಆಗೆ ಹ್ಯಾಂಡ್ಸಮ್ ಹಂಕ್ ನಂತ ಹುಡುಗರು ಬೈಕ್ ಮೇಲೆ ಕೂತು ಮಿರರ್ ನೋಡಿಕೊಂಡು ಗಾಗಲ್ ಸರಿ ಮಾಡಿಕೊಳ್ಳುತ್ತಿರುವ ಹೃತಿಕ್ , ಯಶ್ , ಸುದೀಪರಂತವರನ್ನು ರೆಪ್ಪೆ ಅಂಚಿನಲ್ಲೇ ನೋಡಿ ಸಿಗ್ನಲ್ ಬಿಟ್ಟ ತಕ್ಷಣ ಕನಸು ಮುಗಿದಂತೆ ದಾರಿ ಸಾಗುವುದನ್ನು ಅವರವರ ಅನುಭವಕ್ಕೆ ತಕ್ಕಂತೆ ನಾವು ನೋಡಿರ ಬಹುದು.

ಇದು ಲೌಕಿಕ ಜೀವನದ ಕಲರ್ ಫುಲ್ ವಲ್ಡ್ ​​​ನಲ್ಲಿ  ಸರ್ವೇ ಸಾಮಾನ್ಯವಾದ ಅಂಶ. ಆದರೆ  ಮೇಲಿನ ಛಾಯ ಚಿತ್ರವನ್ನು ಗಮನಿಸಿ. ಪುಟ್ಟ ಮಗುವೊಂದು ಕೊಳಚೆ ಚರಂಡಿಯ ನೀರನ್ನು ಬೊಗಸೆ ಕೈಗಳಲ್ಲಿ ಎತ್ತಿ ಕೊಡಿಯುತ್ತಿದೆ. ಇದು ನಾಗರೀಕ ಸಮಾಜದ ಅಮಾನವೀಯತೆಗೆ ಹಿಡಿದ ಕೈಗನ್ನಡಿ…., ಸರ್ಕಾರಗಳ ಅಧಕ್ಷತೆ, ಮಾನವ ಹಕ್ಕುಗಳ ಹನನಕ್ಕೆ ಸಾಕ್ಷಿಯಾಗಿದೆ.ಈ ಕಳಗಿನ ಮತ್ತೆರಡು ಚಿತ್ರಗಳು ಇದೇ ಸಾಲಿಗೆ ಸೇರಿವೆ.

ಹೌದು , ಇವು ಕಡಲ ನಗರಿ ಮಂಗಳೂರಿನಲ್ಲಿ ತೆಗೆಯಲಾದ ಛಾಯಚಿತ್ರಗಳು… ಮಂಗಳೂರು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸೌಂದರ್ಯ, ವ್ಯಾಪಾರ , ಬಂದರುಗಳನ್ನು ಹೊಂದಿರುವ ಜಿಲ್ಲೆ. ಈ ಜಿಲ್ಲೆಯಲ್ಲಿ ಸುಳ್ಯ ಎಂಬ ಉಪ ಪಟ್ಟಣವೊಂದಿದೆ. ಈ ಪಟ್ಟಣದ ಯಾವುದೊ ಒಂದು ಬಸ್ ನಿಲ್ದಾಣದ ಬಳಿ ಹವ್ಯಾಸಿ ಫೋಟೋಗ್ರಾಫರ್ ಕ್ಲಿಕ್ಕಿಸಿರುವ ಮನಕಲಕುವ ಭಾವ ಉಳ್ಳ ಚಿತ್ರಗಳು ಇವು.

ರಸ್ತೆಯ ಸಿಗ್ನಲ್​​ ಗಳಲ್ಲಿ ಬಲೂನ್ ಮಾರಾಟ ಮಾಡುವ , ಅಲೆಮಾರಿ ಜನಾಂಗದ ಮಕ್ಕಳ ಪರಿಸ್ಥಿತಿಯನ್ನು ಈ ಚಿತ್ರ ಎಳೆ ಎಳೆಯಾಗಿ ಬಿಡಿಸಿಟ್ಟಿದೆ ಎಂದರೆ ಅತಿಶಯೋಕ್ತಿ ಏನಲ್ಲ… ಭಾವವಿದ್ದರೆ ಭಕ್ತನಿಗೆ ಕಲ್ಲೂ ಕೂಡ ದೇವರ ಪ್ರತಿಮೆಯಾಗುವಂತೆ, ಈ ಚಿತ್ರದಲ್ಲಿ ಮಾನವೀಯತೆ ಉಳ್ಳವರಿಗೆ ಒಂದು ಅಮಾನವೀಯತೆ, ನಾಗರೀಕ ಸಮಾಜ ತಲೆ ತಗ್ಗಿಸಲೇ ಬೇಕಾದ ಅಂಶ ಮುಖಕ್ಕೆ ಮಸಿಬಳಿಯುವಂತ ಭಾಸದೊಂದಿಗೆ ವ್ಯಕ್ತವಾಗುವುದು ಸುಳ್ಳಲ್ಲ.

ಆ ಮಕ್ಕಳ ಕೊಳಕು ಬಟ್ಟೆ, ಅಲ್ಲಲ್ಲಿ ಹರಿದ ಬಟ್ಟೆ​​ಗಳು  , ಕೂದಲು ಕೆದರಿವೆ , ಕಣ್ಣಲ್ಲಿ ಕಾಂತಿಯಿಲ್ಲ, ದೇಹದಲ್ಲಿ ಅಪೌಷ್ಠಿಕತೆಯ ರುದ್ರತಾಂಡವ ಕಾಣುತ್ತಿದ್ದರೇ ಕರುಳು ಚುರುಕ್ ಎನ್ನಿಸುತ್ತದೆ. ಅಂತಹುದರಲ್ಲಿ ಈ ಮುಗ್ಧ ಮಕ್ಕಳ ಸ್ಥಿತಿ ತೀರ ಕೆಳಮಟ್ಟದ್ದಾಗಿದೆ.
ಮಕ್ಕಳು ಹಸಿವೋ , ಬಾಯಾರಿಕೆಯನ್ನೋ ತಡೆಯಲಾಗದೇ ಹೆತ್ತವರ ಅಸಹಾಯಕತೆಯಿಂದ ಅನಿವಾರ್ಯತೆಗೆ ಎದುರಾಗಿ ಚರಂಡಿಯಲ್ಲಿ ನೀರು ಕುಡಿದು ಹಸಿವನ್ನೋ, ದಾಹನ್ನೋ ನೀಗಿಸಿ ಕೊಳ್ಳತ್ತಿದ್ದಾರೆ. ಅಯ್ಯೋ ಇದೆಂತಹ ಸ್ಥಿತಿ ಭಗವಂತ… ಯಾವ ಪಾಪ ಮಾಡಿದವು ಈ ಪುಟಾಣಿ ಮಕ್ಕಳು ಎಂದು ಈ ಶಿಕ್ಷೆ… ಕಣ್ಣು ತೆರೆಯಿರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೇ,ಹೀಗಂತಾ ನಿಮಗೂ ಅನಿಸದೇ ಇರುವುದೇ ನಿಮ್ಮ ಮನಸ್ಸುಗಳು…

ಹೇಳಿ ಒಮ್ಮೆ ನೀವೇ ಹೇಳಿ, ಈ ಪರಿಸ್ಥಿತಿಗೆ ಕಾರಣ ಏನು… ಕಾರಣ ಏನೇ ಇರಲಿ, ಸರ್ಕಾರ ಇಂತವರ ನೆರವಿಗೆ ಧಾವಿಸ ಬೇಕು ಎಂದು ಆಗ್ರಹ ಮಾಡದೇ ಇರಲಾದೀತೆ ನಿಮ್ಮ ಕೈನಲ್ಲಿ… ಆ… ಹೇಳಿ…

ಇದೋ, ಈ ಪೋಟೋ ನೋಡಿ. ಬಿಸಿಲು ಗಾಳಿ ಎಂದು ಲೆಕ್ಕಿಸದೇ ಆ ಪುಟ್ಟ ಹೆಣ್ಣು ಮಕ್ಕಳು ರಸ್ತೆಯಲ್ಲಿಯೇ ಮೈ ಚೆಲ್ಲಿ ಮಲಗಿವೆ. ಇದೇನಾ ಬೇಟಿ ಬಚಾವೋ ಬೇಟಿ ಪಡಾವೋ… ಇದೇನಾ ಸರ್ಕಾರಗಳ ಹಸಿವು ಮುಕ್ತ , ಗುಡಿಸಲು ಮುಕ್ತ ರಾಜ್ಯ ನಿರ್ಮಾಣದ ಕನಸಿನ ಸಾಕಾರ…ಇನ್ನಾದರೂ ಇದು ಬದಲಾಗ ಬೇಕು…

ನಮಗೆ ಗೊತ್ತು. ನಿಮಗೂ ಈ ಚಿತ್ರವನ್ನು ಒಮ್ಮೆ ಒಳಗಣ್ಣಿನಿಂದ ನೋಡಿದರೆ ನೀವೂ ಈ ಹೇಳಿಕೆಯನ್ನು ನೀಡದೇ ಇರಲು ಸಾಧ್ಯವೇ ಇಲ್ಲ.. ಆ ನಂಬಿಕೆ ನನ್ನಲ್ಲಿ ಇದೆ. ಏಕೆಂದ್ರೆ ನಾನು ನೀವು ಇರುವುದು ನಾಗರೀಕ ಸಮಾಜ ಮಾತ್ರವಲ್ಲ, ತಾಯಿ ಹೃದಯಗಳ ತೊಟ್ಟಿಲು ರಾಷ್ಟ್ರ ಭಾರತದಲ್ಲಿ. ಅದರಲ್ಲೂ ಸಂಸ್ಕೃತಿಗೆ ಮಾನವೀಯತೆಗೆ ಹೃದಯ ವೈಶಾಲ್ಯತನಕ್ಕೆ ಉದಾಹರಣೆ ನಮ್ಮ ರಾಜ್ಯವಾದ ಕರ್ನಾಟಕದಲ್ಲಿ…

ದಯವಿಟ್ಟು, ರಸ್ತೆ ಬದಿಗಳಲ್ಲಿ ನಿಮ್ಮ ವಯೋ ಸಹಜ ಮತ್ತು ಸಾಮಾನ್ಯ ದಿನಚರಿಗಳ ಜೊತೆ ಈ ರೀತಿ ರಸ್ತೆ ಬದಿಯಲ್ಲಿ ಕಾಣುವ ಮನಕಲಕುವ ದೃಶ್ಯಗಳನ್ನು ನೋಡಿ.., ಕೈಲಾದಷ್ಟು ಸಹಾಯ ಮಾಡಿ… ಇಲ್ಲ ಒಂದು ಕರೆ … ಆ ಮಕ್ಕಳ ಭವಿಷ್ಯ ಬದಲಾವಣೆ ಮಾಡಿಬಿಡಬಲ್ಲ ಚಮತ್ಕಾರಕ್ಕೆ ಕಾರಣರಾಗಿ… ಆ ಸ್ಥಳದ ಅಕ್ಕಪಕ್ಕದ ಪೊಲೀಸರಿಗೋ , ಮಕ್ಕಳ ಕಲ್ಯಾಣ ಇಲಾಖಾ ಸಿಬ್ಬಂದಿಗಳಿಗೋ, ಜಿಲ್ಲಾ ವರಿಷ್ಠ ಅಧೀಕಾರಿಗಳಿಗೋ ವಿಚಾರ ಮುಟ್ಟಿಸಿ…

ಇವರಿಗೆ ತಲೆ ಕೆಟ್ಟಿದೆ ನಾವು ನಮ್ಮದೇ ಆತುರತೆಯಲ್ಲಿ ಆಫೀಸಿಗೆ , ಕಾಲೇಜಿಗೆ ಅಥವಾ ಮತ್ತೆಲ್ಲಿಗೋ ಹೋಗುತ್ತಿರುತ್ತೇವೆ. ಆ ಸಮಯದಲ್ಲಿ ಮಾನವೀಯತೆ ಅಂತ ನೋಡ್ತಾ ಕೂತರೇ ನಮ್ಮ ಕತೆಯೂ ಅವರಂತೆ ಚಿಂತಾಜನಕವಾಗುತ್ತದೆ ಎಂದು ಬೈದುಕೊಳ್ಳುತ್ತಿದ್ದೀರಾ… ವೇಯ್ಟ್ , ವೇಯ್ಟ್  … ಮೈ ಡಿಯರ್ ಫ್ರೆಂಡ್ಸ್… ಒಳ್ಳೆ ವಾಟ್ಸ್ ಅಪ್ ಸ್ಟೇಟಸ್ ಹಾಕೋಕೆ, ಫೇಸ್ ಬುಕ್ ನಲ್ಲಿ ವೀಡಿಯೋ ನೋಡೋಕೆ , ಮತ್ಯಾರೋ ಚಲನಚಿತ್ರ ನಾಯಕ , ನಾಯಕಿಯ ವಿಡಿಯೋ ಹುಡುಕೋಕೆ, ಸಿನಿಮಾ ಟ್ರೇಲರ್ ಬಿಡುಗಡೆಯಾದ್ರೇ ತೋರಿಸುವ ಉತ್ಸುಕತೆಯನ್ನೇ ನಾವು ರಸ್ತೆಯಲ್ಲಿ ಕಂಡ ಆ ದೃಶ್ಯ ಮತ್ತು ಆ ಮಕ್ಕಳ ಬಗ್ಗೆಯೂ ಒಂದು 10 ನಿಮಿಷ ಸಮಯ ಕೊಟ್ಟರೆ ಸಾಕು.

ಆ ಮಕ್ಕಳೂ ಕೂಡ ನಾಳೆ ದಿನ ನಿಮ್ಮಂತೆ ಮೊಬೈಲ್ ನಲ್ಲಿ ನೀವು ನೋಡುವ ಮನರಂಜನೆಗಳನ್ನು ನೋಡಬಹುದು, ಓದ ಬಹುದು… ಅವರ ಸ್ಥಿತಿಯಲ್ಲಿ ಇರುವ ಬೇರೆ ಮಕ್ಕಳಿಗೂ ಈ ಸ್ಥಿತಿಯಿಂದ ಹೊರ ತರುವ ಋತು ಚಕ್ರಕ್ಕೆ ನೀವು ಸೃಷ್ಠಿಕರ್ತರಾಗಬಹದು… ಅಲ್ಲದೇ ಇಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ಕಡಿಮೆಯಾಗಿ, ಅಭಿವೃದ್ಧಿ ಹೊಂದಿದ ರಾಷ್ಟ್ರದಿಂದ ಬರುವ ಪ್ರವಾಸಿಗರ ಕ್ಯಾಮರಾದಲ್ಲಿ ಭಾರತದ ಬಡತನ ಸೆರೆಯಾಗದಂತೆ ಮಾಡಬುಹುದು… ಚಿಂತಿಸಿ ಚರಿತ್ರೆ ಸೃಷ್ಠಿಸಿ….

ಅಂಕಣ : PSV 

Please follow and like us:
0
http://bp9news.com/wp-content/uploads/2018/07/WhatsApp-Image-2018-07-16-at-2.29.31-PM-2.jpeghttp://bp9news.com/wp-content/uploads/2018/07/WhatsApp-Image-2018-07-16-at-2.29.31-PM-2-150x150.jpegPolitical Bureauಅಂಕಣಪ್ರಮುಖಮಂಗಳೂರುರಾಷ್ಟ್ರೀಯso strange it is !!! Read News: Creating History ... !!!,This is a photographಬೆಂಗಳೂರು : ರಸ್ತೆಯಲ್ಲಿ ಕಿವಿ ಮೂಗು ಮುಚ್ಚಿಕೊಂಡು ಹೊಗೆ ಸಹಿಸಲಾಗದೇ, ಹಾರನ್ ಸದ್ದಿನಿಂದ ವಿಚಲಿತಕ್ಕೆ ಒಳಗಾಗಿ, ಕಚೇರಿಗೋ ಕೈಂಕರ್ಯದ ಸ್ಥಳಕ್ಕೋ ಆದಷ್ಟು ಬೇಗ ಸೇರಿಕೊಂಡರೇ ಸಾಕಪ್ಪಾ ಎಂದು ನಾವು- ನೀವು ರಸ್ತೆಯ ಮೇಲೆ ನಮ್ಮ, ನಮ್ಮ ಅನುಕೂಲಕ್ಕೆ ತಕ್ಕಂತೆ ಕಾರು - ಬಸ್ಸು - ದ್ವಿಚಕ್ರವಾಹನಗಳ ಮೂಲಕ ತೆರಳಲು ಹಾತೊರೆಯುತ್ತಿರುತ್ತೇವೆ. ಎಲ್ಲೋ ರಸ್ತೆಯಲ್ಲಿ ಪಟ್ ಅಂತ ವಾಹನಗಳು ತಿಂತು ಬಿಡುತ್ತವೆ. ಏನಾಯ್ತು ಅಂತ ತಲೆ ಎತ್ತಿ ನೋಡಿದ್ರೇ ರೆಡ್ ಸಿಗ್ನಲ್......Kannada News Portal