ಹಳೇ ಫೋಟೋಗಳು ಒಂದೊಂದು ಕಥೆ ಹೇಳುತ್ತವೆ. ಎಷ್ಟೋ ನೆನಪುಗಳನ್ನು ಮರುಕಳಿಸುತ್ತವೆ. ಅಂದಹಾಗೇ ಕಪ್ಪು ಬಿಳುಪಿನ ಈ ಚಿತ್ರ ನೋಡಿದ್ರೇ ಸಾಕು ನಮ್ಮನ್ನು ಎತ್ತಲೋ ಕರೆದೊಯ್ಯುತ್ತವೆ.  ಈ ಮೇಲಿನ ಫೋಟೋವನ್ನು ನೋಡಿ ಇದರಲ್ಲಿ ಡಾ. ರಾಜ್​  ಕಾಣುತ್ತಾರೆ.  ಅದರಲ್ಲೂ  ಆ ಪೋಟೋ  ಹಿಂದಿನ ರೋಮಂಚನ ಸ್ಟೋರಿ ಗೊತ್ತಾ…?

ಕನ್ನಡದ ನಟ ಸಾರ್ವಭೌಮ ಡಾ. ರಾಜ್​ರ ಅಪರೂಪದ ಫೋಟೋ ಇದು. ಅಪರೂಪದ ಫೋಟೋದಲ್ಲಿ ಯಾರನ್ನಾದ್ರೂ ಗುರುತಿಸಬಲ್ಲಿರಾ..? ಸುಮಾರು 41 ವರ್ಷಗಳ ಹಿಂದೆ ಹಿರಿಯ ಪತ್ರಕರ್ತ ಜೆ. ಕುಮಾರ್​  ಎಂಬುವವರು ಈ ಫೋಟೋ ತೆಗೆದಿರುವುದು.

ಈ ಪೋಟೋ ತೆಗೆದಾಗ ಡಾ. ರಾಜ್​ ಕುಟುಂಬ ಚೆನ್ನೈನ ಟಿ.ನಗರದಲ್ಲಿ ವಾಸಿಸುತ್ತಿದ್ದರಂತೆ. ಒಂದು ಭಾನುವಾರ ಜೆ. ಕುಮಾರ್ ಅವರು​ ಅಣ್ಣಾವ್ರ ಮನೆಗೆ ಊಟಕ್ಕೆಂದು ಹೋಗಿದ್ದರಂತೆ. ಮಧ್ಯಾಹ್ನದ  ಊಟ ಮುಗಿಸಿ ಎಲ್ಲರೂ ಟಿವಿ ಹಾಲ್​ನಲ್ಲಿ ಟಿವಿ ನೋಡುತ್ತಿದ್ದರಂತೆ. ಅಂದು ಕೂಡ ಟಿವಿ ನೋಡುತ್ತಿದ್ದಾಗ ಈ ಫೋಟೋ ಕ್ಲಿಕ್ಕಿಸಿದ್ದಂತೆ. ಅದೇನೇ ಇರಲೀ ಎಷ್ಟು ಖುಷಿಯಾಗುತ್ತದೆ ಈ ಫೋಟೋ ನೋಡಲು. ಎಷ್ಟು ಸರಳವಾಗಿ ನಿಂತಿದ್ದಾರೆ ನಟಸಾರ್ವಭೌಮ ರಾಜಣ್ಣ. ಅವರು ತೆರೆಯ ಮೇಲೆ ಬಾಂಡ್​ ಆಗಿ ಕಾಣಿಸಿಕೊಂಡರೂ ಬಣ್ಣ ತೆಗೆದ ಮೇಲೆ ಎಷ್ಟು ಸರಳವಾಗಿ ಬಿಡುತ್ತಾರೆ ಅಲ್ಲವೇ.

ಈ ಫೋಟೋದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಶಿವರಾಜ್​ ಕುಮಾರ್​,ರಾಘವೇಂದ್ರ ರಾಜ್​ಕುಮಾರ್​,  ಪುತ್ರಿ ಲಕ್ಷ್ಮಿ ಕೂಡ ಇದ್ದಾರೆ.ಇದರಲ್ಲಿ ಶಿವಣ್ಣ, ರಾಘಣ್ಣ ಅವರು ಹೇರ್​ ಸ್ಟೈಲ್​ ಗಮನಿಸಿ,  ಹಿಪ್ಪಿ ಕಟಿಂಗ್​ ಅಂತೆ. ಆ ಕಾಲಕ್ಕೆ ಸಿಕ್ಕಾಪಟ್ಟೆ ಟ್ರೆಂಡ್​ ಅಂತೆ ಈ ಕಟಿಂಗ್​.

Please follow and like us:
0
http://bp9news.com/wp-content/uploads/2018/07/Rajkumar-Old-Pic.jpghttp://bp9news.com/wp-content/uploads/2018/07/Rajkumar-Old-Pic-150x150.jpgBP9 Bureauಸಿನಿಮಾಹಳೇ ಫೋಟೋಗಳು ಒಂದೊಂದು ಕಥೆ ಹೇಳುತ್ತವೆ. ಎಷ್ಟೋ ನೆನಪುಗಳನ್ನು ಮರುಕಳಿಸುತ್ತವೆ. ಅಂದಹಾಗೇ ಕಪ್ಪು ಬಿಳುಪಿನ ಈ ಚಿತ್ರ ನೋಡಿದ್ರೇ ಸಾಕು ನಮ್ಮನ್ನು ಎತ್ತಲೋ ಕರೆದೊಯ್ಯುತ್ತವೆ.  ಈ ಮೇಲಿನ ಫೋಟೋವನ್ನು ನೋಡಿ ಇದರಲ್ಲಿ ಡಾ. ರಾಜ್​  ಕಾಣುತ್ತಾರೆ.  ಅದರಲ್ಲೂ  ಆ ಪೋಟೋ  ಹಿಂದಿನ ರೋಮಂಚನ ಸ್ಟೋರಿ ಗೊತ್ತಾ...? var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute...Kannada News Portal